USA, UK ಅಲ್ಲ… ಜಗತ್ತಿನಲ್ಲಿ ಭಾರತೀಯರಿಗೆ ಅತೀ ಹೆಚ್ಚು ಸಂಬಳ ನೀಡೋದು ಈ ದೇಶ!

World Highest Paid Country: ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ದೇಶಗಳನ್ನು ವರದಿಯು ಹೈಲೈಟ್ ಮಾಡಿದೆ. ಈ ಪಟ್ಟಿಯಲ್ಲಿ ಅಗ್ರ ಮೂರು ದೇಶಗಳೆಂದರೆ ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್ ಮತ್ತು ಸಿಂಗಾಪುರ.

Written by - Bhavishya Shetty | Last Updated : Jul 5, 2023, 02:49 PM IST
    • 23 ದೇಶಗಳ ಜನರು ಸರಾಸರಿ 1 ಲಕ್ಷಕ್ಕಿಂತ ಕಡಿಮೆ ವೇತವನ್ನು ಪಡೆಯುತ್ತಿದ್ದಾರೆ
    • ಆ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಜಾಗತಿಕವಾಗಿ 29 ನೇ ಸ್ಥಾನದಲ್ಲಿದೆ.
    • ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ದೇಶಗಳನ್ನು ವರದಿಯು ಹೈಲೈಟ್ ಮಾಡಿದೆ
USA, UK ಅಲ್ಲ… ಜಗತ್ತಿನಲ್ಲಿ ಭಾರತೀಯರಿಗೆ ಅತೀ ಹೆಚ್ಚು ಸಂಬಳ ನೀಡೋದು ಈ ದೇಶ!  title=
World Highest Paid Country

World Highest Paid Country: ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದ 23 ದೇಶಗಳ ಜನರು ಸರಾಸರಿ 1 ಲಕ್ಷಕ್ಕಿಂತ ಕಡಿಮೆ ವೇತವನ್ನು ಪಡೆಯುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಆ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಜಾಗತಿಕವಾಗಿ 29 ನೇ ಸ್ಥಾನದಲ್ಲಿದೆ. ಇನ್ನು ಟರ್ಕಿ, ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ಬಾಂಗ್ಲಾದೇಶ, ವೆನೆಜುವೆಲಾ, ನೈಜೀರಿಯಾ, ಈಜಿಪ್ಟ್ ಮತ್ತು ಪಾಕಿಸ್ತಾನದಂತಹ ದೇಶಗಳು ಭಾರತಕ್ಕಿಂತ ಮತ್ತಷ್ಟು ಕೆಳಗಿದೆ.

ಇದನ್ನೂ ಓದಿ: ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ BSYರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ?: ಕಾಂಗ್ರೆಸ್

ಇನ್ನು ಜನರು ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ದೇಶಗಳನ್ನು ವರದಿಯು ಹೈಲೈಟ್ ಮಾಡಿದೆ. ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್, ಸಿಂಗಾಪುರ್, ಯುಎಸ್ಎ, ಐಲ್ಯಾಂಡ್, ಕತಾರ್, ಡೆನ್ಮಾರ್ಕ್, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾಗಳು ತಮ್ಮ ನಾಗರಿಕರಿಗೆ ಅತ್ಯಧಿಕ ಸರಾಸರಿ ಮಾಸಿಕ ವೇತನವನ್ನು ನೀಡುತ್ತವೆ ಎಂಬುದು ಈ ವರದಿಯಿಂದ ತಿಳಿದುಬಂದಿದೆ.

ಈ ಪಟ್ಟಿಯಲ್ಲಿ ಅಗ್ರ ಮೂರು ದೇಶಗಳೆಂದರೆ ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್ ಮತ್ತು ಸಿಂಗಾಪುರ., ಅಲ್ಲಿ ನಾಗರಿಕರು ತಿಂಗಳಿಗೆ ಸರಾಸರಿ 4 ಲಕ್ಷ ರೂ ಗಿಂತ ಹೆಚ್ಚು ವೇತನ ಪಡೆಯುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ವಿಟ್ಜರ್ಲೆಂಡ್‌ನಲ್ಲಿ ಸರಾಸರಿ ಮಾಸಿಕ ವೇತನ ರೂ. 4,98,567. ಮತ್ತೊಂದೆಡೆ ಲಕ್ಸೆಂಬರ್ಗ್‌ ನಲ್ಲಿ ರೂ. 4,10,156, ಮತ್ತು ಸಿಂಗಾಪುರದಲ್ಲಿ ರೂ. 4,08,030. ಇದೆ

ಯುಎಸ್ಎ, ಐಲ್ಯಾಂಡ್, ಕತಾರ್, ಡೆನ್ಮಾರ್ಕ್, ಯುಎಇ, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ನಾರ್ವೆ, ಜರ್ಮನಿ, ಕೆನಡಾ, ಯುಕೆ, ಫಿನ್ಲ್ಯಾಂಡ್, ಆಸ್ಟ್ರಿಯಾ, ಸ್ವೀಡನ್, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಸ್ಪೇನ್, ಇಟಲಿ, ದಕ್ಷಿಣ ಆಫ್ರಿಕಾ, ಚೀನಾ, ಗ್ರೀಸ್, ಮೆಕ್ಸಿಕೋ ಮತ್ತು ರಷ್ಯಾದ ನಾಗರಿಕರು ವಿವಿಧ ರೀತಿಯ ಮಾಸಿಕ ವೇತನಗಳನ್ನು ಗಳಿಸುತ್ತಾರೆ.

ಸರಾಸರಿ ಮಾಸಿಕ ವೇತನವನ್ನು ಹೊಂದಿರುವ ದೇಶಗಳ ಪಟ್ಟಿ ಈ ಕೆಳಗಿನಂತಿದೆ:

1. ಸ್ವಿಟ್ಜರ್ಲೆಂಡ್: $6,096 (ರೂ. 4,98,567)

2. ಲಕ್ಸೆಂಬರ್ಗ್: $5,015 (ರೂ. 4,10,156)

3. ಸಿಂಗಾಪುರ: $4,989 (ರೂ. 4,08,030)

4. ಯುಎಸ್ಎ: $4,245 (ರೂ. 3,47,181)

5. ಐಲ್ಯಾಂಡ್: $4,007 (ರೂ. 3,27,716)

6. ಕತಾರ್: $3,982 (ರೂ. 3,25,671)

7. ಡೆನ್ಮಾರ್ಕ್: $3,538 (ರೂ. 2,89,358)

8. ಯುಎಇ: $3,498 (ರೂ. 2,86,087)

9. ನೆದರ್ಲ್ಯಾಂಡ್ಸ್: $3,494 (ರೂ. 2,85,756)

10. ಆಸ್ಟ್ರೇಲಿಯಾ: $3,391 (ರೂ. 2,77,332)

11. ನಾರ್ವೆ: $3,289 (ರೂ. 2,68,990)

12. ಜರ್ಮನಿ: $3,054 (ರೂ. 2,49,771)

13. ಕೆನಡಾ: $2,997 (ರೂ. 2,45,109)

14. ಯುಕೆ: $2,924 (ರೂ. 2,39,139)

15. ಫಿನ್‌ಲ್ಯಾಂಡ್: $2,860 (ರೂ. 2,33,905)

16. ಆಸ್ಟ್ರಿಯಾ: $2,724 (ರೂ. 2,22,782)

17. ಸ್ವೀಡನ್: $2,721 (ರೂ. 2,22,534)

18. ಫ್ರಾನ್ಸ್: $2,542 (ರೂ. 2,07,894)

19. ಜಪಾನ್: $2,427 (ರೂ. 1,98,489)

20. ದಕ್ಷಿಣ ಕೊರಿಯಾ: $2,243 (ರೂ. 1,83,441)

21. ಸೌದಿ ಅರೇಬಿಯಾ: $2,002 (ರೂ. 1,63,731)

22. ಸ್ಪೇನ್: $1,940 (ರೂ. 1,58,660)

23. ಇಟಲಿ: $1,728 (ರೂ. 1,41,322)

24. ದಕ್ಷಿಣ ಆಫ್ರಿಕಾ: $1,221 (ರೂ. 99,857)

25. ಚೀನಾ: $1,069 (ರೂ. 87,426)

26. ಗ್ರೀಸ್: $914 (ರೂ. 74,749)

27. ಮೆಕ್ಸಿಕೋ: $708 (ರೂ. 57,902)

28. ರಷ್ಯಾ: $645 (ರೂ. 52,750)

29. ಭಾರತ: $573 (ರೂ. 46,861)

30. ಟರ್ಕಿ: $486 (ರೂ. 39,746)

31. ಬ್ರೆಜಿಲ್: $418 (ರೂ. 34,185)

32. ಅರ್ಜೆಂಟೀನಾ: $415 (ರೂ. 33,939)

33. ಇಂಡೋನೇಷ್ಯಾ: $339 (ರೂ. 27,724)

34. ಕೊಲಂಬಿಯಾ: $302 (ರೂ. 24,698)

35. ಬಾಂಗ್ಲಾದೇಶ: $255 (ರೂ. 20,854)

36. ವೆನೆಜುವೆಲಾ: $179 (ರೂ. 14,639)

37. ನೈಜೀರಿಯಾ: $160 (ರೂ. 13,085)

38. ಈಜಿಪ್ಟ್: $145 (ರೂ. 11,858)

39. ಪಾಕಿಸ್ತಾನ: $145 (ರೂ. 11,858)

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News