ಖ್ಯಾತ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ!? ಕೊನೆಗೂ ಸತ್ಯ ರಿವೀಲ್‌ ಮಾಡಿಯೇಬಿಟ್ರು ಕರುನಾಡ ಮೋಹಕ ತಾರೆ

Actress Ramya statement about marriage: ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್‌ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್‌ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ

2 /6

42 ವರ್ಷವಾದ್ರೂ ಇನ್ನೂ ಸಿಂಗಲ್‌ ಆಗಿರುವ ನಟಿ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅದೇ ವಿಚಾರವೊಂದನ್ನು ಟ್ರೋಲ್‌ ಪೇಜ್‌ವೊಂದು ಪೋಸ್ಟ್‌ ಮಾಡಿತ್ತು. ಆ ಪೋಸ್ಟ್‌ ಜೊತೆಗೆ ಹಲವಾರು ದಿನಗಳಿಂದ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕೊನೆಗೂ ರಮ್ಯಾ ಮೌನ ಮುರಿದಿದ್ದಾರೆ  

3 /6

ಕಳೆದ ನವೆಂಬರ್‌ನಲ್ಲಿ ನಟಿ ರಮ್ಯಾ, ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ರಮ್ಯಾ ಅವರಿಗೆ ಉದ್ಯಮಿ ಸಂಜೀವ್‌ ಅವರು ಬರ್ತ್‌ ಡೇ ವಿಶ್‌ ಮಾಡಿದ್ದರು. “ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್‌ ಯೂ ಫಾರೆವರ್‌, ನಿನ್ನೊಂದಿಗೆ ಪ್ರವಾಸಕ್ಕೆ ಹೋಗುವುದು ಎಂದೆಂದಿಗೂ ನನಗೆ ಅದ್ಭುತ” ಎಂಬರ್ಥದಲ್ಲಿ ಬರೆದುಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದರು. ಆ ಕ್ಯೂಟ್‌ ಪೋಸ್ಟ್‌ಗೆ ರಮ್ಯಾ ಪ್ರತಿಕ್ರಿಯಿಸಿ "ಲವ್‌ ಯೂ ಸನಾ ಎಂದು ಹೇಳಿದ್ದರು  

4 /6

ಅಂದಹಾಗೆ ಇಬ್ಬರೂ ಉತ್ತಮ ಸ್ನೇಹಿತರು. ಈ ಹಿಂದೆ ರಮ್ಯಾ ಮತ್ತು ಸಂಜೀವ್‌ ಅವರು ಜತೆಯಾಗಿ ಪ್ರವಾಸ ಹೋಗಿದ್ದಲ್ಲದೆ, ಕ್ರಿಕೆಟ್‌ ಪಂದ್ಯವನ್ನು ಕೂಡ ಜೊತೆಯಾಗಿ ವೀಕ್ಷಣೆ ಮಾಡಿದ್ದರು. ಆ ಸಂದರ್ಭದಲ್ಲೂ ಕೂಡ ಇವರಿಬ್ಬರ ಬಗ್ಗೆ ಗಾಸಿಪ್‌ ಹಬ್ಬಿತ್ತು. ಆದರೆ ಇದೀಗ ಈ ಎಲ್ಲಾ ವದಂತಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ ರಮ್ಯಾ.  

5 /6

“ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ! ಇವರು ರಮ್ಯಾ ಅವರನ್ನು ಪ್ರೀತಿಯಿಂದ divs ಅಂತ ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ. ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣ್ರಪ್ಪ” ಎಂದು ರಮ್ಯಾ – ಸಂಜೀವ್‌ ಅವರ ಫೋಟೋ ಎಡಿಟ್‌ ಮಾಡಿ ಟ್ರೋಲ್‌ ಪೇಜ್‌ವೊಂದು ಪೋಸ್ಟ್‌ ಶೇರ್‌ ಮಾಡಿತ್ತು. ಇದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್‌ ಮಾಡಿದ್ದ ರಮ್ಯಾ, "ಫೇಕ್‌" ಎಂದು ಬರೆದುಕೊಂಡಿದ್ದಾರೆ.  

6 /6

ಕೊನೆಗೂ ಇಷ್ಟು ದಿನಗಳಿಂದ ಹರಿದಾಡುತ್ತಿದ್ದ ವದಂತಿ ಹಾಗೂ ಗೊಂದಲಕ್ಕೆ ಒಂದೇ ಶಬ್ದದಲ್ಲಿ ತೆರೆ ಎಳೆದಿದ್ದಾರೆ. ಇದಲ್ಲದೆ ಸಜಗ್‌ ಕೂಡ ಈ ಬಗ್ಗೆ ತನಿಖೆ ನಡೆಸಿದ್ದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.