Life Expectancy: ಜೀವನದ ಎಂಟು ನಿಮಿಷವನ್ನು ಕಡಿಮೆ ಮಾಡುತ್ತದೆಯಂತೆ ಒಂದು ಸ್ಲೈಸ್ Pizza

ಕೇವಲ ಒಂದು ಸ್ಲೈಸ್ ಪಿಜ್ಜಾವನ್ನು ತಿನ್ನುವುದರಿಂದ ವ್ಯಕ್ತಿಯ ಜೀವನದ 7-8 ನಿಮಿಷಗಳಷ್ಟು ಕಡಿಮೆ ಮಾಡಯಾಗುತ್ತದೆ ಎಂದು  ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. 
 

ನವದೆಹಲಿ : ಬದಲಾಗುತ್ತಿರುವ ಜೀವನಶೈಲಿ ಜನರ ಸರಾಸರಿ ಜೀವನದ ಮೇಲೆ ಪರಿಣಾಮ ಬೀರಿದೆ. ಜನರ ಜೀವಿತಾವಧಿ ಕಡಿಮೆಯಾಗುತ್ತಿದೆ. ವಿಶೇಷವಾಗಿ ಆಹಾರ ಮತ್ತು ಪಾನೀಯಗಳು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಕಡಿಮೆ ಮಾಡಿದೆ. ಈ ಪೈಕಿ ಪಿಜ್ಜಾ ಜನರ ಜೀವಾದ ಮೇಲೆ ಅತಿದೊಡ್ಡ ಪ್ರಭಾವ ಬೀರಿದೆ. ಕೇವಲ ಒಂದು ಸ್ಲೈಸ್ ಪಿಜ್ಜಾವನ್ನು ತಿನ್ನುವುದರಿಂದ ವ್ಯಕ್ತಿಯ ಜೀವನದ 7-8 ನಿಮಿಷಗಳಷ್ಟು ಕಡಿಮೆ ಮಾಡಯಾಗುತ್ತದೆ ಎಂದು  ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ವರದಿಯ ಪ್ರಕಾರ, ಬಾದಾಮಿಯನ್ನು ತಿನ್ನುವುದು ನಿಮ್ಮ ಜೀವನವನ್ನು 26 ನಿಮಿಷಗಳಷ್ಟು ಹೆಚ್ಚಿಸಬಹುದಂತೆ. ಅಂದರೆ ಆದ್ಮಿ ನಮ್ಮ ಆರೋಗ್ಯವನ್ನು ವೃದ್ದಿಸುತ್ತದೆ. ಆರೋಗ್ಯ ಉತ್ತಮವಾಗಿದ್ದರೆ,  ಆಯುಷ್ಯ ಕೂಡಾ ಹೆಚ್ಚಿದಂತೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಬಾದಾಮಿಯನ್ನು ತಿನ್ನುವುದು ನಿಮ್ಮ ಜೀವನದ ದಿನಗಳನ್ನು ಹೆಚ್ಚಿಸಬಹುದು.   

2 /5

ಬಾಳೆಹಣ್ಣು ಟೊಮೆಟೊ ಕೂಡ ಆಯುಷ್ಯ ಹೆಚ್ಚಿಸುತ್ತದೆ. ಬಾಳೆಹಣ್ಣು ತಿನ್ನುವುದರಿಂದ 13.5 ನಿಮಿಷಗಳು, ಟೊಮೆಟೊ ತಿನ್ನುವುದು 3.5 ನಿಮಿಷಗಳು, ಆವಕಾಡೊ ತಿನ್ನುವುದರಿಂದ 2.8 ನಿಮಿಷಗಳಷ್ಟು ಆಯುಷ್ಯ ಹೆಚ್ಚಾಗುತ್ತದೆ. ಇದರ ಹೊರತಾಗಿ, ಸಾಲ್ಮನ್ ಮೀನುಗಳನ್ನು ತಿನ್ನುವುದರಿಂದ 16 ನಿಮಿಷಗಳ ಜೀವಿತಾವಧಿಯು ಹೆಚ್ಚುತ್ತದೆಯಂತೆ. 

3 /5

ತ್ವರಿತ ಆಹಾರ ತಂಪು ಪಾನೀಯಗಳು ವಯಸ್ಸನ್ನು ಕಡಿಮೆ ಮಾಡುತ್ತದೆ. ಒಂದು ಸ್ಲೈಸ್ ಪಿಜ್ಜಾ ಜೀವನದ 8 ನಿಮಿಷಗಳು ಮತ್ತು ತಂಪು ಪಾನೀಯ 12.04 ನಿಮಿಷವನ್ನು ಕಡಿಮೆಯಾಗುತ್ತವೆ. ಇದಲ್ಲದೇ, ಬರ್ಗರ್‌ಗಳು, ಸಂಸ್ಕರಿಸಿದ ಆಹಾರ ಜೀವಿತಾವಧಿಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ.    

4 /5

ನೇಚರ್ ಫುಡ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಆರೋಗ್ಯಕರ ಜೀವನ ಮತ್ತು ಜೀವಿತಾವಧಿಯನ್ನು ಆಧರಿಸಿದೆ. ಯಾವ ಆಹಾರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಯಲು, ವಿಜ್ಞಾನಿಗಳು ಅನೇಕ ರೀತಿಯ ಆಹಾರ ಪದಾರ್ಥಗಳ ಮೇಲೆ ಸಂಶೋಧನೆ ನಡೆಸಿದ್ದರು. ಅಮೆರಿಕದಲ್ಲಿ ಸಂಸ್ಕರಿಸಿದ ಮಾಂಸವನ್ನು ತಿನ್ನುವ ಜನರ ಸರಾಸರಿ ವಯಸ್ಸು 0.45 ನಿಮಿಷಗಳಷ್ಟು ಕಡಿಮೆಯಾಗುತ್ತಿದೆ ಎಂದು ಈ ಅಧ್ಯಯನ ಹೇಳುತ್ತದೆ.  ಅಂದರೆ, ಹಾಟ್ ಡಾಗ್ ಸ್ಯಾಂಡ್ ವಿಚ್ ನಲ್ಲಿ 61 ಗ್ರಾಂ ಸಂಸ್ಕರಿಸಿದ ಮಾಂಸವಿದ್ದರೆ, ಅದನ್ನು ತಿನ್ನುವುದರಿಂದ ವ್ಯಕ್ತಿಯ ಜೀವನವನ್ನು 27 ನಿಮಿಷಗಳಷ್ಟು ಕಡಿಮೆಯಾಗಬಹುದು. 

5 /5

ಸಸ್ಯಗಳಿಂದ ಬರುವ ಆಹಾರಗಳು ಅತ್ಯುತ್ತಮವಾಗಿವೆ. ಕೆಲವು ತಜ್ಞರು ಕೂಡ ಸಸ್ಯ  ಮೂಲದಿಂದ ಸಿಗುವ ಪ್ರೋಟೀನ್ ಪ್ರಾಣಿ ಆಧಾರಿತ ಪ್ರೋಟೀನ್ ಗಿಂತ ಉತ್ತಮ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.