Auspicious Kedar Yog 2023: 5 ಶತಮಾನಗಳ ಬಳಿಕ ರೂಪುಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಹಣದ ಸುರಿಮಳೆ!

Kedar Yog Benefits: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 5 ಶತಮಾನಗಳ ಬಳಿಕ ಏಪ್ರಿಲ್ 23, 2023 ರಂದು ಒಂದು ಅತ್ಯಂತ ಅಪರೂಪದ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಹಲವು ರಾಶಿಗಳ ಜಾತಕದವರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವವನ್ನು ಬೀರಲಿದೆ. 500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿರುವ ಈ ಕೇದಾರ ಯೋಗ ಯಾವ ರಾಶಿಗಳ ಪಾಲಿಗೆ ಅದೃಷ್ಟಕರ ಸಾಬೀತಾಗಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 
 

Formation Of Auspicious Kerdar Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ನವಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಚರಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಈ ಯೋಗಗಳು ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಏಪ್ರಿಲ್ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಒಂದು ಅಪರೂಪದ ಯೋಗದ ಕುರಿತು ಹೇಳುವುದಾದರೆ, ಏಪ್ರಿಲ್ 23, 2023 ರಂದು ಒಂದಲ್ಲ ಎರಡಲ್ಲ ಸುಮಾರು 500 ವರ್ಷಗಳ ಬಳಿಕ ಕೇದಾರ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದ ಕುರಿತು ಹೇಳುವುದಾದರೆ. ಜನ್ಮ ಜಾತಕದ ಒಟ್ಟು ನಾಲ್ಕು ಭಾವಗಳಲ್ಲಿ 7 ಗ್ರಹಗಳು ಬಂದರೆ ಅವು ಅತ್ಯಂತ ಶುಭ ಪಃಲಿತಾಂಶಗಳನ್ನು ನೀಡುತ್ತವೆ ಮತ್ತು ಇದರಿಂದ ಕೇದಾರ ಯೋಗ ರೂಪುಗೊಳ್ಳುತ್ತದೆ. ಜೋತಿಷ್ಯ ಪಂಡಿತರ ಪ್ರಕಾರ ಯಾವುದೇ ಯೋಗವಿರಲಿ ಅಥವಾ ಅವು ಬೀರುವ ಶುಭ-ಅಶುಭ ಫಲಿತಾಂಶಗಳೆ ಆಗಲಿ, ಎಲ್ಲಾ ದ್ವಾದಶ ರಾಶಿಗಳ ಮೇಲೆ ಅವು ತಮ್ಮ ಪ್ರಭಾವವನ್ನು ತೋರುತ್ತವೆ. 

 

ಇದನ್ನೂ ಓದಿ-​ Shash Mahapurush Rajyog: ಶನಿ ನಿರ್ಮಿಸಿರುವ ರಾಜಯೋಗದಿಂದ 2025ರವರೆಗೆ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೇದಾರ ಯೋಗದ ಮಹತ್ವ: ಜೋತಿಷ್ಯ ಶಾಸ್ತ್ರದಲ್ಲಿ ಕೇದಾರ ಯೋಗವನ್ನು ಅತ್ಯಂತ ವಿಶೇಷ ಹಾಗೂ ಅಪರೂಪದ ಶ್ರೇಣಿಯಲ್ಲಿ ಇರಿಸಲಾಗಿದೆ. ಇದನ್ನು ಅತ್ಯಂತ ಲಾಭಕಾರಿ ಯೋಗ ಎಂದು ಭಾವಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದ 4 ಭಾವಗಳಲ್ಲಿ 7 ಗ್ರಹಗಳು ಬಂದಾಗ ಅಂತಹ ಸಂದರ್ಭಗಳಲ್ಲಿ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇಂತಹ  ಪರಿಸ್ಥಿತಿಯಲ್ಲಿ, ಸ್ಥಳೀಯರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಇದಲ್ಲದೇ ವ್ಯಕ್ತಿಯ ಶಾರೀರಿಕ ಸೌಕರ್ಯಗಳು ವೃದ್ಧಿಯಾಗುವುದು, ಆದಾಯ ವೃದ್ಧಿಯಾಗುವುದು, ಸ್ಥಳೀಯರ ಜೀವನದಲ್ಲೂ ಉತ್ತಮ ಫಲಿತಾಂಶ ಕಂಡು ಬರುತ್ತವೆ.  

2 /5

ಕೇದಾರ ಯೋಗದ ಪ್ರಭಾವ: ಯಾವ ವ್ಯಕ್ತಿಯ ಜಾತಕದಲ್ಲಿ ಅತ್ಯಂತ ಶುಭ ಎಂದು ಭಾವಿಸಲಾಗುವ ಈ ಕೇದಾರ ಯೋಗ ರೂಪುಗೊಳ್ಳುತ್ತದೆಯೋ ಅವರಿಗೆ ಭೌತಿಕ ಸುಖ-ಸೌಕರ್ಯಗಳು ಪ್ರಾಪ್ತಿಯಾಗುತ್ತವೆ. ಇಂತಹ ಜಾತಕದವರಿಗೆ ಜೀವನದಲ್ಲಿ ಮಾತೃ ಸುಖ ಕೂಡ ಪ್ರಾಪ್ತಿಯಾಗುತ್ತದೆ. ಇವರಿಗೆ ಭೂಮಿಯಿಂದ ಅಪಾರ ಧನ ಪ್ರಾಪ್ತಿಯಾಗುತ್ತದೆ ಮತ್ತು ಇವರು ಯಾವಾಗಲೂ ಸತ್ಯವನ್ನೇ ನುಡಿಯುವವರಾಗುತ್ತಾರೆ. ಕೃಷಿ ಕ್ಷೇತ್ರದಲ್ಲಿ ಇವರು ಹೊಸ ಸಾಧನೆಯನ್ನು ಮಾಡುವವರಾಗಿರುತ್ತಾರೆ. ಈ ಬಾರಿ ನಿರ್ಮಾಣಗೊಳ್ಳುತ್ತಿರುವ ಕೇದಾರ ಯೋಗ ಒಟ್ಟು ಮೂರು ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಇದರಿಂದ ಅವರ ಜೀವನದಲ್ಲಿ ಅಪಾರ ಹಣ ಹರಿದುಬಂದು ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  

3 /5

ಮೇಷ ರಾಶಿ: ಮೇಷ ರಾಶಿಯ ಸಂಕ್ರಮಣ ಜಾತಕದಲ್ಲಿ ಸೂರ್ಯ, ಗುರು, ರಾಹು, ಬುಧ ಲಗ್ನ ಭಾವದಲ್ಲಿ ವಿರಾಜಮಾನರಾಗಿದ್ದು, ದ್ವಿತೀಯ ಭಾವದಲ್ಲಿ ಶುಕ್ರ, ತೃತೀಯ ಭಾವದಲ್ಲಿ ಮಂಗಳ ಮತ್ತು ಚಂದ್ರ ಒಟ್ಟಿಗೆ ಇದ್ದಾರೆ, ಏಕಾದಶ ಭಾವದಲ್ಲಿ ಶನಿದೇವ ಇರಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯ ಜನರು ಹಠಾತ್ ಧನ ಲಾಭ ಪಡೆಯುವ ಬಲವಾದ ಅವಕಾಶವನ್ನು ಹೊಂದಿರುತ್ತಾರೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಕೂಡ ಹೆಚ್ಚಾಗಲಿದೆ. ನೀವು ಮಾಡಲು ಬಯಸುವ ಯಾವುದೇ ಕೆಲಸ-ಕಾರ್ಯದಲ್ಲಿ ನಿಮಗೆ ಅಪಾರ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.  ದೀರ್ಘ ಕಾಲದಿಂದ ಯಾವುದಾದರೊಂದು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಲಗ್ನ ಭಾವದಲ್ಲಿ ಸೂರ್ಯ, ಗುರು ಮತ್ತು ತೃತೀಯ ಭಾವದಲ್ಲಿ ಮಂಗಳನ ಉಪಸ್ಥಿತಿಯನ್ನು ಹೊಂದಿದ್ದರೆ, ಅದು ಆತನ ಪಾಲಿಗೆ ರಾಜಯೋಗವನ್ನು ಸೃಷ್ಟಿಸುತ್ತದೆ. ಹೀಗಿರುವಾಗ, ಈ ಸಮಯವು ಮೇಷ ರಾಶಿಯವರಿಗೆ ಎಲ್ಲಾ ಅರ್ಥದಲ್ಲಿ ಬಹಳ ಅದ್ಭುತವಾಗಿದೆ. ಏಪ್ರಿಲ್ 23 ರಿಂದ ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.  

4 /5

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೂ ಕೂಡ ಈ ಕೇದಾರ ಯೋಗ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಎಕೆಂದ್ರೆ ನಿಮ್ಮ ಜಾತಕದಲ್ಲಿ ಈ 7 ಗ್ರಹಗಳು ಸಪ್ತಮ, ನವಮ, ದಶಮ ಮತ್ತು ಲಾಭದ ಸ್ಥಾನದಲ್ಲಿ ಇರಲಿವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಯಾವುದೇ ಕೆಲಸವನ್ನು ಅರ್ಥಮಾಡಿಕೊಂಡು, ಯೋಚಿಸಿ ಮಾಡಿದರೆ ಅದರಲ್ಲಿ ಯಶಸ್ಸು ಮತ್ತು ಲಾಭ ಖಂಡಿತ ಸಿಗುತ್ತದೆ. ನೀವು ಬಹಳ ಸಮಯದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದರೆ, ಏಪ್ರಿಲ್ 23 ರ ನಂತರ ನಿಮಗೆ ಒಳ್ಳೆಯ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಉದ್ಯೋಗದಲ್ಲಿರುವವರು ಈ ಅವಧಿಯಲ್ಲಿ ಉದ್ಯೋಗ ಬಡ್ತಿ, ಇನ್‌ಕ್ರಿಮೆಂಟ್ ಅಥವಾ ಅವರು ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆಯಬಹುದು. ಉದ್ಯಮಿಗಳ ಪಾಲಿಗೂ ಕೂಡ ಈ ಯೋಗ ಸಾಕಷ್ಟು ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಯೋಜಿಸಬಹುದು ಮತ್ತು ನೀವು ಅದರಲ್ಲಿ ಯಶಸ್ಸನ್ನು ಕೂಡ ಕಾಣುವಿರಿ.   

5 /5

ಧನು ರಾಶಿ : ಧನು ರಾಶಿಯ ಜಾತಕದವರ ಪಾಲಿಗೂ ಕೂಡ ಕೇದಾರ ಯೋಗ ಅತ್ಯಂತ ಮಂಗಳಕರ ಹಾಗೂ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಏಳು ಗ್ರಹಗಳು ಧನು ರಾಶಿಯ ಸಂಕ್ರಮಣದ ಜಾತಕದ ತೃತೀಯ, ಪಂಚಮ, ಷಷ್ಟಮ ಮತ್ತು ಸಪ್ತಮ ಭಾವದಲ್ಲಿದ್ದುಕೊಂಡು  ಕೇದಾರ ಯೋಗವನ್ನು ರೂಪಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಾಲಿಗೆ ಈ ಸಮಯವು ಹೂಡಿಕೆ ಮಾಡಲು, ಲಾಟರಿ ವ್ಯವಹಾರದಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಲು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತುಂಬಾ ಮಂಗಳಕರ ಮತ್ತು ಅನುಕೂಲಕರವಾಗಿರುತ್ತದೆ. ಇದಲ್ಲದೆ, ನಿಮ್ಮ ಹಣಕಾಸಿನ ಭಾಗವು ಅತ್ಯುತ್ತಮವಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ದೀರ್ಘಕಾಲದ ನ್ಯಾಯಾಲಯ ಪ್ರಕರಣ ನಡೆಯುತ್ತಿದ್ದರೇ, ತೀರ್ಪು ನಿಮ್ಮ ಪರವಾಗಿ ಪ್ರಕಟವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಬಾಳಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರಲಿದೆ. ನೀವು ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ ಮತ್ತು ನೀವು ಅವರೊಂದಿಗೆ ಪೂರ್ವ ನಿರ್ಧಾರವಲ್ಲದ ಪ್ರವಾಸ ಅಥವಾ ವಿಹಾರಕ್ಕೆ ಹೋಗಲು ಯೋಜಿಸಬಹುದು. ಒಟ್ಟಾರೆಯಾಗಿ, ಈ ಸಮಯವು ನಿಮಗೆ ಅದ್ಭುತವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)