ಇನ್ನು ಹತ್ತೇ ದಿನಗಳಲ್ಲಿ ಈ ರಾಶಿಯವರ ಕನಸೆಲ್ಲಾ ನನಸಾಗುವುದು ! ಹೋದಲೆಲ್ಲಾ ಜೊತೆಗಿರುವುದು ಅದೃಷ್ಟ

ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ.

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಬ್ಬರ ಭವಿಷ್ಯವು ಗ್ರಹ ಮತ್ತು ರಾಶಿ ಫಲಗಳ ಅನುಸಾರವಾಗಿ ನಿರ್ಧಾರವಾಗುತ್ತದೆ. ಗ್ರಹಗಳು ಚಲಿಸುವ ಮೂಲಕ ತಮ್ಮ ರಾಶಿಯನ್ನು ಬದಲಾಯಿಸುತ್ತಿರುತ್ತವೆ. ಈ ರೀತಿ ಗ್ರಹಗಳ ಸ್ಥಾನದಲ್ಲಿ ಆಗುವ ಬದಲಾವಣೆ  ದ್ವಾದಶ ರಾಶಿಯವರ ಜೀವನದ ಮೇಲೆಯೂ ಕಾಣಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಅಂಥಹ ಒಂದು ಸಂಯೋಗವು  ಏಪ್ರಿಲ್ 22 ರಿಂದ ರೂಪುಗೊಳ್ಳಲಿದೆ. 

2 /5

ಬುಧ ಗ್ರಹವು ಮಾರ್ಚ್ 31 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ.    ದೇವಗುರು ಗುರುವು ಕೂಡಾ ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ  ಸಂಕ್ರಮಿಸಲಿದೆ. ಹೀಗಾಗಿ ಮೇಷ ರಾಶಿಯಲ್ಲಿ ಬುಧ-ಗುರುವಿನ  ಸಂಯೋಗವಿರುತ್ತದೆ. ಇದು ಮೂರು ರಾಶಿಯವರ ಜೀವನವನ್ನು ಬೆಳಗಲಿದೆ. 

3 /5

ಗುರು ಮತ್ತು ಬುಧದ ಸಂಯೋಜನೆಯು ಮೇಷ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ. ಈ ಸಮಯದಲ್ಲಿ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.  ಪಾರ್ಟನರ್ ಶಿಪ್ ನಲ್ಲಿ ಮಾಡುವ ಕೆಲಸಗಳು ಯಶಸ್ಸಿಗೆ ಕಾರಣವಾಗುತ್ತವೆ.

4 /5

ಮಿಥುನ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಹಣಕಾಸಿನ ಪ್ರಯೋಜನವಾಗುವುದು. ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ಈ ಸಮಯದಲ್ಲಿ ನನಸಾಗಬಹುದು. ಹಳೆಯ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ. 

5 /5

ಕರ್ಕಾಟಕ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ, ಈ ರಾಶಿಯವರು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಅಪಾರ ಲಾಭವನ್ನು ಪಡೆಯುತ್ತಾರೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರ ಆಸೆ ಈಡೇರುತ್ತದೆ ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)