7th pay commission : DA ಹೆಚ್ಚಳದೊಂದಿಗೆ ವೇತನವು ಹೆಚ್ಚಳ , ಈ ತಾರೀಕಿನಿಂದ ಸಿಗಲಿದೆ ಲಾಭ

ಸರ್ಕಾರಿ ಉದ್ಯೋಗಿಗಳಿಗೆ ಡಿಎ ಹೆಚ್ಚಳ ಘೋಷಣೆಯೊಂದಿಗೆ, ಸಂಬಳವೂ ಹೆಚ್ಚಾಗಲಿದೆ . ಜುಲೈ 1 ರಿಂದ ಎಲ್ಲ ಪ್ರಯೋಜನಗಳು ಸಿಗಲು ಪ್ರಾರಂಭವಾಗುತ್ತವೆ.


ನವ ದೆಹಲಿ : ಡಿಎ ಹೆಚ್ಚಳ ಎಷ್ಟಾಗಲಿದೆ ಎಂದು ಇನ್ನೂ ನಿರ್ಧಾರ ಆಗಿಲ್ಲವಾದರೂ ಜುಲೈ 1 ರಿಂದ ತುಟ್ಟಿ ಭತ್ಯೆ (Dearness Allowance) ಲಾಭ ಲಭ್ಯವಾಗಲಿದೆ ಎಂದು ಮೋದಿ ಸರ್ಕಾರ ಘೋಷಿಸಿದೆ. ತುಟ್ಟಿಭತ್ತೆ  (DA) ಹೆಚ್ಚಳದ ಘೋಷಣೆಯ ನಂತರ, ಒಟ್ಟು ಡಿಎ ಶೇಕಡಾ 28 ರವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.  ತುಟ್ಟಿ ಭತ್ಯೆ  ಘೋಷಣೆಯೊಂದಿಗೆ, ಸರ್ಕಾರಿ ನೌಕರರ ವೇತನ ದಲ್ಲೂ  ಹೆಚ್ಚಳವಾಗಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

. ಕರೋನಾದಿಂದಾಗಿ ಕೇಂದ್ರ ಉದ್ಯೋಗಿಗಳಿಗೆ 2020 ರ ಜನವರಿಯಿಂದ ಜುಲೈವರೆಗೆ (ಶೇ 3) ಮತ್ತು ಜುಲೈನಿಂದ ಡಿಸೆಂಬರ್ 2020 ರವರೆಗೆ (ಶೇ 4) ತುಟ್ಟಿ ಭತ್ಯೆ ಸಿಗಲಿಲ್ಲ. ಈಗ 2021 ರ ಜನವರಿಯಿಂದ ಜುಲೈವರೆಗಿನ ತುಟ್ಟಿ ಭತ್ಯೆಯನ್ನು ಘೋಷಿಸಬೇಕಾಗಿದ್ದು, ಅದು ಶೇಕಡಾ 4 ರಷ್ಟು ಆಗಿರಬಹುದು. ಒಟ್ಟಾರೆಯಾಗಿ,  ಕೇಂದ್ರ ಉದ್ಯೋಗಿಗಳು ಇಲ್ಲಿವರೆಗೆ 17 ಪ್ರತಿಶತ ಡಿಎ ಪಡೆಯುತ್ತಿದ್ದು  ಇನ್ನು ಇದು 28 ​​ಪ್ರತಿಶತದವರೆಗೆ ಏರಬಹುದು ಎನ್ನಲಾಗಿದೆ. 

2 /4

ಡಿಎ ಹೆಚ್ಚಳ ಘೋಷಣೆಯಾದ ತಕ್ಷಣ, ಅದು ನಿಮ್ಮ ಸಂಬಳದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ನಿಯಮಗಳ ಪ್ರಕಾರ, ಪಿಎಫ್ ಮತ್ತು ಗ್ರ್ಯಾಚುಟಿ ಅನ್ನು ಮೂಲ ವೇತನಕ್ಕೆ ಅನುಗುಣವಾಗಿ ಕಡಿತಗೊಳಿಸಲಾಗುತ್ತದೆ. ಹೊಸ ವೇತನ ಸಂಹಿತೆಯ ಪ್ರಕಾರ ಸಿಟಿಸಿಯಲ್ಲಿ ಮೂಲ ವೇತನವು ಶೇಕಡಾ 50 ಕ್ಕಿಂತ ಕಡಿಮೆಯಿರಬಾರದು.

3 /4

ಡಿಎ ಹೆಚ್ಚಳ ಘೋಷಣೆಯೊಂದಿಗೆ ಪಿಂಚಣಿದಾರರಿಗೂ ಅನುಕೂಲವಾಗಲಿದೆ. ಒಂದು ವೇಳೆ ಡಿಎ ಅನ್ನು 28 ಪ್ರತಿಶತದಷ್ಟು ಹೆಚಿಸಿದ್ರೆ  ಡಿಎ ಯಲ್ಲಿ ಭಾರಿ ಹೆಚ್ಚಳವಾದಂತೆ.  ಡಿಎ ಅಡಿಯಲ್ಲಿ ಪಿಂಚಣಿದಾರರಿಗೆ 10 ಸಾವಿರ ರೂಪಾಯಿ ಸಿಗುತ್ತಿದ್ದರೆ ಇದು 16 ಸಾವಿರಕ್ಕೆ ಏರಿಕೆಯಾಗಬಹುದು. 

4 /4

ಹೊಸ ಹಣಕಾಸು ವರ್ಷದ ಪ್ರಾರಂಭದೊಂದಿಗೆ, ಹೊಸ ಕಾರ್ಮಿಕ ಕಾನೂನು ಸಹ ಅನ್ವಯಿಸಬಹುದು. ಹೊಸ ಕಾರ್ಮಿಕ ಕಾನೂನುಗಳನ್ನು ಸಂಸತ್ತು ಅಂಗೀಕರಿಸಬಹುದು ಮತ್ತು ಮೋದಿ ಸರ್ಕಾರ ಏಪ್ರಿಲ್ 1 ರಿಂದ ಅವುಗಳನ್ನು ಜಾರಿಗೆ ತರಲಿದೆ. ಇದು ನಿಮ್ಮ ಟೇಕ್ ಹೋಮ್ ಸಂಬಳದ ಮೇಲೆ ಪರಿಣಾಮ ಬೀರುತ್ತದೆ.