Lalit Modi Daughter: ಇವರೇ ನೋಡಿ ಸುಶ್ಮಿತಾ ಸೇನ್ ಬಾಯ್‌ಫ್ರೆಂಡ್ ಲಲಿತ್ ಮೋದಿ ಮಗಳು..!

ಅಲಿಯಾ ಮೋದಿ ಅವರು ಉದ್ಯಮಿ ಲಲಿತ್ ಮೋದಿಯವರ ದಿವಂಗತ ಪತ್ನಿ ಮಿನಲ್ ಮೋದಿ ಅವರ ಪುತ್ರಿ. ಬಾಲಿವುಡ್ ನಟಿ ಸುಶ್ಮೀತಾ ಸೇನ್ ಜೊತೆಗೆ ತಾವು ಡೇಟಿಂಗ್ ಮಾಡುತ್ತಿರುವುದಾಗಿ ಲಲಿತ್ ಮೋದಿ ಘೋಷಿಸಿದ ತಕ್ಷಣವೇ ಅವರ ಪುತ್ರಿಯ ಬಗ್ಗೆಯೂ ವ್ಯಾಪಕ ಚರ್ಚೆಗಳಾಗುತ್ತಿವೆ.

ನವದೆಹಲಿ: ಮಾಜಿ ಐಪಿಎಲ್ ಅಧ್ಯಕ್ಷ ಮತ್ತು ಉದ್ಯಮಿ ಲಲಿತ್ ಮೋದಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಜುಲೈ 14ರಂದು ಸುಶ್ಮಿತಾ ಅವರೊಂದಿಗಿರುವ ತಮ್ಮ ಚಿತ್ರಗಳನ್ನು ಲಲಿತ್ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.   

ಈ ಜೋಡಿ ಡೇಟಿಂಗ್ ನಡೆಸುತ್ತಿರುವುದು ಮತ್ತು ಒಟ್ಟಾಗಿ ಇರುವ ಫೋಟೋಗಳನ್ನು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇವರಿಗೆ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ..? ಇದೆಲ್ಲಾ ದುಡ್ಡಿನ ಮಹಿಮೆ ಅಂತಾ ಅನೇಕರು ಮಾತಾಡಿಕೊಂಡಿದ್ದರು. ಬಾಲಿವುಡ್ ಮಂದಿ ಕೂಡ ಈ ಜೋಡಿಯ ಡೇಟಿಂಗ್ ಸುದ್ದಿ ಕೇಳಿ ದಂಗಾಗಿದೆ. ಲಂಡನ್‍ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಲಲಿತ್ ಮೋದಿ ಜೊತೆಗೆ ಸುಶ್ಮಿತಾ ಸೇನ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. 

ನಟಿ ಸುಶ್ಮಿತಾಗೆ ರೆನೀ ಮತ್ತು ಅಲಿಸಾ ಎಂಬ ಇಬ್ಬರು ದತ್ತು ಪುತ್ರಿಯರಿದ್ದರೆ, ನಟಿಯ ಬಾಯ್‍ಫ್ರೆಂಡ್ ಲಲಿತ್ ಮೋದಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಮೊದಲ ಪತ್ನಿ ದಿವಂಗತ ಮಿನಲ್ ಮೋದಿಯವರಿಗೆ ಜನಿಸಿದ್ದರೆ, ಇನ್ನೊಬ್ಬಳು ಮಲಮಗಳಿದ್ದಾಳೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಅಲಿಯಾ ಮೋದಿ ಅವರು ಉದ್ಯಮಿ ಲಲಿತ್ ಮೋದಿಯವರ 29 ವರ್ಷದ ಮಗಳು.

2 /4

1991ರಲ್ಲಿ ಮಿನಲ್ ಮತ್ತು ಲಲಿತ್ ಮೋದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಆಲಿಯಾ ಮೋದಿ ಜನಿಸಿದರು. ದುರದೃಷ್ಟವಶಾತ್ ಮಿನಲ್ ಅವರು ಕ್ಯಾನ್ಸರ್ ನಿಂದ 2018ರಲ್ಲಿ ನಿಧನ ಹೊಂದಿದರು.

3 /4

ಅಲಿಯಾ ಮೋದಿ ಇತ್ತೀಚೆಗೆ ತಮ್ಮ ಗೆಳೆಯ ಬ್ರೆಟ್ ಕಾರ್ಲ್ಸೆನ್ ಅವರನ್ನು ವಿವಾಹವಾದರು. ತಂದೆ ಲಲಿತ್ ಮೋದಿ ಅವರು ಮೇ 2022ರಲ್ಲಿ ತಮ್ಮ ಅಧಿಕೃತ Instagram ಖಾತೆಯಲ್ಲಿ ನವವಿವಾಹಿತ ಜೋಡಿಯ ಚಿತ್ರಗಳನ್ನು ಹಂಚಿಕೊಂಡಿದ್ದರು.

4 /4

ಅಲಿಯಾ ಮೋದಿ ಅವರು ಲಂಡನ್ ಮೂಲದ ಒಳಾಂಗಣ ವಿನ್ಯಾಸ ಸಲಹಾ ಸಂಸ್ಥೆ(Interior Design Consultancy)ಯ ಸ್ಥಾಪಕರಾಗಿದ್ದಾರೆ.