5 ಸ್ಟಾರ್ ರೇಟಿಂಗ್ನೊಂದಿಗೆ ಉತ್ತಮ ಆದಾಯ ನೀಡುವ 5 ಯೋಜನೆಗಳಮಾಹಿತಿ ಇಲ್ಲಿದೆ.
ಬೆಂಗಳೂರು : ದೀರ್ಘಕಾಲದವರೆಗೆ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮೂಲಕ, ಕಂಪೌಂಡಿಂಗ್ ನ ಪ್ರಚಂಡ ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಇಕ್ವಿಟಿ ಮ್ಯೂಚುವಲ್ ಫಂಡ್ಗಳು ಷೇರು ಮಾರುಕಟ್ಟೆಯಲ್ಲಿ ಏರಿಳಿತದ ನಡುವೆಯೂ ಉತ್ತಮ ಆದಾಯವನ್ನು ನೀಡಿವೆ. 5 ಸ್ಟಾರ್ ರೇಟಿಂಗ್ನೊಂದಿಗೆ ಉತ್ತಮ ಆದಾಯ ನೀಡುವ 5 ಯೋಜನೆಗಳಮಾಹಿತಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ನಿಧಿಯು ಕ್ವಾಂಟ್ ಇನ್ಫ್ರಾಸ್ಟ್ರಕ್ಚರ್ ಫಂಡ್ಗೆ ಸೇರಿದೆ. ಮೂರು ವರ್ಷಗಳಲ್ಲಿ ವಾರ್ಷಿಕ ಸರಾಸರಿ 51.74% ಆದಾಯವನ್ನು ನೀಡುತ್ತಿದೆ. ಇದರಲ್ಲಿ ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು ಕನಿಷ್ಠ 1,000 ರೂ.ಗಳ SIP ಅನ್ನು ಮಾಡಬೇಕು.
ಕೆನರಾ ರೋಬೆಕೊ ಸ್ಮಾಲ್ ಕ್ಯಾಪ್ ಫಂಡ್ ವಾರ್ಷಿಕವಾಗಿ 46.52% ನಷ್ಟು ಲಾಭವನ್ನು ನೀಡುತ್ತಿದೆ. ಜುಲೈ 31, 2022 ರಂತೆ ನಿಧಿಯ ಒಟ್ಟು ಆಸ್ತಿ 3,074 ಕೋಟಿ ರೂ. ಇದರಲ್ಲಿ, 1,000 ರೂಪಾಯಿ SIP ನೊಂದಿಗೆ ಹೂಡಿಕೆ ಪ್ರಾರಂಭಿಸಬಹುದು.
ಕ್ವಾಂಟ್ ಟ್ಯಾಕ್ಸ್ ಪ್ಲಾನ್ ವಾರ್ಷಿಕ ಸರಾಸರಿ 45.46% ಆದಾಯವನ್ನು ನೀಡಿದೆ. ಇದರಲ್ಲಿ ತಿಂಗಳಿಗೆ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕು. 31 ಜುಲೈ 2022 ರಂತೆ ಇದರ ಒಟ್ಟು ಆಸ್ತಿ 1,584 ಕೋಟಿ ರೂ.
PGIM ಇಂಡಿಯಾ ಮಿಡ್ಕ್ಯಾಪ್ ಆಪರ್ಚುನಿಟೀಸ್ ಫಂಡ್ ವಾರ್ಷಿಕ ಸರಾಸರಿ 42.34% ಆದಾಯವನ್ನು ನೀಡಿದೆ. ಇಲ್ಲಿಯೂ ಕನಿಷ್ಠ 1000 ರೂ.ಗಳಿಂದ ಹೂಡಿಕೆ ಆರಂಭಿಸಬಹುದು. 31 ಜುಲೈ 2022 ರಂತೆ ಇದರ ಆಸ್ತಿ 6,023 ಕೋಟಿ ರೂ.
ಬ್ಯಾಂಕ್ ಆಫ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ನಲ್ಲಿ ಪ್ರತಿ ತಿಂಗಳು ಕನಿಷ್ಠ 1000 ರೂಪಾಯಿಗಳೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಇದರ ಒಟ್ಟು ಆಸ್ತಿ ರೂ 333 ಕೋಟಿ ಮತ್ತು ವೆಚ್ಚದ ಅನುಪಾತವು 1.18% ಆಗಿದೆ.