ಆರೋಗ್ಯಕರವಾಗಿ ತೂಕ ಇಳಿಸಲು ಸರಳ ಸಲಹೆ

ಕೆಲವು ಆರೋಗ್ಯಕರ ಸಲಹೆಗಳನ್ನು ಅನುಸರಿಸುವುದರಿಂದ ನೀವು ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು.

ತೂಕ ಹೆಚ್ಚಳ ಸಮಸ್ಯೆಯು ಕೊರೊನಾ ಸಮಯದಲ್ಲಿ ಹಿಂದೆಂದಿಗಿಂತಲೂ ತುಂಬಾ ಹೆಚ್ಚಾಗಿದೆ. ತೂಕವನ್ನು ಕಳೆದುಕೊಳ್ಳುವುದು ಅದರಲ್ಲೂ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಕೆಲವು ಆರೋಗ್ಯಕರ ಸಲಹೆಗಳನ್ನು ಅನುಸರಿಸುವುದರಿಂದ ನೀವು ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ದೇಹದಲ್ಲಿ ಕೊಬ್ಬು ಹೆಚ್ಚಾದರೆ ಅದು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಕೆಲವು ಸಸ್ಯ ಆಧಾರಿತ ಆಹಾರಗಳು, ಆರೋಗ್ಯಕರ ಕೊಬ್ಬುಗಳು, ಕೊಬ್ಬನ್ನು ಸುಡುವ ಪಾನೀಯಗಳು ಮತ್ತು ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನಗಳನ್ನು ತಿನ್ನುವ ಮೂಲಕ, ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.

2 /4

ಹಣ್ಣುಗಳು: ಕಿತ್ತಳೆ, ಪೇರಳೆ, ಸೇಬುಗಳು, ಬಾಳೆಹಣ್ಣುಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಹಣ್ಣಿನ ತಾಜಾ ಪಾನೀಯಗಳು ಸಹ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕ ನಿಯಂತ್ರಣಕ್ಕಾಗಿ ನೀವು ನಿಮ್ಮ ಡಯಟ್ನಲ್ಲಿ ಈ ಹಣ್ಣುಗಳನ್ನು ತಪ್ಪದೇ ಸೇರಿಸಿ.

3 /4

ಸೊಪ್ಪು ಮತ್ತು ತರಕಾರಿಗಳು: ಕೋಸುಗಡ್ಡೆ, ಕ್ಯಾರೆಟ್, ಹಸಿರು ತರಕಾರಿಗಳು ಮತ್ತು ಪಾಲಕ್ ಸೊಪ್ಪು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.

4 /4

ವ್ಯಾಯಾಮ: ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರದ ಜೊತೆಗೆ ಲಘು ವ್ಯಾಯಾಮವೂ ಬಹಲ್ ಮುಖ್ಯ. ದೈಹಿಕ ವ್ಯಾಯಾಮ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳ ಸಹಾಯಕವಾಗಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.