NRI News: ಸಾಗರೋತ್ತರ ಶಿಕ್ಷಣ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎನ್ನುತ್ತಾರೆ ಭಾರತೀಯ ವಿದ್ಯಾರ್ಥಿಗಳು

Foreign Education: ಶೇ.83ರಷ್ಟು ಭಾರತೀಯ ವಿದ್ಯಾರ್ಥಿಗಳು ಸಾಗರೋತ್ತರ ಪದವಿಯು ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಂಬುತ್ತಾರೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಶೇ.42 ರಷ್ಟು ಭಾರತೀಯ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನು ತಮ್ಮ ಮೊದಲ ಭಾಷೆಯಾಗಿ ಹೊಂದಿರದ ಆಂಗ್ಲೋಫೋನ್ ದೇಶಗಳನ್ನು ಮೀರಿದ ಸ್ಥಳಗಳಿಗೆ ಹೋಗಲು ಬಯಸುತ್ತಾರೆ ಎಂದು ವರದಿಯ ಹೇಳಿಕೆಯೊಂದು ತಿಳಿಸಿದೆ.

Written by - Nitin Tabib | Last Updated : Sep 27, 2022, 08:40 PM IST
  • ಭಾರತೀಯ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ವಿಸ್ತರಿಸುತ್ತಿದ್ದಾರೆ ಮತ್ತು ಸಾಗರೋತ್ತರ ಶಿಕ್ಷಣ ತಾಣದ ಆದ್ಯತೆಗಳಲ್ಲಿ ಹೆಚ್ಚು ಹೊಂದಿಕೊಳ್ಳುತ್ತಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
  • ಈ ಆಯ್ಕೆಯನ್ನು ಮಾಡಲು ಅವರು ಪರಿಗಣಿಸುತ್ತಿರುವ ಅಂಶಗಳು ವಿಶ್ವವಿದ್ಯಾನಿಲಯ ಶ್ರೇಯಾಂಕ, ವಿದ್ಯಾರ್ಥಿವೇತನ, ಜೀವನ ವೆಚ್ಚ ಇತ್ಯಾದಿಗಳನ್ನು ಒಳಗೊಂಡಿವೆ
NRI News: ಸಾಗರೋತ್ತರ ಶಿಕ್ಷಣ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎನ್ನುತ್ತಾರೆ ಭಾರತೀಯ ವಿದ್ಯಾರ್ಥಿಗಳು title=
NRI News

Study Abroad: ಸಾಗರೋತ್ತರ ಪದವಿಗಳು ಉತ್ತಮ  ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತವೆ ಮತ್ತು ಸ್ಪರ್ಧೆಯಲ್ಲಿ ಎಡ್ಜ್ ಒದಗಿಸುತ್ತವೆ ಎಂದು ಶೇ.83 ರಷ್ಟು ಭಾರತೀಯ ವಿದ್ಯಾರ್ಥಿಗಳು ಭಾವಿಸುತ್ತಾರೆ. ಲೀಪ್-ಇಪ್ಸೋಸ್ ಸ್ಟ್ರಾಟಜಿ ಸ್ಟಡಿ ಅಬ್ರಾಡ್ ಔಟ್‌ಲುಕ್ ವರದಿ ಮಂಗಳವಾರ ಈ ಸಂಗತಿಯನ್ನು ಬಹಿರಂಗಪಡಿಸಿದ್ದು, ಶೇ.57 ರಷ್ಟು ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಸುಮಾರು ರೂ 3 ರಿಂದ 10 ಲಕ್ಷದ ನಡುವಿನ ಆದಾಯವನ್ನು ಸಾಗರೋತ್ತರ ಶಿಕ್ಷಣಕ್ಕಾಗಿ ಖರ್ಚು ಮಾಡುವತ್ತ ಒಲವು ತೋರುತ್ತವೆ ಎಂದು ವರದಿ ಹೇಳಿದೆ. ಭಾರತೀಯ ಜನಸಂಖ್ಯೆಯ ಒಂದು ದೊಡ್ಡ ವರ್ಗದಲ್ಲಿ ವಿದೇಶಿ ಶಿಕ್ಷಣ ಹೇಗೆ ಜನಪ್ರೀಯವಾಗುತ್ತಿದೆ ಎಂಬುದರ ಕುರಿತು ವರದಿಯು ವಿಮರ್ಶಾತ್ಮಕ ಒಳನೋಟವನ್ನು ಬಹಿರಂಗಪಡಿಸಿದೆ.

ಈ ಕುರಿತು ಮಾತನಾಡಿರುವ ಲೀಪ್ ಸಹ ಸಂಸ್ಥಾಪಕ ವೈಭವ್ ಸಿಂಗ್, "ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಯುತ್ತಿರುವ ಅಕಾಂಕ್ಷೆಗಳಿಂದ ಉತ್ತೇಜನ ಪಡೆದು ಭಾರತೀಯ ಸಾಗರೋತ್ತರ ಶಿಕ್ಷಣದ ಮಾರುಕಟ್ಟೆಯು ಸಾಕಷ್ಟು ಬೆಳೆಯುವ ನಿರೀಕ್ಷೆ ಇದೆ ಮತ್ತು 2025 ವೇಳೆಗೆ ಸುಮಾರು 20 ಲಕ್ಷ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಂತಾರಾಷ್ಟ್ರೀಯ ಶಿಕ್ಷಣಕ್ಕಾಗಿ 100 ಬಿಲಿಯನ್ ಡಾಲರ್ ವೆಚ್ಚ ಮಾಡಲಿದ್ದಾರೆ. ಇದೊಂದು ದೊಡ್ಡ ಅವಕಾಶವಾಗಿದ್ದು, ವಲಯದ ಹೊಸ ಉತ್ಪನ್ನಗಳು ಹಾಗೂ ಸೇವೆಗಳ ಬೇಡಿಕೆಯಲ್ಲಿ ಗಣನೀಯ ಏರಿಕೆ ನಿರೀಕ್ಷಿಸಬಹುದು" ಎಂದಿದ್ದಾರೆ. 

ಶೇ.83ರಷ್ಟು ಭಾರತೀಯ ವಿದ್ಯಾರ್ಥಿಗಳು ಸಾಗರೋತ್ತರ ಪದವಿಯು ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಂಬುತ್ತಾರೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಶೇ.42 ರಷ್ಟು ಭಾರತೀಯ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನು ತಮ್ಮ ಮೊದಲ ಭಾಷೆಯಾಗಿ ಹೊಂದಿರದ ಆಂಗ್ಲೋಫೋನ್ ದೇಶಗಳನ್ನು ಮೀರಿದ ಸ್ಥಳಗಳಿಗೆ ಹೋಗಲು ಬಯಸುತ್ತಾರೆ ಎಂದು ವರದಿಯ ಹೇಳಿಕೆಯೊಂದು ತಿಳಿಸಿದೆ.

ಇದನ್ನೂ ಓದಿ-NRI News: ಕಾರ್ಮಿಕರ ಕೊರತೆ ನೀಗಿಸಲು ವಿಸಾ ಯೋಜನೆಗಳ ಪರಿಶೀಲನೆಗೆ ಮುಂದಾದ ಬ್ರಿಟಿಷ್ ಪ್ರಧಾನಿ ಲೀಜ್ ಟ್ರಸ್

"ಭಾರತೀಯ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ವಿಸ್ತರಿಸುತ್ತಿದ್ದಾರೆ ಮತ್ತು ಸಾಗರೋತ್ತರ ಶಿಕ್ಷಣ ತಾಣದ ಆದ್ಯತೆಗಳಲ್ಲಿ ಹೆಚ್ಚು ಹೊಂದಿಕೊಳ್ಳುತ್ತಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಈ ಆಯ್ಕೆಯನ್ನು ಮಾಡಲು ಅವರು ಪರಿಗಣಿಸುತ್ತಿರುವ ಅಂಶಗಳು ವಿಶ್ವವಿದ್ಯಾನಿಲಯ ಶ್ರೇಯಾಂಕ, ವಿದ್ಯಾರ್ಥಿವೇತನ, ಜೀವನ ವೆಚ್ಚ ಇತ್ಯಾದಿಗಳನ್ನು ಒಳಗೊಂಡಿವೆ" ಎಂದು ವರದಿ ಹೇಳಿದೆ.

ಇದನ್ನೂ ಓದಿ-NRI News: ಕೆನಡಾ ತೆರಳ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಶೈಕ್ಷಣಿಕ ಸಾಲದ ಆದ್ಯತೆಯಲ್ಲಿ ಗಮನಾರ್ಹ ಹೆಚ್ಚಳ ಮುಂಬರುವ ವರ್ಷಗಳಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವ ಸಾಲದ ಮಾರುಕಟ್ಟೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಅಧ್ಯಯನದಲ್ಲಿ ಒಳಗೊಂಡಿರುವ ಆಕಾಂಕ್ಷಿಗಳಲ್ಲಿ ಸುಮಾರು ಶೇ. 60 ಪುರುಷರು ಮತ್ತು ಶೇ.39 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.2 ದ್ರಷ್ಟು ಜನರು ತಮ್ಮ ಲಿಂಗವನ್ನು ನಮೂದಿಸಲು ಬಯಸಿಲ್ಲ. ಆಕಾಂಕ್ಷಿಗಳಲ್ಲಿ ಮೂರನೇ ಎರಡರಷ್ಟು ಜನರು 18-24 ವರ್ಷ ವಯಸ್ಸಿನವರಾಗಿದ್ದರೆ, ಸುಮಾರು ಶೇ.34 ರಷ್ಟು ಜನರು 25-30 ವರ್ಷ ವಯಸ್ಸಿನವರಾಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News