7th pay commission : ಸರ್ಕಾರಿ ನೌಕರರಿಗೆ ಧನಾಗಮನ..! ಎಷ್ಟಾಗಲಿದೆ ವೇತನ ?


ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವ ದಿನಗಳು ಹತ್ತಿರವಾಗುತ್ತಿದೆ. ಶೀಘ್ರವೇ ಕೇಂದ್ರ ಸರ್ಕಾರ DA ಹೆಚ್ಚಳವನ್ನು ಘೋಷಿಸಲಿದೆ.

ದೆಹಲಿ: ಕೇಂದ್ರ ನೌಕರರ ಬಹುದಿನಗಳ ನಿರೀಕ್ಷೆ ಈ ತಿಂಗಳು ಕೊನೆಗೊಳ್ಳುವುದೇ? All India Consumer Price Index ಜಾರಿ ನಂತರ ಕೆಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವ ದಿನಗಳು ಸನ್ನಿಹಿತವಾಗುತ್ತಿವೆ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರವು  DA ಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ.  ಹೀಗಾದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಿದರೆ, ಕೇಂದ್ರ ನೌಕರರಿಗೆ ದೊಡ್ಡ ಮಟ್ಟದ ಲಾಭವಾಗುತ್ತದೆ. 7 ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಈ ಹೆಚ್ಚಳವಾಗಲಿದೆ. ಪ್ರಸ್ತುತ, ಕೇಂದ್ರ ನೌಕರರಿಗೆ ಶೇಕಡಾ 17 ರಷ್ಟು ಡಿಎ ಸಿಗುತ್ತದೆ.  ಅದನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ  ಡಿಎ  ಶೇಕಡಾ 21 ಕ್ಕೆ ತಲುಪುತ್ತದೆ.   

2 /4

ಕರೋನಾ ಅವಧಿಯಲ್ಲಿ ಹದಗೆಟ್ಟಿದ್ದ ದೇಶದ ಆರ್ಥಿಕ ಸ್ಥಿತಿ  ನಿಧಾನವಾಗಿ ಮತ್ತೆ ಹಳಿಗೆ ಮರಳುತ್ತಿದೆ. ದೇಶಾದ್ಯಂತ ಎಲ್ಲಾ ವ್ಯವಹಾರವೂ ಪ್ರಾರಂಭವಾಗಿದೆ. ಡಿಎ ಹೆಚ್ಚಳದ ಸುದ್ದಿ ಸುಮಾರು 50 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಲ್ಲಿ ಸಂತೋಷದ ಅಲೆಯನ್ನು ಸೃಷ್ಟಿಸಲಿದೆ.   ಈ ಹಿನ್ನೆಲೆಯಲ್ಲಿ ಕೇಂದ್ರ ನೌಕರರ ಹಿತದೃಷ್ಟಿಯಿಂದ, ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.  ಸರ್ಕಾರದ ಪ್ರಕಟಣೆಯ ಬಗ್ಗೆ ಸರ್ಕಾರಿ ನೌಕರರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

3 /4

ಕರೋನಾ ಅವಧಿಯಲ್ಲಿ ಎದುರಾದ ಸಮಸ್ಯೆಗಳು ಮತ್ತು ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅದನ್ನು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಬಹುದು ಎನ್ನಲಾಗಿದೆ. ಕರೋನಾ ಕಾಲದಲ್ಲಿ ತಡೆ ಹಿಡಿಯಲಾಗಿದ್ದ ಡಿಎಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ ಡಿಎಯಲ್ಲಿ ಶೇ 4ರಷ್ಟು ಹೆಚ್ಚಳವಾದರೆ ಕೇಂದ್ರ ನೌಕರರಿಗೆ ಹಣದ ಹೊಳೆಯೇ ಹರಿಯಲಿದೆ. 

4 /4

ಕೇಂದ್ರ ನೌಕರರ ಮೂಲ ವೇತನ ಅಥವಾ ಪಿಂಚಣಿಯನ್ನು ಗಮನದಲ್ಲಿಟ್ಟುಕೊಂಡು ಭತ್ಯೆಯನ್ನು ಘೋಷಿಸುವ ಸಾಧ್ಯತೆ ಬಗ್ಗೆ ಎಂದು ಹಣಕಾಸು ಸಚಿವಾಲಯ ಈಗಾಗಲೇ ಹೇಳಿದೆ. ಡಿಎ ಮತ್ತು ಡಿಆರ್ ಖರ್ಚು ವಾರ್ಷಿಕವಾಗಿ 12,510 ಕೋಟಿ ರೂಗಳಷ್ಟಾಗುತ್ತದೆ. ಆದರೆ ಹೆಚ್ಚಳದ ನಂತರ ಅದು 14,595 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.