Aadhaar Card Alert : ಬೇರೆ ಯಾವುದೇ ದಾಖಲೆ ಇಲ್ಲದಿದ್ದರೂ ಮಾಡಿಸಬಹುದು ಆಧಾರ್ ಕಾರ್ಡ್

ಸರ್ಕಾರಿ ಅಥವಾ ಖಾಸಗೀ ಯಾವುದೇ ಕೆಲಸಗಳಿರಲಿ, ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಸರ್ಕಾರದ ಅನೇಕ ಸಬ್ಸಿಡಿಗಳ ಪ್ರಯೋಜನ ಪಡೆಯಬೇಕಾದರೆ, ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. 

ನವದೆಹಲಿ : Aadhaar Card Alert: ಸರ್ಕಾರಿ ಅಥವಾ ಖಾಸಗೀ ಯಾವುದೇ ಕೆಲಸಗಳಿರಲಿ, ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಸರ್ಕಾರದ ಅನೇಕ ಸಬ್ಸಿಡಿಗಳ ಪ್ರಯೋಜನ ಪಡೆಯಬೇಕಾದರೆ, ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಇಲ್ಲವಾದರೆ,  ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್ ಪಡೆಯುವವರೆಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಮಾಡಿಸಬೇಕಾದರೆ, ವಿಳಾಸ ಪುರಾವೆ, ಹುಟ್ಟಿದ ದಿನಾಂಕ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಈ ದಾಖಲೆಗಳಿಲ್ಲದೆ ನಿಮ್ಮ ಆಧಾರ್ ಕಾರ್ಡ್ ಮಾಡಬಹುದೇ? ಈ ಬಗ್ಗೆ ಸಂಪುಉರ್ಣ ಮಾಹಿತಿ ಇಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಧಾರ್ ಕಾರ್ಡ್ ಮಾಡಿಸಲು, ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳಂತಹ ದಾಖಲೆಗಳು ಬೇಕಾಗುತ್ತವೆ. ಒಂದು ವೇಳೆ, ನೀವು ಈ ದಾಖಲೆಗಳನ್ನು ಹೊಂದಿಲ್ಲದಿದ್ದರೆ,  UIDAI ನ Aadhaar Introducer ಸೌಲಭ್ಯದ ಸಹಾಯವನ್ನು ತೆಗೆದುಕೊಳ್ಳಬಹುದು.  

2 /5

ಆಧಾರ್ ಪರಿಚಯಿಸುವವರು ಐಡಿ ಅಥವಾ ವಿಳಾಸ ಪುರಾವೆ ಇಲ್ಲದ ಸ್ಥಳೀಯ ನಿವಾಸಿಗಳನ್ನು ಪರಿಶೀಲಿಸಲು ರಿಜಿಸ್ಟ್ರಾರ್ ನೇಮಿಸಿದ ವ್ಯಕ್ತಿ. ಆಧಾರ್ ಪರಿಚಯಿಸುವವರು ವ್ಯಕ್ತಿಯ ಹುಟ್ಟಿದ ದಿನಾಂಕ, ಗುರುತು ಅಥವಾ ವಿಳಾಸವನ್ನು ಪರಿಶೀಲಿಸುತ್ತಾರೆ. 

3 /5

UIDAI ಹೊರಡಿಸಿದ ಸುತ್ತೋಲೆಯ ಪ್ರಕಾರ,  Introducer ಆಧಾರ್ ಅರ್ಜಿದಾರರ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಬೇಕು. ಇದರ ವ್ಯಾಲಿಡಿಟಿ ಕೇವಲ 3 ತಿಂಗಳವರೆಗೆ ಮಾತ್ರ ಇರುತ್ತದೆ.  Introducer ದಾಖಲಾತಿ ನಮೂನೆಗೆ ಸಹಿ ಮಾಡುವುದು ಅವಶ್ಯಕ. 

4 /5

Aadhaar Card Introducer  ವಯಸ್ಸು 18 ವರ್ಷಗಳಿಗಿಂತ ಹೆಚ್ಚು ಇರಬೇಕು. ಆತನ ವಿರುದ್ಧ ಯಾವುದೇ ಪ್ರಕರಣ ಇರಬಾರದು. ಆತ ಆಧಾರ್ ಕಾರ್ಡ್ ಹೊಂದಿರಬೇಕು. ಈ ಪ್ರದೇಶದ ಸ್ಥಳೀಯ ವ್ಯಕ್ತಿ, ಪೋಸ್ಟ್‌ಮ್ಯಾನ್, ಆಶಾ ಕೆಲಸಗಾರ, ಶಿಕ್ಷಕರು ಸಹ Aadhaar Card Introducer ಆಗಬಹುದು. 

5 /5

ನೀವು ಆಧಾರ್ ಕಾರ್ಡ್ ಮಾಡಲು ಅಗತ್ಯವಾದ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಮ್ಮ ಕುಟುಂಬದ ಮುಖ್ಯಸ್ಥರ ಅಥವಾ ಈಗಾಗಲೇ ಆಧಾರ್ ಕಾರ್ಡ್ ಮಾಡಲಾಗಿರುವ ಯಾವುದೇ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಆ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸಾಬೀತುಪಡಿಸುವ ಡಾಕ್ಯುಮೆಂಟ್ ಇರಬೇಕು.