Salman Khan: ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಬಣದಿಂದ ಬೆದರಿಕೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ಗೆ ಭಾರೀ ಭದ್ರತೆಯನ್ನು ನೀಡಲಾಗಿತ್ತು. ಈ ಎಲ್ಲದರ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಬಣದಿಂದ ಬೆದರಿಕೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ಗೆ ಭಾರೀ ಭದ್ರತೆಯನ್ನು ನೀಡಲಾಗಿತ್ತು. ಈ ಎಲ್ಲದರ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ.
ಸಲ್ಮಾನ್ ಖಾನ್ ಅವರಿಗೆ ಸದ್ಯ 58 ವರ್ಷ ವಯಸ್ಸು, ಮದುವೆ ಮಾತ್ರ ಇನ್ನೂ ಆಗಿಲ್ಲ. ಈ ಕಾರಣದಿಂದಲೇ ಸಲ್ಲು ಮದುವೆ ಬಗ್ಗೆ ಹಲವಾರು ವದಂತಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಅದರಂತೆ ಮತ್ತೊಂದು ಸುದ್ದಿ ವೈರಲ್ ಆಗಿದೆ.
ಸಲ್ಮಾನ್ ಖಾನ್ ದೇಶದ ಪ್ರಖ್ಯಾತ ಆಟಗಾರ್ತಿಯೊಬ್ಬರ ಕೈಹಿಡಿಯಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆಕೆಗಿದು ಎರಡನೇ ಮದುವೆಯಂತೆ. ಅಷ್ಟಕ್ಕೂ ಆಕೆ ಯಾರು? ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ತಿಳಿದುಕೊಳ್ಳೋಣ.
ಸಲ್ಲು ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿರುವುದು ಸಾನಿಯಾ ಮಿರ್ಜಾ ಜೊತೆ. ಈಕೆ ಸದ್ಯ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ಶೋಯೆಬ್ ಮಲಿಕ್ನಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಎರಡನೇ ಮದುವೆಯಾಗ್ತಿದ್ದಾರೆ ಎಂದು ಭಾರೀ ವದಂತಿ ಹಬ್ಬಿತ್ತು. ಇದೀಗ ಸಲ್ಮಾನ್ ಜೊತೆ ಸಾನಿಯಾ ಹೆಸರು ತಳುಕು ಹಾಕುತ್ತಿದೆ.
ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಏನೋ ಇದೆ ಎಂಬುದು ನೆಟ್ಟಿಗರ ಅನುಮಾನ. ಆದರೆ ಇವರಿಬ್ಬರು ಕ್ಲೋಸ್ ಫ್ರೆಂಡ್ಸ್. ಈ ಬಗ್ಗೆ ಸ್ವತಃ ಟೆನಿಸ್ ತಾರೆ ಸಾನಿಯಾ ಹೇಳಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಮದುವೆಯಾಗುತ್ತಾರೆ ಎಂಬ ಸುದ್ದಿ ವದಂತಿಯಲ್ಲದೆ ಬೇರೇನೂ ಅಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಅಂತೆಯೇ ಸಂತೋಷ ಮತ್ತು ದುಃಖದಲ್ಲಿ ಒಟ್ಟಿಗೆ ಕಾಣುತ್ತಾರೆ.
ಈ ಹಿಂದೆ ಸಾನಿಯಾ ಮಿರ್ಜಾ ಅವರ ಪುಸ್ತಕ ಬಿಡುಗಡೆಗೆ ಸಲ್ಮಾನ್ ಖಾನ್ ಸಾಕಷ್ಟು ಬೆಂಬಲ ನೀಡಿದ್ದರು. ಇದಲ್ಲದೇ ಲಾಂಚ್ ಆದ ದಿನ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಈ ವೇಳೆ ಸಾನಿಯಾ ಮಿರ್ಜಾ ತುಂಬಾ ಖುಷಿಯಾಗಿರುವುದನ್ನು ಕಂಡ ಜನರು ಇವರಿಬ್ಬರ ನಡುವೆ ಏನೋ ಗುಸುಗುಸು ಇದೆ ಎಂದು ಭಾವಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.