ಎಲ್ಲಿಗೆ ತಲುಪಿದೆ ಚಂದ್ರಯಾನ-3? ಚಂದ್ರನ ಮೇಲೆ ಕಾಲಿಡಲು ಇನ್ನೆಷ್ಟು ದಿನವಿದೆ? ಇಸ್ರೋ ನೀಡಿದೆ ಪಿನ್ ಟು ಪಿನ್ ಮಾಹಿತಿ

Chandrayaan-3: ಚಂದ್ರಯಾನ-3 ಜುಲೈ 25 ರ ಸಂಜೆ ಐದನೇ ಕಕ್ಷೆಯನ್ನು ಪ್ರವೇಶಿಸಿತು. ಈ ಬಳಿಕ ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ, ವೇಳಾಪಟ್ಟಿಯಂತೆ ಆಗಸ್ಟ್ 1 ರಂದು ಚಂದ್ರನ ಕಡೆಗೆ ಚಲಿಸುತ್ತದೆ.

Written by - Bhavishya Shetty | Last Updated : Jul 26, 2023, 12:46 PM IST
    • ಚಂದ್ರಯಾನ-3 ಪ್ರಸ್ತುತ ಭೂಮಿಯ ಐದನೇ ಕಕ್ಷೆಯಲ್ಲಿದ್ದು, ನಿರಂತರವಾಗಿ ಭೂಮಿಯನ್ನು ಸುತ್ತುತ್ತಿದೆ.
    • ಇಸ್ರೋದಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಯಾನ-3 ಜುಲೈ 25 ರ ಸಂಜೆ ಐದನೇ ಕಕ್ಷೆಯನ್ನು ಪ್ರವೇಶಿಸಿತು.
    • ಈ ಬಳಿಕ ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ, ವೇಳಾಪಟ್ಟಿಯಂತೆ ಆಗಸ್ಟ್ 1 ರಂದು ಚಂದ್ರನ ಕಡೆಗೆ ಚಲಿಸುತ್ತದೆ.
ಎಲ್ಲಿಗೆ ತಲುಪಿದೆ ಚಂದ್ರಯಾನ-3? ಚಂದ್ರನ ಮೇಲೆ ಕಾಲಿಡಲು ಇನ್ನೆಷ್ಟು ದಿನವಿದೆ? ಇಸ್ರೋ ನೀಡಿದೆ ಪಿನ್ ಟು ಪಿನ್ ಮಾಹಿತಿ title=
Chandrayaan-3

Chandrayaan-3 News Latest Update: 14 ಜುಲೈ 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸದ್ಯ ತನ್ನ ಗಮ್ಯಸ್ಥಾನದತ್ತ ಸಾಗುತ್ತಿದೆ. ಭಾರತ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಜನರು ಮತ್ತು ಬಾಹ್ಯಾಕಾಶದ ಆಳವನ್ನು ಮೇಲ್ವಿಚಾರಣೆ ಮಾಡುವ ವಿಜ್ಞಾನಿಗಳು ಚಂದ್ರಯಾನ -3ರ ಬಗ್ಗೆ ಭಾರೀ ಕುತೂಹಲ ಹೊಂದಿದ್ದಾರೆ. ಸದ್ಯ ಇಸ್ರೋ ತನ್ನ ಕನಸಿನ ಕೂಸು ಯಾವ ಕಕ್ಷೆಗೆ ತಲುಪಿದೆ, ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದರ ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಇದನ್ನೂ ಓದಿ: Viral Video: ಜನನಿಬಿಡ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಐಷಾರಾಮಿ BMW ಕಾರು..!

ಭೂಮಿಯ 5ನೇ ಕಕ್ಷೆ ಪ್ರವೇಶಿಸಿದ ಚಂದ್ರಯಾನ-3:

ಚಂದ್ರಯಾನ-3 ಪ್ರಸ್ತುತ ಭೂಮಿಯ ಐದನೇ ಕಕ್ಷೆಯಲ್ಲಿದ್ದು, ನಿರಂತರವಾಗಿ ಭೂಮಿಯನ್ನು ಸುತ್ತುತ್ತಿದೆ. ಇಸ್ರೋದಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಯಾನ-3 ಜುಲೈ 25 ರ ಸಂಜೆ ಐದನೇ ಕಕ್ಷೆಯನ್ನು ಪ್ರವೇಶಿಸಿತು. ಈ ಬಳಿಕ ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ, ವೇಳಾಪಟ್ಟಿಯಂತೆ ಆಗಸ್ಟ್ 1 ರಂದು ಚಂದ್ರನ ಕಡೆಗೆ ಚಲಿಸುತ್ತದೆ.

ಆಗಸ್ಟ್ 1ರ ವೇಳೆಗೆ ಚಂದ್ರನ ಕಕ್ಷೆಗೆ ಪ್ರವೇಶ:

ಇಸ್ರೋದಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಯಾನ-3 ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿದೆ. ಅದನ್ನು ಜುಲೈ 31 ಮತ್ತು ಆಗಸ್ಟ್ 1 ರ ರಾತ್ರಿ ಚಂದ್ರನ ಕಡೆಗೆ ಕಳುಹಿಸಲಾಗುತ್ತದೆ. ಅಂದು ಚಂದ್ರಯಾನ-3 ಭೂಮಿಯ ಕಕ್ಷೆಯಿಂದ ನಿರ್ಗಮಿಸಿ ಚಂದ್ರನ ಕಕ್ಷೆ ಸೇರಲಿದೆ. ಇದರ ನಂತರ, ಚಂದ್ರಯಾನ-3 ಚಂದ್ರನ ಸುತ್ತ ಸುತ್ತಿ, ಆಗಸ್ಟ್ 23 ರಂದು ಚಂದ್ರನ ಮೇಲ್ಮೈಗೆ ಕಾಲಿಡಲಿದೆ.

ಇದನ್ನೂ ಓದಿ: Rs 99,999 Lost In One Click! ಒಂದೇ ಕ್ಲಿಕ್‌ನಿಂದ 99,999 ರೂಪಾಯಿ ಕಳೆದುಕೊಂಡ ವ್ಯಕ್ತಿ!

ಚಂದ್ರಯಾನ-3 ಅನ್ನು ಜುಲೈ 14, 2023 ರಂದು ಮಧ್ಯಾಹ್ನ 2.35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸುಮಾರು 40 ದಿನಗಳ ಪ್ರಯಾಣದ ನಂತರ ಚಂದ್ರನನ್ನು ತಲುಪುತ್ತದೆ. ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ಪ್ರತಿಯೊಂದು ಚಟುವಟಿಕೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News