Samantha: ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯೋ ಸಮಂತಾ ಮೊದಲ ಸಂಬಳ ಇದು.!

Samantha First Salary: ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಲು ಸಮಂತಾ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಸಮಂತಾ ಪಡೆದ ಮೊದಲ ಸಂಭಾವನೆ ಕೇಳಿದ್ರೆ ಎಲ್ಲರಿಗೂ ಒಂದು ಕ್ಷಣ ಶಾಕ್‌ ಆಗೋದು ಪಕ್ಕಾ. 

Samantha First Salary: ಸಮಂತಾ ಇಂದು ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾದು ನಿಲ್ಲುವ ಪರಿಸ್ಥಿತಿ ಇದೆ. ಸೌತ್‌ ಸಿನಿರಂಗದ ಬ್ಯೂಟಿ ಕ್ವೀನ್ ನಟಿ ಸಮಂತಾ ರುತ್‌ ಪ್ರಭು ಅಂದಕ್ಕೆ ಮನಸೋಲದವರಿಲ್ಲ. ಸದ್ಯ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಲು ಸಮಂತಾ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಸಮಂತಾ ಪಡೆದ ಮೊದಲ ಸಂಭಾವನೆ ಕೇಳಿದ್ರೆ ಎಲ್ಲರಿಗೂ ಒಂದು ಕ್ಷಣ ಶಾಕ್‌ ಆಗೋದು ಪಕ್ಕಾ... 

1 /5

ಪ್ರತಿಯೊಬ್ಬ ವ್ಯಕ್ತಿಗೆ ಅವರ ಮೊದಲ ಸಂಬಳ ಮತ್ತು ಕೆಲಸ ಜೀವನದುದ್ದಕ್ಕೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ನಟ-ನಟಿಯರು ಸಹ ತಮ್ಮ ಮೊದಲ ಸಂಬಳದ ಬಗ್ಗೆ ಹಲವು ಬಾರಿ ಹೇಳಿಕೊಳ್ಳುತ್ತಾರೆ. ಹಾಗೆಯೇ ಸಮಂತಾ ಮೊದಲ ಸಂಬಳ ಮತ್ತು ಕೆಲಸದ ಬಗ್ಗೆ ಇಲ್ಲಿದೆ ಮಾಹಿತಿ.

2 /5

ಕೆಲ ದಿನಗಳ ಹಿಂದೆ ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಓರ್ವ ಅಭಿಮಾನಿ ಸಮಂತಾ ಅವರ ಮೊದಲ ಸಂಬಳ ಮತ್ತು ಕೆಲಸದ ಪ್ರಶ್ನಿಸಿದ್ದಾರೆ. ನಟಿ ಸಮಂತಾ ಸಹ ಇದಕ್ಕೆ ಉತ್ತರಿಸಿದ್ದಾರೆ. 

3 /5

10 ಅಥವಾ 11ನೇ ತರಗತಿಯಲ್ಲಿ ಓದುತ್ತಿರುವಾಗ ಹೋಟೆಲ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಹೊಸ್ಟೆಸ್ ಆಗಿ 8 ಗಂಟೆ ಕೆಲಸ ಮಾಡಿದ್ದೆ. ಅಂದು ನನಗೆ 500 ರೂಪಾಯಿ ನೀಡಿದ್ದರು. ಅದೇ ನನ್ನ ಮೊದಲ ಸಂಬಳ ಎಂದು ಹೇಳಿಕೊಂಡಿದ್ದಾರೆ.

4 /5

ಶಾಲೆಯಲ್ಲಿದ್ದಾಗ ನಟಿ ಸಮಂತಾ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದರಂತೆ. ಅದಕ್ಕಾಗಿ ಅವರಿಗೆ ದಿನದ ಭತ್ಯೆಯೆಂದು 500 ರುಪಾಯಿ ನೀಡಲಾಗಿತ್ತು. 2010 ರಲ್ಲಿ 'ಯೇ ಮಾಯಾ ಚೇಸೇ' ಸಿನಿಮಾ ಮೂಲಕ ನಟಿ ಸಮಂತಾ ವೃತ್ತಿಜೀವನವನ್ನು ಆರಂಭಿಸಿದರು. ಇದಾದ ಬಳಿಕ 'ರಂಗಸ್ಥಳಂ', 'ಕತ್ತಿ', 'S/o ಸತ್ಯಮೂರ್ತಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

5 /5

ಇತ್ತೀಚೆಗಷ್ಟೆ ಬಿಡುಗಡೆಯಾದ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದರು. 3 ನಿಮಿಷಕ್ಕೆ 5 ಕೋಟಿ ಸಂಭಾವನೆ ಪಡೆಯುವ ಬ್ಯೂಟಿ ಕ್ವೀನ್‌ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯಸಿಯಾಗಿದ್ದಾರೆ.