Radhika Pandit: ಟೀಚರ್​ ಆಗಲು ಹೊರಟಿದ್ದ ನಟಿ ರಾಧಿಕಾ ಪಂಡಿತ್ ​ನಟಿ​ಯಾಗಿದ್ದೇ ಬಲು ರೋಚಕ! ಮೊದಲ ಸಿನಿಮಾದಲ್ಲೇ ನಡೆದಿತ್ತು ದೊಡ್ಡ ದುರಂತ!!

Sandalwood Actress Radhika Pandit: ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರತಿಭಾನ್ವಿತ ನಟ-ನಟಿಯರು ಬಂದು ಹೋಗಿದ್ದಾರೆ.. ಈಗಲೂ ಕಲಾಸೇವೆ ಮಾಡುತ್ತಿರವವರು ಇದ್ದಾರೆ.. ಅಂತಹ ನಾಯಕಿಯರಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಒಬ್ಬರು.. ನಂದ ಗೋಕುಲ ಸಿರೀಯಲ್‌ನಿಂದ ಶುರುವಾದ ರಾಧಿಕಾ ಪಂಡಿತ್‌ ನಟನಾ ಜರ್ನಿ ಸದ್ಯ ದೊಡ್ಡ ಹಂತಕ್ಕೆ ತಂದು ನಿಲ್ಲಿದೆ.. ಇವರು ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ ರಮ್ಯಾ, ರಕ್ಷಿತಾ ನಂತರ ಕನ್ನಡ ಚಿತ್ರರಂಗವನ್ನು ಇದೇ ರಾಧಿಕಾ ಪಂಡಿತ್..‌ 
 

1 /7

ಯಶ್‌ ಮಡದಿ ರಾಧಿಕಾ ಎಲ್ಲರಿಗೂ ಗೊತ್ತು.. ಆದರೆ ನಟಿ ರಾಧಿಕಾ ಪಂಡಿತ್‌ ಆಗಿ ಸಿನಿರಂಗಕ್ಕೆ ಎಂಟ್ರಿಕೊಟ್ಟಿದ್ದು ಹೇಗೆ? ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿದ್ದು ಹೇಗೆ ಎನ್ನುವುದು ಎಷ್ಟೋ ಜನರಿಗೆ ತಿಳಿದಿಲ್ಲ..      

2 /7

ನಟಿ ರಾಧಿಕಾ ಪಂಡಿತ್‌ಗೆ ಸಿನಿರಂಗ ಪ್ರವೇಶಿಸಲು ಸಹಾಯ ಮಾಡಿದ್ದೆ ಕಿರುತೆರೆ ಲೋಕ.. ನಂದಗೋಕುಲ ಸಿರೀಯಲ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚಲುವೆ ಈ ಧಾರಾವಾಹಿಯಿಂದ ಸಖತ್‌ ಫೇಮಸ್‌ ಆದರು.. ಮುಂದೆ ನಟಿಯ ಜೀವನವನ್ನು ಸಂಪೂರ್ಣ ಬದಲಿಸಿದ್ದು ಮೊಗ್ಗಿನ ಮನಸ್ಸು ಸಿನಿಮಾ..      

3 /7

2008ರಲ್ಲಿ ಬಿಡುಗಡೆಯಾದ ಈ ಮೊಗ್ಗಿನ ಮನಸ್ಸು ಸಿನಿಮಾ ಇಬ್ಬರು ಪ್ರತಿಭಾನ್ವಿತ ಕಲಾವಿದರನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿತು.. ಇದೇ ಚಿತ್ರದ ಮೂಲಕ ರಾಕಿಂಗ್‌ ಸ್ಟಾರ್‌ ಯಶ್‌ ಸಹ ರಾಧಿಕಾ ಪಂಡಿತ್‌ ಜೊತೆ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಕೊಟ್ಟಿದ್ದರು..     

4 /7

ಮೊದಲ ಸಿನಿಮಾದಿಂದಲೇ ಸಾಕಷ್ಟು ಮನ್ನಣೆ ಗಳಿಸಿದ ರಾಧಿಕಾ ಪಂಡಿತ್‌ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡರು.. ನಂತರ ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಿದರು..       

5 /7

ನಟಿಯ ಬಾಲ್ಯದ ಜೀವನವನ್ನು ನೋಡುವುದಾದರೇ ರಾಧಿಕಾ ಪಂಡಿತ್‌ ಹುಟ್ಟಿದ್ದು ಬೆಂಗಳೂರಿನಲ್ಲಿ.. ಇವರ ತಂದೆಯ ಹೆಸರು ಕೃಷ್ಣ ಪ್ರಸಾದ್‌ ಪಂಡಿತ್..‌ ತಾಯಿಯ ಹೆಸರು ನಂದನಾ.. ನಂತರ ಬೆಂಗಳೂರಿನಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದ ನಟಿಗೆ ಇದ್ದಿದ್ದು ಒಂದೇ ಆಸೆ.. ತಾನು ಶಿಕ್ಷಕಿಯಾಗಬೇಕೆನ್ನುವುದು.. ಆದರೆ ಅಲ್ಲಿ ಅವರ ನಿರ್ಧಾರ ತೆಲೆಕೆಳಗಾಗಿ ನಿರ್ದೇಶಕರಿಂದ ಬಿಗ್‌ ಆಫರ್‌ವೊಂದು ಈಕೆಗೆ ಒಲಿದು ಬಂತು..       

6 /7

ಹೌದು 2007 ಬಿಕಾಂ ಪದವಿ ಓದುತ್ತಿದ್ದ ರಾಧಿಕಾ ಪಂಡಿತ್‌ಗೆ ನಿರ್ದೇಶಕ ಅಶೋಕ್‌ ಕಶ್ಯಪ್‌ ಕಾಲ್‌ ಮಾಡಿ ನಂದಗೋಕುಲ ಸಿರೀಯಲ್‌ ಆಫರ್‌ ನೀಡುತ್ತಾರೆ.. ಇಲ್ಲಿಂದಲೇ ಈ ಚೆಲುವೆಯ ಲಕ್‌ ಬದಲಾಗುತ್ತೆ.. ನಂತರ ಇದೇ ವರ್ಷ ನಟನೆಗೂ ಕಾಲಿಡುತ್ತಾರೆ..     

7 /7

18th ಕ್ರಾಸ್‌ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.. ಆದರೆ ಈ ಸಿನಿಮಾ ನಿರ್ಮಾಪಕರು ಸಾವನ್ನಪ್ಪಿದ್ದರಿಂದ ಶೂಟಿಂಗ್ ನಿಂತು ಹೋಗುತ್ತದೆ.. ಬಳಿಕ ಒಲಿದು ಬಂದಿದ್ದೆ ಮೊಗ್ಗಿನ ಮನಸ್ಸು ಆಫರ್..‌