Aadhaar Card : ಇ -ಆಧಾರ್ ಮತ್ತು PVC ಕಾರ್ಡ್ ಗಳಿಗೆ ಮಾನ್ಯತೆ ಇದೆಯಾ? ಏನು ಹೇಳುತ್ತೆ UIDAI

ಬೇರೆ ಬೇರೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ಆಧಾರ್ ಕಾರ್ಡನ್ನು ಜಾರಿಗೊಳಿಸಲಾಗಿದ್ದು,ಇದಕ್ಕೆ  UIDAI ಅನುಮೋದನೆ ನೀಡಿತ್ತು. ಆದರೇ ಈಗಲೂ ಆಧಾರ್ ಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳು UIDAI ಮುಂದೆ ಬರುತ್ತಿವೆ. 

 Aadhar Card:ಆಧಾರ್ ಕಾರ್ಡ್ ಇಲ್ಲದೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮಾಡುವುದು ಕಷ್ಟ. ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡನ್ನು( Aadhar Card) ಮುಖ್ಯ ದಾಖಲೆ ಎಂದೇ ಪರಿಗಣಿಸಲಾಗುತ್ತದೆ. ಬೇರೆ ಬೇರೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ಆಧಾರ್ ಕಾರ್ಡನ್ನು ಜಾರಿಗೊಳಿಸಲಾಗಿದ್ದು,ಇದಕ್ಕೆ  UIDAI ಅನುಮೋದನೆ ನೀಡಿತ್ತು. ಆದರೇ ಈಗಲೂ ಆಧಾರ್ ಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳು UIDAI ಮುಂದೆ ಬರುತ್ತಿವೆ. 
 

1 /4

 UIDAI ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ವಿಚಾರವನ್ನು ಹೊರತಂದಿದೆ.  ಯುಐಡಿಎಐ ನೀಡುವ ಮೂರು ಆಧಾರ್ ಕಾರ್ಡ್‌ಗಳು ಸಮಾನವಾಗಿ ಮಾನ್ಯವಾಗಿವೆ ಎಂದು UIDAI ಹೇಳಿದೆ.  ಅಲ್ಲದೆ ಈ ಕಾರ್ಡ್ ಗಳನ್ನುಮಾಡಿಸುವ ಪ್ರಕ್ರಿಯೆಯನ್ನು ಕೂಡಾ  UIDAI ತಿಳಿಸಿದೆ. ಪಿವಿಸಿ ಆಧಾರ್ ಕಾರ್ಡ್ (PVC)ಮತ್ತು ಆಧಾರ್ ಪತ್ರ ಅಥವಾ ಇ-ಆಧಾರ್ ಮೂರು ಕಾರ್ಡ್ ಗಳು ಸಂಪೂರ್ಣವಾಗಿ ಮಾನ್ಯತೆ ಪಡೆದಿವೆ ಎಂದು ಅದು ಹೇಳಿದೆ.  UIDAI ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. ದಾಖಲೆಯ ರೂಪದಲ್ಲಿ  ಆಧಾರನ್ನು ನೀಡಿದರೆ ಅದನ್ನು ಅನುಮೋದಿಸಲಾಗುತ್ತದೆ. ಮತ್ತು ಯಾವುದೇ ಇಲಾಖೆಯು ಆಧಾರ್ ಅನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ.

2 /4

ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್ ನಲ್ಲಿಯೇ ತಮ್ಮ ಕೆಲಸಗಳನ್ನು ಪೂರೈಸುತ್ತಾರೆ. ಇ ಆಧಾರನ್ನು ಕೂಡಾ ಜನ ಮೊಬೈಲಲ್ಲಿ ಇರಿಸಿಕೊಳ್ಳಬಹುದು. ದಾಖಲೆಗಾಗಿ ಆಧಾರ್ ನ ಪ್ರತಿಯನ್ನು ನಮ್ಮೊಂದಿಗೆ ಒಯ್ಯುವ ಅಗತ್ಯವಿರುವುದಿಲ್ಲ.  ಯುಐಡಿಎಐ ವೆಬ್‌ಸೈಟ್‌ನಿಂದ ಇ -ಆಧಾರನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯಕ್ಕನುಗುಣವಾಗಿ  ಬಳಸಿಕೊಳ್ಳಬಹುದು. 

3 /4

ಪಿವಿಸಿ ಆಧಾರ್ ಕಾರ್ಡ್ ಎಟಿಎಂ ಕಾರ್ಡ್‌ನಂತೆಯೇ ಇರುತ್ತದೆ. ನೀರಿನಲ್ಲಿ ಬೀಳುವುದರಿಂದ ಕಾರ್ಡ್ ಹಾನಿಗೊಳಗಾಗುವ ಅಪಾಯವಿರುವುದಿಲ್ಲ. ಅಲ್ಲದೆ,  ಹೊಸ ಪಿವಿಸಿ ಆಧಾರ್ ಕಾರ್ಡ್‌ನಲ್ಲಿ ಹಲವು ಹೊಸ ಭದ್ರತಾ ಫೀಚರ್ಸ್ ಗಳನ್ನು ಸೇರಿಸಲಾಗಿದೆ.   ಪಿವಿಸಿ ಆಧಾರ್ ಕಾರ್ಡ್ ಅನ್ನು ಪಡೆಯಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ- https://residentpvc.uidai.gov.in/order-pvcreprint.. ಇದರ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.. ನಂತರ ನಿಮಗೆ ನೀಡುವ ಸೆಕ್ಯುರಿಟಿ ಕೋಡನ್ನು ಸಹ ನಮೂದಿಸಿ.  ಇದನ್ನು ಪಡೆಯಲು  50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

4 /4

ಯುಐಡಿಎಐ  ಆಧಾರ್ ಪತ್ರವನ್ನು ನಿಮ್ಮ ಮನೆಗೆ ಕಳುಹಿಸುತ್ತದೆ.  ಈ ಆಧಾರ್ ಪತ್ರ ಅಂಚೆ ಮೂಲಕವೇ ನಿಮ್ಮ ಮನೆಗೆ ತಲುಪುತ್ತದೆ. ಈ ಆಧಾರ್ ಕಾರ್ಡ್ ಗಾತ್ರದಲ್ಲಿ ದೊಡ್ಡದಾದ ಕಾರಣ ಇದನ್ನು ನಿಮ್ಮೊಂದಿಗೆ ಒಯ್ಯುವುದು ಸ್ವಲ್ಪ ಕಷ್ಟ.  ಹೆಚ್ಚಿನವರು ಇಂಥಹ   ಆಧಾರ್ ಕಾರ್ಡ್‌ಗಳನ್ನೇ ಹೊಂದಿದ್ದಾರೆ. ಇದರಲ್ಲಿ, ಆಧಾರ್ ಕಾರ್ಡ್ ಅನ್ನು ಪ್ಲಾಸ್ಟಿಕ್ ಲೇಪಿತ ಕಾಗದದ ಮೇಲೆ ಮುದ್ರಿಸಲಾಗಿದೆ.