ಓಟಿಟಿಯಲ್ಲಿ ಬರೋಬ್ಬರಿ ಆರು ಸಿನಿಮಾ ರಿಲೀಸ್‌; ಈ ವೀಕೆಂಡ್‌ಗೆ ಸಿನಿಮಾಗಳ ಹಬ್ಬ

OTT Films : ಥಿಯೇಟರ್‌ ಆಗ್ಲಿ ಓಟಿಟಿ ಆಗ್ಲಿ ಸಿನಿಪ್ರಿಯರು ಯಾವುದೇ ಸಿನಿಮಾ ಸೆಟ್ಟೆರಿದರು ವಾರಾಂತ್ಯಕ್ಕೆ ರಿಲೀಸ್‌ ಆಗೋ ಎಲ್ಲಾ ಚಿತ್ರಗಳನ್ನು ಎಂಜಾಯ್‌ ಮಾಡುತ್ತಾರೆ. ಪ್ರತಿವಾರದಂತೆ ಈ ವಾರವೂ ಕೂಡ ಬರೋಬ್ಬರಿ 6 ಸಿನಿಮಾಗಳು ಓಟಿಟಿಯಲ್ಲಿ ಸೆಟ್ಟೆರಲಿವೆ. ಒಂದೊಂದು ಸಿನಿಮಾವೂ ಒಂದಕ್ಕಿಂತ ಒಂದು ಮೆಚ್ಚುಗೆ ಗಳಿಸಿವೆ. ಹಾಗಾದರೆ ಈ ವಾರ ಓಟಿಟಿಯಲ್ಲಿ ರಿಲೀಸ್‌ ಆಗುತ್ತಿರೋ ಸಿನಿಮಾಗಳು ಯಾವವು? ಅವುಗಳ ವಿಶೇಷತೆ ಏನು? ಅನ್ನೋದು ಇಲ್ಲಿದೆ ನೋಡಿ ...
 

1 /6

ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ : ಸಲ್ಮಾನ್‌ ಖಾನ್‌, ಪೂಜಾ ಹೆಗ್ಡೆ, ನಟಿನೆಯ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಓಟಿಟಿಯಲ್ಲಿ ರಲೀಸ್‌ ಆಗುತ್ತಿದೆ. ಈ ಸಿನಿಮಾ ವೀರಂ ಸಿನಿಮಾದ ರಿಮೇಕ್‌ ಆಗಿದ್ದರೂ, ಬಾಲಿವುಡ್‌ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ. ಆದರೆ ಥಿಯೇಟರ್‌ನಲ್ಲಿ ಈ ಸಿನಿಮಾ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಇದೇ ಸಿನಿಮಾ ಓಟಿಟಿಯಲ್ಲಿ ಸೆಟ್ಟೆರಲಿದ್ದು, ಮೇ26ರಂದು ಜೀ5 ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.   

2 /6

ಭೇಡಿಯಾ : ವರುಣ್‌ ಧವನ್‌, ಕೃತಿ ಸಾನೋನ್‌, ಅಭಿನಯದ ಈ ಸಿನಿಮಾ ಬಾಲಿವುಡ್‌ನ ಹಾರರ್‌ ಕಮ್‌ ಕಾಮಿಡಿ ಸಿನಿಮಾ ಆಗಿದ್ದು, ಇದೇ ವಾಋ ಓಟಿಟಿಯಲ್ಲಿ ರಿಲೀಸ್‌ ಆಗಲಿದೆ. ಮೇ26ಕ್ಕೆ ಜಿಯೋ ಸಿನಿಮಾದಲ್ಲಿ ಸೆಟ್ಟೆರಲಿದೆ.   

3 /6

ಮಿಸ್ಸಿಂಗ್‌ : ಈ ಸಿನಿಮಾ ಅಮೆರಿಕಾದ ಥ್ರಿಲ್ಲರ್‌ ಸಿನಿಮಾ ಆಗಿದ್ದು, ವಿಲ್‌ ಮೆರ್ರಿಕ್‌, ನಿಕ್ಸ್‌ ಜಾನ್ಸನ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊಲಂಬೊದಲ್ಲಿ ನಾಯಕಿಯ ತಾಯಿಯ ಹೊಸ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋದಾಗ ಕಾಣೆಯಾಗುತ್ತಾರೆ. ಅವರನ್ನು ಹುಡುಕಲು ಹೋದಾಗ ಆಗುವ ತೊಂದರೆಗಳನ್ನು ಈ ಸಿನಿಮಾದಲ್ಲಿ  ತೋರಿಸಲಾಗಿದೆ. ಈ ಸಿನಿಮಾ ಇದೀಗ ಓಟಿಟಿಯಲ್ಲಿ ಸೆಟ್ಟೆರಲಿದ್ದು, ಮೇ26ಕ್ಕೆ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.   

4 /6

ಮದರ್ಸ್‌ ಡೇ : ಈ ಸಿನಿಮಾ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಮೇ26 ಕ್ಕೆ ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.   

5 /6

ವಿಕ್ಟಿಮ್‌ ಸಸ್ಪೆಕ್ಟ್‌ : ಇದು ಪಕ್ಕಾ ಕ್ರೈಂ ಥ್ರಿಲ್ಲರ್‌ ಸಿನಿಮಾ ಆಗಿದ್ದು, ನ್ಯಾನ್ಸಿ ಶ್ವಾರ್ಟ್ಜ್‌ಮನ್‌ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇಂದು (ಮೇ23) ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.    

6 /6

ಟೆನ್‌ & ಟೀನಾ : ಇದೊಂದು ಸೈಕಾಲಜಿಕಲ್‌ ಹಾರರ್‌ ಥ್ರಿಲ್ಲರ್‌ ಸಿನಿಮಾ. ಈ ಸಿನಿಮಾವನ್ನು ರಾಬಿನ್‌ ಸ್ಟೈನ್‌ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೇ24ರಂದು ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.