ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಶನಿಯ ಚಲನೆಯಲ್ಲಿ ಬದಲಾವಣೆಯಾದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯೊಂದಿಗೆ ಶಶರಾಜಯೋಗ ರೂಪುಗೊಳ್ಳುತ್ತಿದೆ. ವೈದಿಕ ಜ್ಯೋತಿಷ್ಯದಲ್ಲಿ, ಇದನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ, ಈ ರಾಜಯೋಗದಿಂದ 3 ರಾಶಿಯವರು ವಿಶೇಷ ಪ್ರಯೋಜನ ಪಡೆಯುತ್ತಾರೆ. ಈ ಅವಧಿಯಲ್ಲಿ, ಈ ರಾಶಿಯ ಜನರು ಸಂಪತ್ತು ಮತ್ತು ಗೌರವವನ್ನು ಪಡೆಯಬಹುದು
ಈ ರಾಶಿಚಕ್ರದ ಅಧಿಪತಿ ಗ್ರಹ ಶನಿ. ಹಾಗಾಗಿ ಶಶರಾಜಯೋಗದ ಮೂಲಕ ಇವರ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರುತ್ತದೆ. ನಾಯಕತ್ವ ಸಾಮರ್ಥ್ಯ ಹೆಚ್ಚಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಸಾಡೇಸಾತಿ ನಡೆಯುತ್ತಿದ್ದರೂ ಶನಿ ದೇವ ಸೋಲಲು ಬಿಡುವುದಿಲ್ಲ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ.
ಈ ರಾಶಿಯವರಿಗೆ ಶಶರಾಜಯೋಗವು ಅನುಕೂಲಕರವಾಗಿರಲಿದೆ. ಶನಿದೇವನು ಈ ರಾಶಿಯ ಏಳನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಸಿಂಹ ರಾಶಿಯವರಿಗೆ ಹಠಾತ್ ಧನಲಾಭಾವಾಗುವುದು. ಈ ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಉತ್ತಮ ಸಂಬಂಧವು ರೂಪುಗೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹದ ಹಿನ್ನೆಡೆಯಿಂದಾಗಿ ರೂಪುಗೊಂಡ ಶಶರಾಜಯೋಗವು ಈ ರಾಶಿಯವರಿಗೆ ಅನುಕೂಲಕರ ಫಲವನ್ನು ನೀಡಲಿದೆ. ಆರ್ಥಿಕ ಮತ್ತು ಆಸ್ತಿ ವಿಷಯಗಳಲ್ಲಿ ಲಾಭವಾಗುವುದು. ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಶನಿಯು ಸಾಗುತ್ತಿದೆ. ಈ ಸಮಯದಲ್ಲಿ ವಾಹನ ಅಥವಾ ಆಸ್ತಿ ಖರೀದಿಸಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)