Flipkart Big Billion Days 2022: 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ 43 ಇಂಚಿನ ಸ್ಮಾರ್ಟ್ ಟಿವಿಗಳು ಲಭ್ಯ..!

Flipkart Big Billion Days 2022 : ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ದೀಪಾವಳಿಯ ಮೊದಲು ಈ ಸೇಲ್ ನಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡಲಾಗುತ್ತಿದೆ.


Flipkart Big Billion Days 2022 : ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ದೀಪಾವಳಿಯ ಮೊದಲು ಈ ಸೇಲ್ ನಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಈ ಸೇಲ್ ನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ದೀಪಾವಳಿಯ ಸಮಯದಲ್ಲಿ ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಸೇಲ್ ನಲ್ಲಿ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು.  43-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಖರೀದಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಥಾಮ್ಸನ್ 9ಆರ್ ಪ್ರೊ  43 ಇಂಚಿನ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ  47,990 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯನ್ನು 17,999ರೂ. ಗೆ ಖರೀದಿಸಬಹುದು.   ಅಂದರೆ ಈ ಟಿವಿ ಮೇಲೆ ಶೇ.62ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಟಿವಿಯಲ್ಲಿ 11,000 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ. ಹಳೆಯ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡಿಕೊಂಡರೆ ತುಂಬಾ ರಿಯಾಯಿತಿ ಪಡೆಯಬಹುದು. ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಟಿವಿಯನ್ನು ಕೇವಲ  8,999 ರೂ.ಗೆ ಖರೀದಿಸಬಹುದು.   

2 /5

ಬ್ಲಾಪುಂಕ್ಟ್ ಸೈಬರ್ ಸೌಂಡ್ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 41,999 ರೂ. ಫ್ಲಿಪ್‌ಕಾರ್ಟ್‌ನಲ್ಲಿ  ಇದು, 24,999 ರೂ,ಗೆ ಲಭ್ಯವಿದೆ.  ಆಕ್ಸೆಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, 2,250 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.  ಅಲ್ಲದೆ,  11,000 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ.  ಈ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ,  ಟಿವಿಯನ್ನು  11,749 ರೂ.ಗೆ  ಖರೀದಿಸಿ ತರಬಹುದು. 

3 /5

ಕೊಡಾಕ್  7ಎಕ್ಸ್ ಪ್ರೊ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 33,999 ರೂ. ಫ್ಲಿಪ್‌ಕಾರ್ಟ್‌ನಲ್ಲಿ 19,999 ರೂ.ಗೆ ಲಭ್ಯವಿದೆ. ಟಿವಿಯಲ್ಲಿ 11 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಇದೆ.  ಈ ಮೂಲಕ ಟಿವಿಯನ್ನು  8,999 ರೂ.ಗೆ ಖರೀದಿಸಬಹುದು.

4 /5

ಏಸರ್ ಐ ಸರಣಿಯ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 34,990 ರೂ. ಫ್ಲಿಪ್‌ಕಾರ್ಟ್‌ನಲ್ಲಿ 21,999 ರೂ. ಗೆ ಲಭ್ಯವಿದೆ. ಇದರ ಮೇಲೆ 11,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಅದರ ನಂತರ ಟಿವಿ ಬೆಲೆ 10,999 ರೂ. ಗೆ ಇಳಿಯುತ್ತದೆ. ಟಿವಿಗಳ ಮೇಲೆ ಬ್ಯಾಂಕ್ ಆಫರ್ ಕೂಡ ಇದ್ದು, ಇದರಿಂದ ಟಿವಿಗಳ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

5 /5

 ಇನ್ಫಾಲ್ಕನ್ ಬೈ ಟಿಸಿಎಲ್ ಕೆ 61 43 ಇಂಚಿನ ಸ್ಮಾರ್ಟ್ ಟಿವಿಯು  47,990 ರೂ. ಲಾಂಚ್ ಬೆಲೆಯನ್ನು ಹೊಂದಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ17,999 ಗೆ ಲಭ್ಯವಿದೆ. ಇದರ ಮೇಲೆ 11,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಈ ಮೂಲಕ ಟಿವಿ ಬೆಲೆ 6,999 ರೂ.ಗೆ ಇಳಿಯುತ್ತದೆ.