Aamir Khan Jessica Hines affair: 2003 ರಲ್ಲಿ ಬ್ರಿಟಿಷ್ ಪತ್ರಕರ್ತೆಯೊಬ್ಬರು ತಮ್ಮ ಮಗನ ತಂದೆ ಅಮೀರ್ ಖಾನ್ ಎಂದು ಹೇಳಿದ್ದರು. ಇದು ಅಮಿರ್ ಖಾನ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಎರಡು ಬಾರಿ ಮದುವೆಯಾಗಿದ್ದು, ಎರಡನೇ ಮದುವೆ ಕೂಡ ವಿಚ್ಛೇದನದಲ್ಲೇ ಕೊನೆಗೊಂಡಿದೆ. ಅಮೀರ್ ಖಾನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಐರಾ ಖಾನ್ ಮತ್ತು ಮಗ ಆಜಾದ್.
ಸುಮಾರು 5 ವರ್ಷಗಳ ಹಿಂದೆ ಅಮೀರ್ ಖಾನ್ 'ಕಾಫಿ ವಿತ್ ಕರಣ್' ಶೋ ಗೆ ಬಂದಾಗ, ಕರಣ್ ಜೋಹರ್ ಅವರು ಯಾರಿಗಾದರೂ ಸಂಬಂಧದಲ್ಲಿ ಮೋಸ ಮಾಡಿದ್ದೀರಾ ಅಥವಾ ಒಂದೇ ಸಮಯದಲ್ಲಿ ಇಬ್ಬರೊಂದಿಗೆ ಡೇಟಿಂಗ್ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದರು.
ಅಮೀರ್ ಆ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದರು. ತನ್ನ ಹೆಂಡತಿಗೆ ಆಗಾಗ್ಗೆ ಸುಳ್ಳು ಹೇಳುವುದನ್ನು ಒಪ್ಪಿಕೊಂಡಿದ್ದರು. ಆದರೆ ತಾನು ಯಾರಿಗೆ ಮೋಸ ಮಾಡಿದ್ದೇನೆ ಎಂಬ ಸಂಗತಿಯನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.
ಅಮೀರ್ ಖಾನ್ಗೆ ಬ್ರಿಟಿಷ್ ಪತ್ರಕರ್ತೆಯೊಂದಿಗೆ ಸಂಬಂಧವಿತ್ತು ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿತ್ತು. ಪತ್ರಕರ್ತೆ ಜೆಸ್ಸಿಕಾ ಮತ್ತು ಅಮೀರ್ ಗುಲಾಮ್ ಸಿನಿಮಾ ಸೆಟ್ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇಲ್ಲಿಂದ ಅವರ ಮಧ್ಯೆ ಪ್ರೇಮ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದರು. ಅಮೀರ್ ಜೊತೆ ಬಹಳ ಕಾಲ ಸಂಬಂಧದಲ್ಲಿದ್ದ ಜೆಸ್ಸಿಕಾ ತಾನು ಅಮೀರ್ ನ ಮಗುವಿನ ತಾಯಿಯಾಗಲಿದ್ದರು ಎಂದು ಹೇಳಲಾಗುತ್ತದೆ.
ಜೆಸ್ಸಿಕಾ ತಾನು ಅಮೀರ್ ಜೊತೆ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈ ಸಮಯದಲ್ಲಿ ಜೆಸ್ಸಿಕಾ ಗರ್ಭಿಣಿಯಾಗಿದ್ದರು ಎನ್ನಲಾಗುತ್ತದೆ.
ಇದನ್ನು ಯಾರಿಗೂ ಹೇಳದೆ ಮಗುವಿಗೆ ಅಬಾರ್ಷನ್ ಮಾಡಿಸು ಎಂದು ಅಮೀರ್ ಸಲಹೆ ನೀಡಿದ್ದರಂತೆ ಎಂದು ಜೆಸ್ಸಿಕಾ ಆರೋಪಿಸಿದ್ದರು. ಜೆಸ್ಸಿಕಾ ಅಬಾರ್ಷನ್ ಮಾಡಿಸಲು ಒಪ್ಪಲಿಲ್ಲ. ನಂತರ ಅವರು ಲಂಡನ್ಗೆ ಹೋದರು.