ಬುಧ ಸೂರ್ಯನೊಂದಿಗೆ ಸೇರಿಕೊಂಡು ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ರಾಜಯೋಗವು ಮೂರು ರಾಶಿಯವರಿಗೆ ಭಾರೀ ಶುಭ ಫಲವನ್ನು ನೀಡುತ್ತದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಯಾವುದೇ ರಾಶಿಚಕ್ರದ ಚಿಹ್ನೆಯಲ್ಲಿ ಎರಡು ಗ್ರಹಗಳ ಸಂಯೋಜನೆಯು ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ. ಇಂದು ನಾವು ಸೂರ್ಯ ಮತ್ತು ಬುಧ ಸಂಯೋಗದ ಪರಿಣಾಮವನ್ನು ತಿಳಿಯೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಏಪ್ರಿಲ್ 14 ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಸಾಗುತ್ತಾನೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದಾಗ, ಈಗಾಗಲೇ ಆ ರಾಶಿಯಲ್ಲಿರುವ ಬುಧ ಸೂರ್ಯನೊಂದಿಗೆ ಸೇರಿಕೊಂಡು ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ರಾಜಯೋಗವು ಮೂರು ರಾಶಿಯವರಿಗೆ ಭಾರೀ ಶುಭ ಫಲವನ್ನು ನೀಡುತ್ತದೆ.
ಸೂರ್ಯ ಮತ್ತು ಬುಧನ ಸಂಯೋಜನೆಯು ಈ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಿರಲಿದೆ. ನಿಮ್ಮ ರಾಶಿಯ ಅದೃಷ್ಟದ ಮನೆಯಲ್ಲಿ ಈ ಯೋಗ ರೂಪುಗೊಳ್ಳುವುದರಿಂದ ಅದೃಷ್ಟ ನಿಮ್ಮ ಜೊತೆಗೆಯೇ ಇರಲಿದೆ. ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಬಡ್ತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಕಂಡುಬರುತ್ತದೆ. ಬುಧನು ಸಂಪತ್ತು ಮತ್ತು ಆದಾಯದ ಮನೆಯ ಅಧಿಪತಿ. ಅಂತಹ ಪರಿಸ್ಥಿತಿಯಲ್ಲಿ, ಆದಾಯದಲ್ಲಿ ಭಾರೀ ಹೆಚ್ಚಳವಾಗಬಹುದು. ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗಲಿವೆ.
ಬುಧಾದಿತ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮ್ಮ ರಾಶಿಯ ಕರ್ಮದ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಸೂರ್ಯ ದೇವರು ಸಂಪತ್ತಿನ ಅಧಿಪತಿ ಮತ್ತು ಬುಧ ಈ ರಾಶಿಯ 12 ನೇ ಮನೆ ಮತ್ತು 3 ನೇ ಮನೆಗೆ ಅಧಿಪತಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ವೃತ್ತಿ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳ ಆದಾಯದಲ್ಲಿ ಹೆಚ್ಚಳವಾಗುವ ಲಕ್ಷಣಗಳಿವೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಈ ರಾಜಯೋಗವು ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯ ಲಗ್ನದ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಮಕ್ಕಳಿಂದ ಕೆಲವು ಶುಭ ಸಮಾಚಾರ ಸಿಗಬಹುದು. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)