ರಸ್ತೆ ತಿರುವಿನಲ್ಲಿ ಪಲ್ಟಿಯಾದ ಮಿನಿಬಸ್: ಭೀಕರ ದುರಂತಕ್ಕೆ 24 ಮಂದಿ ಬಲಿ

Morocco road accident: ಪ್ರತ್ಯೇಕ ಪ್ರಕರಣವೊಂದರಲ್ಲಿ ಮಾರ್ಚ್ 11 ರಂದು ಗ್ರಾಮೀಣ ಪಟ್ಟಣವಾದ ಬ್ರಾಚೌವಾದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮಿನಿಬಸ್ ಮರಕ್ಕೆ ಡಿಕ್ಕಿ ಹೊಡೆದಿತ್ತು.  ಇದರಲ್ಲಿದ್ದ ಅನೇಕ ಕೃಷಿ ಕಾರ್ಮಿಕರು ಸಾವನ್ನಪ್ಪಿದರು ಎಂದು ಸ್ಥಳೀಯ ಅಧಿಕಾರಿಗಳು ಇದೇ ಸಮಯದಲ್ಲಿ ತಿಳಿಸಿದ್ದಾರೆ.

Written by - Bhavishya Shetty | Last Updated : Aug 7, 2023, 12:10 PM IST
    • ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಿನಿಬಸ್ ತಿರುವಿನಲ್ಲಿ ಪಲ್ಟಿ
    • ಪರಿಣಾಮ ಸುಮಾರು 24 ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡಿದ್ದಾರೆ
    • ಇನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆ ತಿರುವಿನಲ್ಲಿ ಪಲ್ಟಿಯಾದ ಮಿನಿಬಸ್: ಭೀಕರ ದುರಂತಕ್ಕೆ 24 ಮಂದಿ ಬಲಿ title=
Morocco road accident

Morocco road accident: ಮೊರೊಕೊದ ಡೆಮ್ನೇಟ್ ಪಟ್ಟಣದ ವಾರದ ಮಾರುಕಟ್ಟೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಿನಿಬಸ್ ತಿರುವಿನಲ್ಲಿ ಪಲ್ಟಿಯಾಗಿದ್ದು, ಪರಿಣಾಮ ಸುಮಾರು 24 ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಅಜಿಲಾಲ್‌’ನ ಮಧ್ಯ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ಈ ಘಟನೆಯೂ ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಿಮ್ ಸೂಟ್‌ನಲ್ಲಿ ಮಾಳವಿಕಾ ಶೈನಿಂಗ್‌ : ಹಾಟ್‌ ಫೋಟೋಸ್‌ ನೋಡಿ

ಇನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣವೊಂದರಲ್ಲಿ ಮಾರ್ಚ್ 11 ರಂದು ಗ್ರಾಮೀಣ ಪಟ್ಟಣವಾದ ಬ್ರಾಚೌವಾದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮಿನಿಬಸ್ ಮರಕ್ಕೆ ಡಿಕ್ಕಿ ಹೊಡೆದಿತ್ತು.  ಇದರಲ್ಲಿದ್ದ ಅನೇಕ ಕೃಷಿ ಕಾರ್ಮಿಕರು ಸಾವನ್ನಪ್ಪಿದರು ಎಂದು ಸ್ಥಳೀಯ ಅಧಿಕಾರಿಗಳು ಇದೇ ಸಮಯದಲ್ಲಿ ತಿಳಿಸಿದ್ದಾರೆ.

ಈ ಭಾಗದ ಅನೇಕ ಬಡ ನಾಗರಿಕರು ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಸಲು ಕೋಚ್‌’ಗಳು ಮತ್ತು ಮಿನಿಬಸ್‌’ಗಳನ್ನು ಬಳಸುತ್ತಾರೆ.

ಕಳೆದ ವರ್ಷ ಆಗಸ್ಟ್‌’ನಲ್ಲಿ, ಮೊರಾಕೊದ ಆರ್ಥಿಕ ರಾಜಧಾನಿ ಕಾಸಾಬ್ಲಾಂಕಾದ ಪೂರ್ವದ ತಿರುವಿನಲ್ಲಿ ಬಸ್ ಪಲ್ಟಿಯಾಗಿ 23 ಜನರು ಸಾವನ್ನಪ್ಪಿದರು ಮತ್ತು 36 ಜನರು ಗಾಯಗೊಡಿದ್ದರು.

ಇದನ್ನೂ ಓದಿ: ಕೋಟಿಗಟ್ಟಲೆ ಸಂಪಾದಿಸಿದರೂ ಸಿಕ್ಕಾಪಟ್ಟೆ ಕಂಜೂಸ್‌ ಈ ಸಿನಿ ತಾರೆಯರು

ರಾಷ್ಟ್ರೀಯ ರಸ್ತೆ ಸುರಕ್ಷತಾ ಏಜೆನ್ಸಿಯ ಪ್ರಕಾರ, ದಿನಕ್ಕೆ ಸರಾಸರಿ 10 ಸಾವುಗಳಂತೆ, ಮೊರಾಕೊದಲ್ಲಿ ವಾರ್ಷಿಕವಾಗಿ ಸರಾಸರಿ 3,500 ರಸ್ತೆ ಅಪಘಾತದಿಂದ ಸಂಭವಿಸುವ ಸಾವುಗಳು ಮತ್ತು 12,000 ಗಾಯಗೊಂಡ ಪ್ರಕರಣಗಳು ದಾಖಲಾಗುತ್ತವೆ. ಕಳೆದ ವರ್ಷ ಈ ಸಂಖ್ಯೆ 3,200 ಆಗಿತ್ತು. 2012 ರಲ್ಲಿ ದೇಶದ ಇತಿಹಾಸದಲ್ಲೇ ಸಂಭವಿಸಿದ್ದ ಭೀಕರ ಬಸ್ ಅಪಘಾತದಲ್ಲಿ 42 ಜನರು ಸಾವನ್ನಪ್ಪಿದ್ದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News