Women's Premier League 2023: ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಮುಖಾಮುಖಿಯಾಗಿತ್ತು.
ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಹತ್ತು ವಿಕೆಟ್ಗಳಿಂದ ಸೋಲಿಸಿದ ಯುಪಿ ವಾರಿಯರ್ಜ್ ಅದ್ಭುತ ಆಟವನ್ನಾಡಿದೆ.
ಇನ್ನು ಯುಪಿ ತಂಡದ ಅಲಿಸ್ಸಾ ಹೀಲಿ 47 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 96 ರನ್ ಗಳಿಸಿದ್ದಾರೆ. ಇದು ಒಟ್ಟಾರೆ ಪಂದ್ಯಾವಳಿಯಲ್ಲಿ ಕಲೆ ಹಾಕಿರುವ ಗರಿಷ್ಠ ಸ್ಕೋರ್ ಆಗಿದೆ. ಈ ದಾಖಲೆ ಅದ್ಭುತವಾಗಿದ್ದು ಪುರುಷರಿಂದಲೂ ಕಷ್ಟಸಾಧ್ಯವಾಗುವ ಪಂದ್ಯ ಆಡಿದ್ದಾರೆ ಅಲಿಸ್ಸಾ.
ಆರಂಭಿಕ ಜೊತೆಗಾರ್ತಿ ದೇವಿಕಾ ವೈದ್ಯ 31 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ 36 ರನ್ಗಳನ್ನು ನೀಡಿದರು, ವಾರಿಯರ್ಜ್ ಕೇವಲ 13 ಓವರ್’ಗಳಲ್ಲಿ 139 ರನ್ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ.
ಇನ್ನು ಬೆಂಗಳೂರು ತಂಡಕ್ಕೆ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಸೋಲಾಗಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾದ ವಿಕೆಟ್ಕೀಪರ್-ಬ್ಯಾಟರ್ ಅಲಿಸ್ಸಾ ಅವರು ವಾರಿಯರ್ಜ್ ಬೌಲಿಂಗ್ ದಾಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟೋನ್ ಒಟ್ಟು ಏಳು ವಿಕೆಟ್ಗಳನ್ನು ಕಬಳಿಸುವ ಮೂಲಕ ಬೆಂಗಳೂರನ್ನು 19.3 ಓವರ್ಗಳಲ್ಲಿ 138 ರನ್ಗಳಿಗೆ ಆಲೌಟ್ ಮಾಡಿದ್ದಾರೆ.