LIC MFನ 5 ಸೂಪರ್ ಹಿಟ್ ಯೋಜನೆಗಳು! ಕೇವಲ 5 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಿ

ಎಲ್ಐಸಿಯ ಅಂಗಸಂಸ್ಥೆಯಾಗಿರುವ ಈ ಕಂಪನಿಯು ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ.

ನೀವು ಸುರಕ್ಷಿತ ಹೂಡಿಕೆಯನ್ನು ಬಯಸಿದರೆ ಆಸ್ತಿ ನಿರ್ವಹಣಾ ವಲಯದಲ್ಲಿ ಎಲ್‌ಐಸಿಯ ಅಂಗಸಂಸ್ಥೆ ಎಲ್‌ಐಸಿ ಮ್ಯೂಚುವಲ್ ಫಂಡ್ ನಿಮಗೆ ಉತ್ತಮವಾಗಿದೆ. ಎಲ್ಐಸಿಯ ಅಂಗಸಂಸ್ಥೆಯಾಗಿರುವ ಈ ಕಂಪನಿಯು ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇದು ಇಕ್ವಿಟಿ ಮತ್ತು ಸಾಲ ನಿಧಿ ಯೋಜನೆಗಳನ್ನು ಹೊಂದಿದೆ. ಎಲ್‌ಐಸಿ ಮ್ಯೂಚುವಲ್ ಫಂಡ್‌ನ ಲಾಭದಾಯಕ ವಿಭಿನ್ನ ಈಕ್ವಿಟಿ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.ಇದು ಕಳೆದ 5 ವರ್ಷಗಳಲ್ಲಿ ಹೆಚ್ಚಿನ ಎರಡಂಕಿಯ ಆದಾಯವನ್ನು ನೀಡಿದೆ. ಇವುಗಳಲ್ಲಿ ಸಿಎಜಿಆರ್ ರಿಟರ್ನ್ಸ್ ಶೇ.16.5ರಿಂದ ಶೇ.18.5 ವರೆಗೆ 5 ವರ್ಷಗಳಲ್ಲಿ ನೀಡಲಾಗಿದೆ. ಎಸ್‌ಐಪಿ ಮಾಡುವವರು ಕೂಡ ಇಲ್ಲಿ ಅದ್ಭುತ ಆದಾಯವನ್ನು ಪಡೆದಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

LIC MF ಲಾರ್ಜ್ ಕ್ಯಾಪ್ ಫಂಡ್ 5 ವರ್ಷಗಳಲ್ಲಿ ಶೇ.16.3ರಷ್ಟು CAGR ರಿಟರ್ನ್ ನೀಡಿದೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ಮೌಲ್ಯವು 2.12 ಲಕ್ಷ ರೂ. ಆಗಿದೆ. ಮಾಸಿಕ 5,000 ರೂ.ಗಳು 5.10 ಲಕ್ಷ ರೂ.ವನ್ನು ತಂದುಕೊಟ್ಟಿದೆ. ಈ ಹೂಡಿಕೆಯು ನಿಮಗೆ ಉತ್ತಮ ಆದಾಯವನ್ನು ತರಬಹುದು.  

2 /5

LIC MF ತೆರಿಗೆ ಯೋಜನೆ 5 ವರ್ಷಗಳಲ್ಲಿ ಶೇ.16.5ರಷ್ಟು CAGR ರಿಟರ್ನ್ ನೀಡಿದೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ಮೌಲ್ಯ 2.14 ಲಕ್ಷ ರೂ. ಆಗಿದೆ. ಮಾಸಿಕ 5000 ರೂ.ಗಳ ಹೂಡಿಕೆ 5.08 ಲಕ್ಷ ರೂ.ವನ್ನು ತಂದುಕೊಟ್ಟಿದೆ.

3 /5

LIC MF ETF- ನಿಫ್ಟಿ 50 5 ವರ್ಷಗಳಲ್ಲಿ ಶೇ.17.66 ಪ್ರತಿಶತದಷ್ಟು CAGR ರಿಟರ್ನ್ಸ್ ನೀಡಿದೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ಮೌಲ್ಯ 2.26 ಲಕ್ಷ ರೂ. ಆಗಿದ್ದರೆ, ಮಾಸಿಕ 5,000 ರೂ.ಗಳ ಹೂಡಿಕೆಯು 5.13 ಲಕ್ಷ ರೂ.ವನ್ನು ತಂದುಕೊಟ್ಟಿದೆ. ಈ ಹೂಡಿಕೆ ಕೂಡ ನಿಮಗೆ ಉತ್ತಮವಾಗಿದೆ.

4 /5

LIC MF ಲಾರ್ಜ್ & ಮಿಡ್ ಕ್ಯಾಪ್ 5 ಫಂಡ್ 5 ವರ್ಷಗಳಲ್ಲಿ ಶೇ.18.41ರಷ್ಟು CAGR ರಿಟರ್ನ್ ನೀಡಿದೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ಮೌಲ್ಯವು 2.33 ಲಕ್ಷ ರೂ. ಆಗಿದ್ದರೆ, ಮಾಸಿಕ 5000 ರೂ. ಹೂಡಿಕೆಯು 38 ಲಕ್ಷ ರೂ. ಆಗಿದೆ. ಅಂದರೆ ಇಲ್ಲಿ ಹೂಡಿಕೆ ಮಾಡಿದ ಹಣವು ಅತಿಕಡಿಮೆ ಅವಧಿಯಲ್ಲಿ ದ್ವಿಗುಣಗೊಂಡಿದೆ.

5 /5

LIC MF ETF- ಸೆನ್ಸೆಕ್ಸ್ 5 ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.18.5 ಪ್ರತಿಶತದಷ್ಟು CAGR ರಿಟರ್ನ್ ನೀಡಿದೆ. ಈ ಅವಧಿಯಲ್ಲಿ 1 ಲಕ್ಷ ರೂ. ಮೌಲ್ಯವು 2.24 ಲಕ್ಷ ರೂ. ಆಗಿದೆ. ಮಾಸಿಕ 5000 ರೂ.ಗಳ ಹೂಡಿಕೆಯು 5.17 ಲಕ್ಷ ರೂ. ಆಗಿದೆ. ಈ ಹೂಡಿಕೆಯು ನಿಮಗೆ ಅತ್ಯುತ್ತಮ ಲಾಭವನ್ನು ತಂದುಕೊಡುತ್ತದೆ.