Actress Prema: ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್‌ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!

Actress Prema Husband: ನಟಿ ಪ್ರೇಮಾ 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು.. ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಇವರು ಸದ್ಯ ಸಿನಿರಂಗದಿಂದ ದೂರ ಉಳಿದಿದ್ದಾರೆ.. ಇದೇ ವೇಳೆ ನಟಿಯ ಪತಿ ಹಾಗೂ ಡಿವೋರ್ಸ್‌ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎನ್ನುವುದ ಇಂಟ್ರೆಸ್ಟಿಂಗ್‌ ಮಾಹಿತಿ ಹೊರಬಿದ್ದಿದೆ.. 

1 /5

ಕನ್ನಡ ಚಿತ್ರರಂಗದ ನಟಿ ಪ್ರೇಮಾ 2006 ರಲ್ಲಿ ಐಟಿ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಚಲನಚಿತ್ರಗಳಿಂದ ದೂರವಿದ್ದು, ತಮ್ಮ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದರು.   

2 /5

ಮದುವೆಯಾಗಿ ಕೆಲವು ವರ್ಷಗಳ ನಂತರ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳು ಇಬ್ಬರ ಮಧ್ಯ ತಲೆದೂರಿದ್ದರ ಹಿನ್ನೆಲೆಯಲ್ಲಿ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.. ಹೀಗಾಗಿ ನಟಿ 10 ವರ್ಷಗಳ ನಂತರ ಅಂದರೇ 2016 ರಲ್ಲಿ ತಮ್ಮ ಪತಿಯಿಂದ ಬೇರ್ಪಟ್ಟರು.   

3 /5

ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ, ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ಸ್ಯಾಂಡಲ್‌ವುಡ್ ಮೂರನೇ ನಟಿ..    

4 /5

ಕಳೆದ ಹಲವು ದಿನಗಳಿಂದ ನಟಿ ಪ್ರೇಮಾ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಮತ್ತೆ ಮದುವೆಯಾಗಲಿದ್ದಾರೆ ಎಂಬ ವರದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ನಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ..   

5 /5

ಇನ್ನು ಪ್ರೇಮಾ ಅವರು ಸವ್ಯಸಾಚಿ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಎದುರು ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು..