17-18 ವರ್ಷಗಳ ಕಾಲ ಕೆಲವು ರಾಶಿಯವರ ಅದೃಷ್ಟ ಕೈ ಹಿಡಿಯುವುದು. ಇವರು ಮಾಡುವ ಪ್ರತಿ ಕಾರ್ಯ ಕೈ ಗೂಡುವುದು.
ಯಮ 17 ವರ್ಷ 26 ದಿನಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. 17 ವರ್ಷಗಳ ಕಾಲ ಮಕರ ರಾಶಿಯಲ್ಲಿಯೇ ಇರುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಕೈ ಹಿಡಿಯುವುದು.
ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಆದರೆ ಪ್ಲೂಟೊ ಎಂಬ ಸಣ್ಣ ಗ್ರಹವಿದೆ. 2006 ರಲ್ಲಿ, ನಾಸಾ ಈ ಗ್ರಹವನ್ನು ಸೌರವ್ಯೂಹದ ಭಾಗವಾಗಿ ತಿರಸ್ಕರಿಸಿತು.ಆದರೆ ಹಿಂದೂ ಧರ್ಮಗ್ರಂಥಗಳಲ್ಲಿ ಇದು ಇನ್ನೂ ಬಹಳ ಮುಖ್ಯವಾಗಿದೆ.
ಈ ಗ್ರಹವನ್ನು ಯಮ ಎಂದು ಕರೆಯಲಾಗುತ್ತದೆ. ಯಮ ಸುಮಾರು 17-18 ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ. ಯಮ ಶನಿಯ ಮಕರ ರಾಶಿಯಲ್ಲಿದ್ದಾನೆ. ಶನಿ ಮತ್ತು ಯಮ ಕೂಡಿ ಬಂದರೆ ಕೆಲವು ರಾಶಿಯವರಿಗೆ ಸಾಕಷ್ಟು ಲಾಭಗಳಿಸಬಹುದು.
ವೃಷಭ ರಾಶಿ: ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಬಹುದು. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಬಹುದು. ಇದಲ್ಲದೆ, ಸಂಪತ್ತು ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಬಲಗೊಳ್ಳಬಹುದು.
ಕಟಕ ರಾಶಿ : ಈ ರಾಶಿಯ ಜನರಿಗೆ ಅತಿ ಹೆಚ್ಚಿನ ಪ್ರಯೋಜನವಾಗುವುದು. ಎಲ್ಲಾ ಕ್ಷೇತ್ರ ಗಳಲ್ಲಿಯೂ ಯಶಸ್ಸು ಪಡೆಯಬಹುದು. 17 ವರ್ಷಗಳ ಕಾಲ ನೆಮ್ಮದಿಯ ಜೀವನ ನಿಮ್ಮದು
ತುಲಾ ರಾಶಿ :ತುಲಾ ರಾಶಿಯವರ ಜೀವನದಲ್ಲಿ ಹಠಾತ್ ಸಂಪತ್ತನ್ನು ತರಬಹುದು. ಇದರೊಂದಿಗೆ ವಾಹನ, ಸ್ವಂತ ಮನೆಯ ಸುಖ ಪಡೆಯಬಹುದು. ನಿಮ್ಮ ಎಲ್ಲಾ ರೀತಿಯ ಕಷ್ಟಗಳಿಗೆ ತೆರೆ ಬೀಳಬಹುದು.
ವೃಶ್ಚಿಕ ರಾಶಿ :ಈ ರಾಶಿಯವರ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಹೊಂದಬಹುದು. ಮಲಗಿರುವ ಅದೃಷ್ಟ ಎದ್ದೇಳುವುದು. ಜೀವನದಲ್ಲಿ ಸಂತೋಷ ತುಂಬುವುದು. ದೀರ್ಘಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಧನು ರಾಶಿ :ಈ ರಾಶಿಯವರು ಆಕಸ್ಮಿಕ ಸಂಪತ್ತನ್ನು ಪಡೆಯಬಹುದು. ಇದರೊಂದಿಗೆ, ಉಳಿತಾಯದಲ್ಲಿಯೂ ಯಶಸ್ವಿಯಾಗುತ್ತೀರಿ. ಹಣಕಾಸಿನ ಕೊರತೆ ನೀಗುವುದು.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.