40ರ ಪ್ರಾಯದ ಬಳಿಕ ಕಾಣಿಸಿಕೊಳ್ಳುವ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಋತುಬಂಧದ ಸಮಯದಲ್ಲಿ, ಮಹಿಳೆಯರು ಕೂದಲು ಉದುರುವಿಕೆ, ಕೂದಲು ತೆಳುವಾಗುವುದು, ತಲೆಹೊಟ್ಟು  ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು, ಮಹಿಳೆಯರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಬೆಂಗಳೂರು : ನಮ್ಮ ದೇಹ, ಚರ್ಮ ಮತ್ತು ಕೂದಲು ದೈನಂದಿನ ಗಡಿಬಿಡಿಯ ಜೀವನಶೈಲಿಯಿಂದ ಅತಿಯಾಗಿ ಬಳಲುತ್ತವೆ. ಮಾಲಿನ್ಯ, ಒತ್ತಡ, ಯುವಿ ಕಿರಣಗಳಿಂದ ಉಂಟಾಗುವ ಹಾನಿ, ರಾಸಾಯನಿಕಗಳಿಂದ ತುಂಬಿದ ಆಹಾರ ಮತ್ತು ದೇಹದಲ್ಲಿನ ಪೋಷಕಾಂಶಗಳ ಕೊರತೆಯು ಕೂದಲಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವರು ಈ ಸಮಸ್ಯೆಗಳನ್ನು  ತುಸು ಹೆಚ್ಚಾಗಿಯೇ ಎದುರಿಸಬೇಕಾಗುತ್ತದೆ. ಅವರ ಕೂದಲು ಇತರರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಶುಷ್ಕವಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಋತುಬಂಧದ ಸಮಯದಲ್ಲಿ, ಮಹಿಳೆಯರು ಕೂದಲು ಉದುರುವಿಕೆ, ಕೂದಲು ತೆಳುವಾಗುವುದು, ತಲೆಹೊಟ್ಟು  ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು, ಮಹಿಳೆಯರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಬಹುದು. ಅಲ್ಲದೆ, ವಯಸ್ಸಿನೊಂದಿಗೆ ನಿಮ್ಮ ಕೂದಲಿನ ಆರೈಕೆಯಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. 

2 /5

ಆಯುರ್ವೇದದ ಪ್ರಕಾರ, ನಮ್ಮ ದೇಹದ ಕಾರ್ಯಗಳನ್ನು ಮೂರು ಪ್ರಮುಖ ಶಕ್ತಿಗಳಿಂದ ನಿಯಂತ್ರಿಸಲಾಗುತ್ತದೆ. ವಾತ, ಪಿತ್ತ ಮತ್ತು ಕಫ. ಪ್ರತಿಯೊಬ್ಬ ವ್ಯಕ್ತಿಯು 'ತ್ರಿದೋಷ' ಸಂಯೋಜನೆಯನ್ನು ಹೊಂದಿರುತ್ತಾನೆ. ದೇಹದ ಭಾಗದಲ್ಲಿರುವ ಕೂದಲಿನ ಆರೋಗ್ಯವೂ ಈ ಪ್ರಕೃತಿ ದೋಷಗಳ ಮೇಲೆ ಅವಲಂಬಿತವಾಗಿದೆ. ವಾತ ದೋಷ ಹೆಚ್ಚಾದಂತೆ ಕೂದಲು ಮತ್ತು ನೆತ್ತಿ ಹೆಚ್ಚು ಒಣಗುತ್ತದೆ. ಮತ್ತೊಂದೆಡೆ, ಪಿತ್ತ ದೋಷದಲ್ಲಿ, ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ನೆತ್ತಿಯಲ್ಲಿ ತುರಿಕೆ, ಕೂದಲು ಉದುರುವುದು, ಕೂದಲಿನ ಕಿರುಚೀಲಗಳಲ್ಲಿ ಬ್ಯಾಕ್ಟೀರಿಯಾದ ಶೇಖರಣೆಯಂತಹ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ವಭಾವ ದೋಷವನ್ನು ಗುರುತಿಸಿ ಮತ್ತು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ.  

3 /5

ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಅದರಲ್ಲಿ ತೇವಾಂಶವನ್ನು ಉಳಿಯುತ್ತದೆ. ಆಯುರ್ವೇದದ ಪ್ರಕಾರ, ಶಾಂಪೂ ಮಾಡುವ ಮೊದಲು ಕೂದಲು ಮತ್ತು ನೆತ್ತಿಯನ್ನು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಬೇಕು. ಆಮ್ಲಾ, ರೀಟಾ, ಶಿಕಾಕಾಯಿ, ತುಳಸಿ ಮತ್ತು ಬೇವಿನಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಗಿಡಮೂಲಿಕೆ ತೈಲಗಳನ್ನು ಸಹ ಇದಕ್ಕಾಗಿ ಬಳಸಬಹುದು. ಯಾವುದೇ ಆಯುರ್ವೇದ ಅಥವಾ ನೈಸರ್ಗಿಕ ಎಣ್ಣೆಯನ್ನು  ಲಘುವಾಗಿ ಬೆಚ್ಚಗಾಗಿಸಿ ನೆತ್ತಿಯ ಮೇಲೆ ಮೃದುವಾಗಿ ಮಸಾಜ್ ಮಾಡಿ. ಇದು ಕೂದಲಿಗೆ ಪೋಷಣೆಯನ್ನು ನೀಡುತ್ತದೆ ಮತ್ತು ಕೂದಲನ್ನು ಬುಡದಿಂದ ತುದಿಯವರೆಗೆ ಬಲಪಡಿಸುತ್ತದೆ.  

4 /5

ಬಲವಾದ ಮತ್ತು ಉದ್ದನೆಯ ಕೂದಲಿಗೆ ಆರೋಗ್ಯಕರ ಆಹಾರವು ಬಹಳ ಮುಖ್ಯ. ಆರೋಗ್ಯಕರ ಆಹಾರದಿಂದ ಪೋಷಕಾಂಶಗಳು ಕೂದಲಿನ ಬೇರುಗಳನ್ನು ಒಳಗಿನಿಂದ ಪೋಷಿಸುತ್ತವೆ ಮತ್ತು ಬಲಪಡಿಸುತ್ತವೆ. ಇದರೊಂದಿಗೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಕೂಡಾ ಮುಖ್ಯ. ದಿನಕ್ಕೆ 2-3 ಲೀಟರ್ ನೀರು ಕುಡಿಯುವುದನ್ನು ಹೊರತುಪಡಿಸಿ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

5 /5

ಮಾಲಿನ್ಯದಿಂದ ಕೂದಲನ್ನು ರಕ್ಷಿಸಿ. ಬಿಸಿಲು ಮತ್ತು ಧೂಳಿನಿಂದ ರಕ್ಷಿಸಲು ಕೂದಲನ್ನು ಕವರ್ ಮಾಡಿ. ಹಗಲಿನಲ್ಲಿ ಹೆಚ್ಚು ಹೊತ್ತು ಹೊರಗೆ ಇರಬೇಕಾದರೆ ಮತ್ತು ನಿಮ್ಮ ಕೂದಲು ಬಿಸಿಲಿಗೆ ಹೆಚ್ಚು ತೆರೆದುಕೊಂಡಿದ್ದರೆ, ಅದನ್ನು ಕಟ್ಟಿಕೊಳ್ಳಿ ಮತ್ತು ಸ್ಕಾರ್ಫ್ನಿಂದ ಮುಚ್ಚಿ.