ʼದೇಶ-ವಿದೇಶದಲ್ಲಿ ನೆಲೆಸಿದ ಭಾರತೀಯರು ತ್ರಿವರ್ಣ ಧ್ವಜ ಹಾರಿಸಿʼ

ಹರ್ ಘರ್ ತಿರಂಗಾ ಆಂದೋಲನವನ್ನು ಬಲಪಡಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ಮತ್ತು 15 ರ ನಡುವೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಪ್ರದರ್ಶಿಸಲು ಜನರನ್ನು ಮನವಿ ಮಾಡಿದರು. ಈ ಆಂದೋಲನವು ರಾಷ್ಟ್ರೀಯ ಧ್ವಜದೊಂದಿಗೆ ಭಾರತೀಯರ ಸಂಪರ್ಕವನ್ನು ಗಾಢಗೊಳಿಸುತ್ತದೆ ಎಂದು ಅವರು ಹೇಳಿದರು.

Written by - Bhavishya Shetty | Last Updated : Jul 26, 2022, 03:54 PM IST
  • ಭಾರತ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡುತ್ತಿದೆ
  • ʼಹರ್ ಘರ್ ತಿರಂಗಾ ಆಂದೋಲನದಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿʼ
  • ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿಕೆ
ʼದೇಶ-ವಿದೇಶದಲ್ಲಿ ನೆಲೆಸಿದ ಭಾರತೀಯರು ತ್ರಿವರ್ಣ ಧ್ವಜ ಹಾರಿಸಿʼ title=
NRI

ಆಗಸ್ಟ್‌ 15ರಂದು ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ, ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರು ಆಗಸ್ಟ್ 13 ರಿಂದ 15ರ ನಡುವೆ ಹರ್ ಘರ್ ತಿರಂಗಾ ಆಂದೋಲನದಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದರು. 

"ಹರ್ ಘರ್ ತಿರಂಗ" ಎಂಬುದು ಭಾರತದ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಗಳನ್ನು ಗುರುತಿಸಲು ಸಂಸ್ಕೃತಿ ಸಚಿವಾಲಯ ರಚಿಸಿರುವ ಉಪಕ್ರಮವಾಗಿದೆ. ಈ ಅಭಿಯಾನದ ಭಾಗವಾಗಿ, ಆಗಸ್ಟ್ 13-15 ರ ಅವಧಿಯಲ್ಲಿ ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ. ಹರ್ ಘರ್ ತಿರಂಗಾ ಚಳುವಳಿಯಲ್ಲಿ ಸೇರಿಕೊಳ್ಳಿ" ಎಂದು ಜೈಶಂಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಭಾರತೀಯ ಧ್ವಜವು ಭಾರತೀಯನಾಗಿರುವುದರ ಸಂಕೇತವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು. 

ಇದನ್ನೂ ಓದಿ: ಬಿ ರಿಪೋರ್ಟ್ ಹೇಳಿಕೆ ವಿಚಾರ : ಡಿಕೆ ಶಿವಕುಮಾರ್​ಗೆ ಸವಾಲೆಸೆದ ಈಶ್ವರಪ್ಪ!

ಹರ್ ಘರ್ ತಿರಂಗಾ ಆಂದೋಲನವನ್ನು ಬಲಪಡಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ಮತ್ತು 15 ರ ನಡುವೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಪ್ರದರ್ಶಿಸಲು ಜನರನ್ನು ಮನವಿ ಮಾಡಿದರು. ಈ ಆಂದೋಲನವು ರಾಷ್ಟ್ರೀಯ ಧ್ವಜದೊಂದಿಗೆ ಭಾರತೀಯರ ಸಂಪರ್ಕವನ್ನು ಗಾಢಗೊಳಿಸುತ್ತದೆ ಎಂದು ಅವರು ಹೇಳಿದರು.

“ಈ ವರ್ಷ ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ಹರ್ ಘರ್ ತಿರಂಗ ಚಳವಳಿಯನ್ನು ಬಲಪಡಿಸೋಣ. ಆಗಸ್ಟ್ 13 ಮತ್ತು 15 ರ ನಡುವೆ ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ. ಈ ಆಂದೋಲನವು ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕವನ್ನು ಇನ್ನಷ್ಟು ಗಾಢಗೊಳಿಸುತ್ತದೆ”ಎಂದರು.

ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು, ಪಂಡಿತ್ ನೆಹರೂ ಅವರು ಬಿಚ್ಚಿಟ್ಟ ಮೊದಲ ತ್ರಿವರ್ಣ ಧ್ವಜದ ವಿವರಗಳು ಸೇರಿ ಇತಿಹಾಸದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.

ದೇಶವು ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿರುವಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡವರ ಬಗ್ಗೆ ಪ್ರಧಾನಿ ಸ್ಮರಿಸಿದರು. 

ಇದನ್ನೂ ಓದಿ: ಡಯಾಬಿಟಿಸ್ ನಿಂದ ಹಿಡಿದು ಪೈಲ್ಸ್ ವರೆಗೆ ಹಲವು ಕಾಯಿಲೆಗಳಿಗೆ ರಾಮಬಾಣ ಈ 'ಮುಟ್ಟಿದರೆ ಮುನಿ'

ʼನಾವು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡುತ್ತಿರುವಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡವರನ್ನು ಇಂದು ನೆನಪಿಸಿಕೊಳ್ಳುತ್ತೇವೆ. ಅವರ ದೃಷ್ಟಿಕೋನವನ್ನು ಈಡೇರಿಸಲು ಮತ್ತು ಅವರ ಕನಸುಗಳ ಭಾರತವನ್ನು ನಿರ್ಮಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆʼ ಎಂದು ಪ್ರಧಾನಿ ಮೋದಿ ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News