ಹಬ್ಬದ ಸೀಸನ್ ನಲ್ಲಿ ಹೊಸ ಹೊಸ ಬೈಕ್ ಗಳ ಬಿಡುಗಡೆ: ಸಿಗಲಿದೆ ಭರ್ಜರಿ ರಿಯಾಯತಿ

ಮಾರುಕಟ್ಟೆ ಪ್ರವೇಶಕ್ಕೆ ಕಾಯುತ್ತಿರುವ ಬೈಕ್ ಗಳ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯತಿ ಸಿಗಲಿದೆ.

ಮುಂಬರುವ ಹಬ್ಬದ ಸೀಸನ್ ನಲ್ಲಿ ಅನೇಕ ಹೊಸ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಮಾರುಕಟ್ಟೆ ಪ್ರವೇಶಕ್ಕೆ ಕಾಯುತ್ತಿರುವ ಈ ಬೈಕ್ ಗಳ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯತಿ ಸಿಗಲಿದೆ. ಯಮಹಾ, ಕೆಟಿಎಂ ಮತ್ತು ಹೀರೋ ಮೋಟೋಕಾರ್ಪ್ ನಂತಹ ಕಂಪನಿಗಳು ಖರೀದಿದಾರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬಜಾಜ್, ರಾಯಲ್ ಎನ್‌ಫೀಲ್ಡ್‌ ನಂತಹ ವಾಹನ ತಯಾರಕ ಸಂಸ್ಥೆಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ಬೈಕ್ ಗಳ ಮೇಲೆ ಭರ್ಜರಿ ರಿಯಾಯತಿ ಘೋಷಿಸಿವೆ. ಕೆಲವು ಹೊಸ ಹೊಸ ದೊಡ್ಡ ಬೈಕ್ ಗಳ ಬಿಡುಗಡೆಗೆ ದೇಶದ ಆಟೋಮೊಬೈಲ್ ವಲಯವು ಸಾಕ್ಷಿಯಾಲು ಸಿದ್ಧವಾಗಿದೆ. ನೀವು ಉತ್ತಮ ಬೆಲೆಯಲ್ಲಿ ಬೈಕ್ ಗಳನ್ನು ಖರೀದಿಸಬಹುದಾಗಿದೆ. ಯಮಹಾ, ಕೆಟಿಎಂ ಮತ್ತು ಹೀರೋ ಮೋಟೋಕಾರ್ಪ್ ನಂತಹ ಮೋಟಾರ್‌ಸೈಕಲ್ ಕಂಪನಿಗಳು ಗ್ರಾಹಕರಿಗೆ ಕೆಲವು ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿವೆ.   

2 /5

ಕವಾಸಕಿ ಇಂಡಿಯಾ KLX 110, KLX 140, ಮತ್ತು KX 100 ರೇಸಿಂಗ್ ಬೈಕ್ ಗಳ ಮೇಲೆ ಆಫ್-ರೋಡ್ ವೋಚರ್‌ಗಳನ್ನು ನೀಡುತ್ತಿದೆ. ಈ ರಿಯಾಯಿತಿ 2021ರ ಆಗಸ್ಟ್ 31 ರವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಾಹಕರು 50 ಸಾವಿರ ರೂ.ವರೆಗೆ ಉಳಿಸಬಹುದಾಗಿದೆ.

3 /5

ಯಮಹಾ ಕಂಪನಿ ಕೂಡ ಗ್ರಾಹಕರಿಗೆ ವಿಶೇಷ ಹಬ್ಬದ ರಿಯಾಯತಿ ಘೋಷಿಸಿದೆ. Yamaha Ray 2R 125Fi, Fascion 125Fi ಮತ್ತು RayZR Street Rally ಮೋಟಾರ್‌ಸೈಕಲ್ ಕಾಯ್ದಿರಿಸುವವರಿಗೆ ರಿಯಾಯತಿ ಮತ್ತು ಖಚಿತ ಉಡುಗೊರೆ ಪಡೆದುಕೊಳ್ಳಬಹುದು. ಯಮಹಾ ಸ್ಕ್ರಾಚ್ ಅಂಡ್ ವಿನ್ ಆಫರ್ ನೀಡುತ್ತಿದ್ದು, ಗ್ರಾಹಕರು 2,999 ರೂ. ಮೌಲ್ಯದ ಖಚಿತ ಉಡುಗೊರೆ ಮತ್ತು 1 ಲಕ್ಷ ರೂ.ವರೆಗಿನ ಬಂಪರ್ ಬಹುಮಾನ ಪಡೆಯಬಹುದಾಗಿದೆ.

4 /5

ಬಜಾಜ್ ಸಹಭಾಗಿತ್ವದಲ್ಲಿ ಕೆಟಿಎಂ ಇಂಡಿಯಾ ದೇಶದಲ್ಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸುತ್ತಿದೆ. ಗ್ರಾಹಕರು ಕೆಟಿಎಂ Pro-Experiences ಬೈಕ್ ಮೇಲೆ ಶೇ.50ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು. ಆಸ್ಟ್ರಿಯನ್ ಪ್ರೀಮಿಯಂ ಬೈಕ್ ತಯಾರಕರಿಂದ ವಿಸ್ತೃತ ಖಾತರಿ ಕೊಡುಗೆಗಳ ಜೊತೆಗೆ roadside assistance ಕೂಡ ಸಿಗಲಿದೆ.  

5 /5

ತನ್ನ 10ನೇ ವರ್ಷದ ವಾರ್ಷಿಕೋತ್ಸವ ಆಚರಿಸುವ ವಿಶೇಷ ಸಂದರ್ಭದಲ್ಲಿ ಹೀರೋ ಮೋಟೋಕಾರ್ಪ್ ಸೀಮಿತ ಸಮಯದ ಕೊಡುಗೆಯನ್ನು ಘೋಷಿಸಿತ್ತು. ಹೀರೋ ದ್ವಿಚಕ್ರ ವಾಹನ ತಯಾರಕರು ಆಗಸ್ಟ್ 1 ರಿಂದ ಆಗಸ್ಟ್ 8 ರವರೆಗಿನ ಪ್ರತಿ ಹೊಸ ಬುಕಿಂಗ್ ಮೇಲೆ ಗ್ರಾಹಕರಿಗೆ ನಗದು ಬೋನಸ್‌ಗಳ ಭರವಸೆ ನೀಡಿತ್ತು. ಆಗಸ್ಟ್ 9 ರಂದು ಬೈಕ್ ವಿತರಣೆಯೊಂದಿಗೆ ಅದೃಷ್ಟದ ಗ್ರಾಹಕರು ಬರೋಬ್ಬರಿ 10 ಕೋಟಿ ರೂ. ನಗದು ಬಹುಮಾನ ಗೆಲ್ಲುವ ಅವಕಾಶವಿತ್ತು. ಕೆಲವರು ಈ ಅವಕಾಶವನ್ನು ಮಿಸ್ ಮಾಡಿಕೊಂಡಿರಬಹುದು.