Money Vastu Tips: ಪರ್ಸ್‌ನಲ್ಲಿ ಈ ವಸ್ತುಗಳಿದ್ದರೆ ಎಂದಿಗೂ ಕಾಡಲ್ಲ ಹಣದ ಕೊರತೆ

ಪರ್ಸ್ ಯಾವಾಗಲೂ ಹಣದಿಂದ ತುಂಬಿರಲು, ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತುವಿನ ಪ್ರಕಾರ, ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ. 

Money Vastu Tips: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಎಷ್ಟು ದುಡಿದರೂ ನಿತ್ಯ ಜೀವನ ಮಾಡುವಷ್ಟು ಸಹ ಹಣ ಸಾಕಾಗುವುದಿಲ್ಲ ಎಂಬಂತಾಗಿದೆ. ತಿಂಗಳ ಅಂತ್ಯದ ವೇಳೆಗೆ, ಹೆಚ್ಚಿನ ಜನರ ಜೇಬು ಖಾಲಿಯಾಗಿರುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ಪರ್ಸ್ ಯಾವಾಗಲೂ ಹಣದಿಂದ ತುಂಬಿರಲು, ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತುವಿನ ಪ್ರಕಾರ, ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ತಿಳಿಯೋಣ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಣದ ಕೊರತೆಯನ್ನು ನೀಗಿಸಲು ವಾಸ್ತು ಶಾಸ್ತ್ರದಲ್ಲಿ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಈ ಅನುಕ್ರಮದಲ್ಲಿ, ಕೆಲವು ವಿಶೇಷ ವಸ್ತುಗಳು ಯಾವಾಗಲೂ ಪರ್ಸ್‌ನಲ್ಲಿರಬೇಕು ಎಂದು ನಂಬಲಾಗಿದೆ. ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ  ಹಣದ ಕೊರತೆಯಾಗುವುದಿಲ್ಲ ಮತ್ತು ಇದರ ಹೊರತಾಗಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎನ್ನಲಾಗಿದೆ.  ಆದರೆ, ನೆನಪಿಡಿ ಆ ಪರ್ಸ್ ಎಂದಿಗೂ ಚರ್ಮದಿಂದ ಮಾಡಿರಬಾರದು. ಚರ್ಮದ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. 

2 /5

ಕಮಲದ ಬೀಜ: ವಾಸ್ತು ಶಾಸ್ತ್ರದಲ್ಲಿ, ಕಮಲದ ಬೀಜಗಳನ್ನು ಬಹಳ ವಿಶೇಷವೆಂದು ವಿವರಿಸಲಾಗಿದೆ. ಲಕ್ಷ್ಮಿ ಕಮಲ ಪ್ರಿಯೆ. ಕಮಲದ ಬೀಜವು ಲಕ್ಷ್ಮಿ ದೇವಿಯನ್ನು ಸಂತೋಷವಾಗಿರಿಸುತ್ತದೆ ಎಂದು ನಂಬಲಾಗಿದೆ. ಪರ್ಸ್ ನಲ್ಲಿ ಕಮಲದ ಬೀಜ ಇಡುವುದರಿಂದ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಇದು ಆರ್ಥಿಕ ಲಾಭವನ್ನು ನೀಡುವುದಲ್ಲದೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ ಎಂಬ ನಂಬಿಕೆ ಇದೆ.

3 /5

ಅರಳಿ ಎಲೆ : ಅರಳಿ ಎಲೆಗಳಲ್ಲಿ ಭಗವಾನ್ ವಿಷ್ಣು ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ.  ವಿಷ್ಣುವಿನ ಅನುಗ್ರಹವಿದ್ದರೆ ಲಕ್ಷ್ಮಿಯು ಒಲಿಯುತ್ತಾಳೆ. ಆದ್ದರಿಂದ, ಅರಳಿ ಎಲೆಯನ್ನು ಗಂಗಾಜಲದಲ್ಲಿ ತೊಳೆದು  ಎಲೆಯ ಮೇಲೆ ಕುಂಕುಮದಿಂದ ಶ್ರೀ ಎಂದು ಬರೆಯಿರಿ. ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿಡಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಹಣದ ಮಳೆಯೇ ಹರಿಯಲಿದೆ ಎಂದು ನಂಬಲಾಗಿದೆ. ಆದರೆ ಈ ಎಲೆಯನ್ನು ಯಾರಿಗೂ ಕಾಣದ ರೀತಿಯಲ್ಲಿ ಇರಿಸಿಕೊಳ್ಳಿ.   

4 /5

ಶ್ರೀ ಯಂತ್ರ: ಶ್ರೀ ಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಪರ್ಸ್‌ನಲ್ಲಿ ಸಣ್ಣ ಶ್ರೀ ಯಂತ್ರವನ್ನು ಇಟ್ಟುಕೊಳ್ಳುವುದರಿಂದ, ನೀವು ಯಾವಾಗಲೂ ಸಕಾರಾತ್ಮಕತೆಯಿಂದ ತುಂಬಿರುತ್ತೀರಿ. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

5 /5

ಗೋಮತಿ ಚಕ್ರ : ಪರ್ಸ್‌ನಲ್ಲಿ 7 ಗೋಮತಿ ಚಕ್ರಗಳನ್ನು ಇಟ್ಟುಕೊಂಡರೆ ಸಂಪತ್ತು ಸಿಗುತ್ತದೆ. ಮಾತ್ರವಲ್ಲ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.