NRI News: ಕುಡಿದ ಮತ್ತಿನಲ್ಲಿ 10 ವರ್ಷಗಳ ಹಿಂದೆ ಇಬ್ಬರ ಪ್ರಾಣ ತೆಗೆದಿದ್ದ ಬ್ಯೂಟಿಷಿಯನ್ ಖಿನ್ನತೆಗೆ ಬಲಿ!

NRI News: ಮದ್ಯದ ಅಮಲಿನಲ್ಲಿ SUV ಕಾರು ಚಲಾಯಿಸುತ್ತಿದ್ದ ನೂರಿಯಾ ಹವೇಲಿವಾಲಾ ಚೆಕ್ ಪೋಸ್ಟ್ ಬಳಿಯಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ದೀನಾನಾಥ್ ಶಿಂಧೆ ಮತ್ತು ಬೈಕ್ ಸವಾರ ಅಫ್ಜಲ್ ಇಬ್ರಾಹಿಂ ಸೇರಿದಂತೆ ನಾಲ್ವರಿಗೆ ಡಿಕ್ಕಿ ಹೊಡೆದಿದ್ದಳು.

Written by - Bhavishya Shetty | Last Updated : Jul 11, 2023, 01:35 PM IST
    • ನೂರಿಯಾ ಹವೇಲಿವಾಲಾ ಎಂಬಾಕೆ ಕಳೆದ ದಿನ ಖಿನ್ನತೆಗೆ ಬಲಿಯಾಗಿದ್ದಾಳೆ
    • 10 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರನ್ನು ಕೊಂದಿದ್ದ ಬ್ಯೂಟಿಷಿಯನ್
    • 2010ನೇ ಇಸವಿಯ ಜನವರಿ ತಿಂಗಳಲ್ಲಿ ಮಧ್ಯರಾತ್ರಿ ದುರ್ಘಟನೆಯೊಂದು ನಡೆದಿತ್ತು
NRI News: ಕುಡಿದ ಮತ್ತಿನಲ್ಲಿ 10 ವರ್ಷಗಳ ಹಿಂದೆ ಇಬ್ಬರ ಪ್ರಾಣ ತೆಗೆದಿದ್ದ ಬ್ಯೂಟಿಷಿಯನ್ ಖಿನ್ನತೆಗೆ ಬಲಿ! title=
Nooriya Haveliwala

NRI Nooriya Haveliwala: ಸುಮಾರು 10 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಓರ್ವ ಪೊಲೀಸ್ ಅಧಿಕಾರಿ ಮತ್ತು ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ, ನೂರಿಯಾ ಹವೇಲಿವಾಲಾ ಎಂಬಾಕೆ ಕಳೆದ ದಿನ ಖಿನ್ನತೆಗೆ ಬಲಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಈ ರಾಶಿಯವರಿಗೆ ಹಣದ ಮಳೆಯನ್ನೇ ಕರುಣಿಸುವ ಸೂರ್ಯದೇವ: ಬಾಳಲ್ಲಿ ಸುಖವೃದ್ಧಿ-ಉದ್ಯೋಗದಲ್ಲಿ ಇನ್ಕ್ರಿಮೆಂಟ್!

2010ನೇ ಇಸವಿಯ ಜನವರಿ ತಿಂಗಳಲ್ಲಿ ಮಧ್ಯರಾತ್ರಿ ದುರ್ಘಟನೆಯೊಂದು ನಡೆದಿತ್ತು. ಮದ್ಯದ ಅಮಲಿನಲ್ಲಿ SUV ಕಾರು ಚಲಾಯಿಸುತ್ತಿದ್ದ ನೂರಿಯಾ ಹವೇಲಿವಾಲಾ ಚೆಕ್ ಪೋಸ್ಟ್ ಬಳಿಯಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ದೀನಾನಾಥ್ ಶಿಂಧೆ ಮತ್ತು ಬೈಕ್ ಸವಾರ ಅಫ್ಜಲ್ ಇಬ್ರಾಹಿಂ ಸೇರಿದಂತೆ ನಾಲ್ವರಿಗೆ ಡಿಕ್ಕಿ ಹೊಡೆದಿದ್ದಳು. ಆಕೆ ಡ್ರೈವಿಂಗ್ ಮಾಡುವಾಗ ಬಿಯರ್ ಕುಡಿಯುತ್ತಿದ್ದಳು ಎಂದು ತಿಳಿದುಬಂದಿತ್ತು. ಈ ಬಳಿಕ ಆಕೆಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.

ದಶಕದಷ್ಟು ಹಳೆಯದಾದ ಕುಖ್ಯಾತ ಪ್ರಕರಣ!

ಅಮೆರಿಕದಲ್ಲಿ ಬ್ಯೂಟಿಷಿಯನ್ ಆಗಿದ್ದ ನೂರಿಯಾ ಹವೇಲಿವಾಲಾ ಅವರು ತಮ್ಮ ಪೋಷಕರೊಂದಿಗೆ ಭಾರತಕ್ಕೆ ಹಿಂತಿರುಗಿ ದಕ್ಷಿಣ ಮುಂಬೈನಲ್ಲಿ ನೆಲೆಸಿದ್ದರು. ಆದರೆ ಆಕೆ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿದುಬಂದಿದೆ. ಆಕೆ ಮತ್ತೆ ಅಮೇರಿಕಾಕ್ಕೆ ಹೋಗಬೇಕೆಂದು ಬಯಸಿದ್ದಳು ಆದರೆ ಪ್ರಕರಣದ ಕಾರಣ ಹೋಗಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: 1 ಓವರ್-33 ರನ್! ಈ ಸೂಪರ್ ಬ್ಯಾಟ್ಸ್’ಮನ್ ಖದರ್’ಗೆ ನಡುಗಿದ ಎದುರಾಳಿ! ವಿಡಿಯೋ ನೋಡಿ

ಈ ಪ್ರಕರಣದಲ್ಲಿ ಎಲ್‌ಟಿ ಮಾರ್ಗ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ ಜಾಮೀನು ಪಡೆದು ಹೊರಬಂದಿದ್ದಳು ಎಂದು ತಿಳಿದುಬಂದಿದೆ. ನ್ಯಾಯಾಲಯ ಆಕೆಗೆ ಶಿಕ್ಷೆ ವಿಧಿಸಿದ ನಂತರ, ಆಕೆಯನ್ನು ಮತ್ತೆ ಪೊಲೀಸರು ಬಂಧಿಸಿದ್ದರು. ಹೀಗೆ ಐದು ವರ್ಷಗಳ ಕಾಲ ಜೈಲಿನಲ್ಲೇ ಕಾಲ ಕಳೆದಿದ್ದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News