Dhan Rajyyog: ಜೋತಿಷ್ಯ ಶಾಸ್ತ್ರದ ಪ್ರಕಾರ 50 ವರ್ಷಗಳ ಸುದೀರ್ಘ ಅವಧಿಯ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ ಶುಕ್ರ 'ಮಹಾಧನ ರಾಜಯೋಗ ನಿರ್ಮಿಸಿದ್ದು, ಇದರಿಂದ ಮೂರು ರಾಶಿಗಳ ಸ್ಥಳೀಯರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳಾಗಲಿವೆ. ಇದರಿಂದ ಈ ಮೂರೂ ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ ಹಾಗೂ ಜೀವನದಲ್ಲಿ ಅಪಾರ ಉನ್ನತಿ ಪ್ರಾಪ್ತಿಯಾಗಲಿದೆ.
Mahadhan Rajyog: ವೈದಿಕ ಜೋತಿಷ್ಯ ಪಂಚಾಗದ ಪ್ರಕಾರ ನವಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಗಳನ್ನು ಪರಿವರ್ತಿಸುವ ಮೂಲಕ ತನ್ನ ಉಚ್ಛ ಅಥವಾ ಉನ್ನತ ಮತ್ತು ಸ್ವ ರಾಶಿಯಲ್ಲಿ ಪ್ರವೇಶಿಸುತ್ತವೆ, ಇದರ ನೇರ ಪ್ರಭಾವ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಜಾತಕದವರ ಮೇಲೆ ಉಂಟಾಗುತ್ತದೆ. ಇತ್ತೀಚೆಗಷ್ಟೇ ವೈಭವ ಫಲದಾತ ಶುಕ್ರ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಿದ್ದು, ಇದರಿಂದ 'ಮಹಾಧನ ರಾಜಯೋಗ' ರೂಪುಗೊಂಡಿದೆ. ಈ ಅವಧಿಯಲ್ಲಿ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯಾಗಲಿದ್ದು, ಅವರ ಘನತೆ ಗೌರವದಲ್ಲಿ ಅಪಾರ ಹೆಚ್ಚಳವಾಗಿ, ಜೀವನದಲ್ಲಿ ಅವರ ಭಾಗ್ಯೋದಯವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೃಷಭ ರಾಶಿ: 'ಧನ ರಾಜಯೋಗ' ವೃಷಭ ರಾಶಿಯ ಜಾತಕದವರ ಪಾಲಿಗೆ ಅಪಾರ ಅನುಕೂಲಕರ ಸಿದ್ಧ ಸಾಬೀತಾಗಲಿದ್ದು, ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ನಿಮ್ಮ ಗೋಚರ ಜಾತಕದ ನವಾಂಶದ ಅಧಿಪತಿ ದಶಾಂಶ ಭಾವ ಅಂದರೆ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ಏಪ್ರಿಲ್ 6 ರಂದು ಶುಕ್ರ ಕೂಡ ಲಗ್ನ ಭಾವಕ್ಕೆ ಎಂಟ್ರಿ ನೀಡಿದ್ದು, ನಿಮ್ಮ ಗೋಚರ ಜಾತಕದಲ್ಲಿ ಶಶ, ಮಾಲವ್ಯ ಹಾಗೂ ಲಕ್ಷ್ಮಿ ಯೋಗಗಳು ನಿರ್ಮಾಣಗೊಂಡಿವೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ-ಹೊಸ ಮೂಲಗಳು ಕೂಡ ನಿರ್ಮಾಣಗೊಳ್ಳಲಿವೆ. ನೌಕರ ವರ್ಗದ ಜನರಿಗೆ ಪದೋನ್ನತಿಯಾಗುವ ಸಾಧ್ಯತೆ ಇದೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ.
ಮಕರ ರಾಶಿ: ಶುಕ್ರನಿಂದ ನಿರ್ಮಾಣಗೊಂಡ ಈ ಮಹಾ ಧನ ರಾಜಯೋಗ ಮಕರ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಎಕೆಂದರೆ ನಿಮ್ಮ ಗೋಚರ ಜಾತಕದ ಅದೃಷ್ಟದ ಭಾವಕ್ಕೆ ಬುಧ ಅಧಿಪತಿಯಾಗಿದ್ದು, ಆತ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ಈ ಕೇಂದ್ರ ಭಾವಕ್ಕೆ ಏಪ್ರಿಲ್ 6 ರಂದು ಶುಕ್ರನ ಎಂಟ್ರಿ ಕೂಡ ನೆರವೇರಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ. ಅದರಲ್ಲಿಯೂ ವಿಶೇಷವಾಗಿ ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಲಾಭ ಉಂಟಾಗಲಿದೆ. ಇನ್ನೊಂದೆಡೆ ಶನಿ ಮಹಾರಾಜ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ವಿರಾಜಮಾನನಾಗಿದ್ದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ಇದೆ. ಆದರೆ, ಈ ಅವಧಿಯಲ್ಲಿ ತಾಯಿಯ ಆರೋಗ್ಯದ ಕಡೆಗೆ ಗಮನಹರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.
ಕುಂಭ ರಾಶಿ: ಶುಕ್ರ ನಿರ್ಮಿಸಿರುವ ಈ ಧನರಾಜ ಯೋಗ ನಿಮ್ಮ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಭಾಗ್ಯೇಶ ಶುಕ್ರನಾಗಿದ್ದು, ಆತ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮ್ಮ ಗೋಚರ ಜಾತಕದಲ್ಲಿ ಕೇಂದ್ರ ತ್ರಿಕೋನ ಹಾಗೂ ಮಾಲವ್ಯ ರಾಜಯೋಗಗಳು ನಿರ್ಮಾಣಗೊಂಡಿವೆ. ಜೊತೆಗೆ ಧನ ರಾಜಯೋಗ ಕೂಡ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿದ್ದು. ತಾಯಿ ಲಕ್ಷ್ಮಿಯ ಅಪಾರ ಕೃಪಾದೃಷ್ಟಿ ನಿಮ್ಮ ಮೇಲಿರಲಿದೆ. ಇದರಿಂದ ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸ-ಕಾರ್ಯಗಳಿಗೆ ಅಪಾರ ಪ್ರಶಂಸೆ ವ್ಯಕ್ತವಾಗಲಿದ್ದು, ನಿಮ್ಮ ಆತ್ಮವಿಶ್ವಾಸ ಬಲಗೊಳ್ಳಲಿದೆ. ಇದಲ್ಲದೆ ನಿಮ್ಮೊಳಗೆ ಅಡಗಿರುವ ಪ್ರತಿಭೆ ಕೂಡ ಜನರ ಮುಂದೆ ಬರಲಿದೆ. ಈ ಅವಧಿಯಲ್ಲಿ ನೀವು ವಿದೇಶಕ್ಕೆ ಸುತಾಡಲು ಹೋಗುವ ಪ್ಲಾನ್ ಕೂಡ ಮಾಡಬಹುದು. ಆದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಏಕೆಂದರೆ ಶನಿಯ ಸಾಡೇಸಾತಿ ಇನ್ನೂ ಸಂಪೂರ್ಣ ಕೊನೆಗೊಂಡಿಲ್ಲ ಎಂಬುದನ್ನು ನೆನಪಿನಲ್ಲಿಡಿ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)