ಚಂದ್ರ ಗ್ರಹಣ ಹೊತ್ತು ತರುವುದು ಈ ರಾಶಿಯವರಿಗೆ ಅದೃಷ್ಟ! ಒಳ್ಳೆಯ ದಿನಗಳು ಅಂದಿನಿಂದಲೇ ಆರಂಭ

Chandra Grahan 2023 impact : ವರ್ಷದ ಮೊದಲ ಚಂದ್ರಗ್ರಹಣವು ಮೇ 5ರ ಶುಕ್ರವಾರ ಸಂಭವಿಸಲಿದೆ. ಮೇ 5ರಂದು ರಾತ್ರಿ 8.44ಕ್ಕೆ ಚಂದ್ರಗ್ರಹಣ ಆರಂಭವಾಗಿ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ. 

Chandra Grahan 2023 impact on zodiac signs : ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಬಹಳ ಮಹತ್ವವಿದೆ. ಗ್ರಹಣ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಇದೇ ಕಾರಣಕ್ಕೆ ಗ್ರಹಣ ಮತ್ತು ಗ್ರಹಣ ಸೂತಕ ಕಾಲದಲ್ಲಿ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ವರ್ಷದ ಮೊದಲ ಚಂದ್ರಗ್ರಹಣವು ಮೇ 5ರ ಶುಕ್ರವಾರ ಸಂಭವಿಸಲಿದೆ. ಮೇ 5ರಂದು ರಾತ್ರಿ 8.44ಕ್ಕೆ ಚಂದ್ರಗ್ರಹಣ ಆರಂಭವಾಗಿ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವೈಶಾಖ ಪೂರ್ಣಿಮೆಯ ದಿನದಂದು ವರ್ಷದ ಮೊದಲ ಚಂದ್ರಗ್ರಹಣ  ಗೋಚರಿಸಲಿದೆ. ವೈಶಾಖ ಪೂರ್ಣಿಮೆಯನ್ನು ಬುದ್ಧ ಪೂರ್ಣಿಮ ಎಂದೂ ಕರೆಯುತ್ತಾರೆ. ಈ ದಿನ ಭಗವಾನ್ ಬುದ್ಧನ ಜನನವಾಯಿತು ಎನ್ನಲಾಗುತ್ತದೆ. ಈ ಬಾರಿ ಇದೇ ದಿನದಂದು ವರ್ಷದ ಮೊದಲ ಚಂದ್ರಗ್ರಹಣ  ಗೋಚರಿಸಲಿದ್ದು, ಮೂರು ರಾಶಿಯವರ ಜೀವನದಲ್ಲಿ ಅದರ ಶುಭ ಫಲ ಕಾಣಿಸುತ್ತದೆ. 

2 /4

ಮೇಷ ರಾಶಿ : ಈ ಚಂದ್ರಗ್ರಹಣದ ನಂತರ ಮೇಷ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಈ ರಾಶಿಯವರ ಗಮನ ಕೆಲಸದಲ್ಲಿ ಹೆಚ್ಚು ಕೇಂದ್ರಿಕೃತವಾಗುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ಹೊಸ ಉದ್ಯೋಗ ದೊರೆಯಬಹುದು. ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ.  ಒಟ್ಟಾರೆಯಾಗಿ, ಈ ಸಮಯವು ಅನುಕೂಲಕರವಾಗಿರುತ್ತದೆ. 

3 /4

ಸಿಂಹ ರಾಶಿ : ವರ್ಷದ ಮೊದಲ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ಭಾರಿ ಲಾಭವನ್ನು ತರುತ್ತದೆ. ಅರ್ಧಕ್ಕೆ ನಿಂತು ಹೋಗಿರುವ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣಗೊಳ್ಳುವುದು. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. 

4 /4

ಮಕರ ರಾಶಿ : ಈ ಚಂದ್ರಗ್ರಹಣವು ಮಕರ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿಯನ್ನು ನೀಡುತ್ತದೆ. ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗಲಿದೆ. ಹೊಸ ಉದ್ಯೋಗ ದೊರೆಯಲಿದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗುತ್ತದೆ. ಹಳೆಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.  ಹೊಸ ಮನೆ-ಕಾರು ಅಥವಾ ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)