Gokak agitation : ಕನ್ನಡ ನಾಡು, ನುಡಿಗಾಗಿ ಅನೇಕರು ತಮ್ಮ ಜೀವನ ಸವೆಸಿದ್ದಾರೆ. ಮಾತೃಭಾಷೆಯ ಉಳಿವಿಗಾಘಿ ಎಲ್ಲರೂ ಒಗ್ಗೂಡಿ ಹೋರಾಡಿದ ಗೋಕಾಕ ಚಳವಳಿ ಇತಿಹಾಸ ಪುಟದಲ್ಲಿ ಎಂದೆಂದಿಗೂ ಅಜರಾಮರ. ಸಂಸ್ಕೃತದ ಹೇರಿಕೆಯ ವಿರುದ್ಧ ಕರುನಾಡೇ ಸಿಡಿದೆದ್ದ ಕಾಲವದು. ಅಂದು ಎಂಟನೇ ತರಗತಿಯ ನಂತರ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ ಮುಂತಾದ ಆಡುಭಾಷೆಗಳ ಜೊತೆಗೆ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಕಲಿಸಲಾಗುತ್ತಿತ್ತು. ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ಆಯ್ದುಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗಿತ್ತು. ಇದು ಮಾತೃಭಾಷೆ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿತ್ತು. ಸುಲಭವಾಗಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವ ಒಂದೇ ಕಾರಣಕ್ಕೆ ಹಲವು ವಿದ್ಯಾರ್ಥಿಗಳು ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಸಂಸ್ಕೃತವನ್ನು ಪ್ರಥಮ ಭಾಷೆಯ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದರು ಸಂಸ್ಕೃತದ ಪರ - ವಿರೋಧಗಳ ನಡುವೆ ದೊಡ್ಡ ಹೋರಾಟವೇ ಅಂದು ನಡೆದು ಹೋಯಿತು. ಅದರಲ್ಲಿ ಕನ್ನಡ ಚಿತ್ರರಂಗದ ಕೊಡುಗೆ ಕೂಡ ಅಪಾರ.
ಇದನ್ನೂ ಓದಿ : ಸೋಲಾರ್ ಹಗರಣ ತನಿಖೆ, ಕಾದು ನೋಡಿ ಎಂದ್ರು ಸಿಎಂ ಬೊಮ್ಮಾಯಿ
1980ರ ಸಮಯಕ್ಕೆ ಕರ್ನಾಟಕದಲ್ಲಿ ಭಾಷೆಗಾಗಿ ನಡೆದ ಅತಿ ದೊಡ್ಡ ಕ್ರಾಂತಿಯೇ ಗೋಕಾಕ್ ಚಳುವಳಿ. ಕನ್ನಡ ಭಾಷೆಯನ್ನ ಕಡ್ಡಾಯ ಮಾಡಬೇಕೆಂದು ಸಾಹಿತಿಗಳು, ಕನ್ನಡ ಅಭಿಮಾನಿಗಳು ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಈ ಕನ್ನಡಕ್ಕಾಗಿ ನಡೆದ ಕ್ರಾಂತಿಯಲ್ಲಿ ಡಾ.ರಾಜ್ ಎಂಬ ಚಿತ್ರರಂಗದ ಶಕ್ತಿಯ ಬೆಂಬಲ ಸಿಕ್ಕಿತು. ಅಣ್ಣಾವ್ರು ಈ ಹೋರಾಟಕ್ಕೆ ಕೈ ಜೋಡಿಸಿದ ಬಳಿಕ ಈ ಹೋರಾಟದ ಸ್ವರೂಪವೇ ಬದಲಾಗಿತ್ತು.
ಡಾ. ರಾಜ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಈ ಹೋರಾಟದಲ್ಲಿ ಭಾಗಿಯಾದರು. ಕಡೆಗೂ ಕನ್ನಡಿಗರ ಒತ್ತಾಯಕ್ಕೆ ಮಣಿದ ಕರ್ನಾಟಕ ಸರ್ಕಾರ 1979 ರ ಅಕ್ಟೋಬರ್ನಲ್ಲಿ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಮಾತ್ರ ಓದಲು ಅವಕಾಶ ನೀಡಿ ಆದೇಶಿಸಿತು. ಕೊನೆಗೆ ಈ ವಿವಾದವನ್ನು ಉಚ್ಚ ನ್ಯಾಯಾಲಯದ ಮೆಟ್ಟಿಲು ಏರಿತು. ಬಳಿಕ ಕೋರ್ಟ್ ಒಂದು ಸಮಿತಿಯನ್ನು ರಚಿಸಿತು . ಡಾ| ವಿ. ಕೃ. ಗೋಕಾಕ ಇದರ ಅಧ್ಯಕ್ಷರು. ಶ್ರೀಯುತರಾದ ಜಿ.ನಾರಾಯಣ, ಎಸ್. ಕೆ. ರಾಮಚಂದ್ರರಾವ್, ತ. ಸು. ಶಾಮರಾವ್, ಕೆ. ಕೃಷ್ಣಮೂರ್ತಿ, ಎಚ್. ಪಿ. ಮಲ್ಲೇದೇವರು ಈ ಸಮಿತಿಯ ಸದಸ್ಯರಾದರು.
ಅತಿ ದೊಡ್ಡ ಮಟ್ಟದಲ್ಲಿ ನಡೆದ ಈ ಚಳುವಳಿಯನ್ನು ಕನ್ನಡದ ರಾಜಕೀಯ ಪಕ್ಷಗಳು, ಕನ್ನಡ ಭೋದಕ ವರ್ಗದವರು, ವಿದ್ಯಾರ್ಥಿಗಳು, ಕವಿಗಳು, ನಾಟಕಕಾರರು,ಚಿತ್ರರಂಗದ ಗಣ್ಯರು, ವಿಮರ್ಶೆಕಾರರಾದಿಯಾಗಿ ಅನೇಕರು ಪ್ರೋತ್ಸಾಹಿಸಿದರು. ಕನ್ನಡಕ್ಕೆ ಪ್ರಮುಖ ಸ್ಥಾನಮಾನ ಕೊಡುವುದರ ಜೊತೆಗೆ ಇನ್ನಿತರ ಭಾಷೆಗಳು ಎಂದರೆ ಕರ್ನಾಟಕ ರಾಜ್ಯದೊಳಗೆ ಚಾಲ್ತಿಯಲ್ಲಿದ್ದ ಭಾಷೆಗಳಾದ ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಹಾಗು ಉರ್ದು ಭಾಷೆಗಳ ಸ್ಥಾನ ಮಾನವನ್ನು ನಿಗದಿಪಡಿಸಲು ಗೋಕಾಕ್ ಸಮಿತಿಯು ವಿಸ್ಮೃತ ವರದಿ ಸಿದ್ಧಪಡಿಸಿತು.
ಇದನ್ನೂ ಓದಿ : ಕ್ರಿಕೆಟ್ ಲೋಕದಲ್ಲಿಯೂ ಕನ್ನಡಿಗರ ಕಮಾಲ್: ‘ಅತ್ಯುನ್ನತ’ ಹುದ್ದೆಯಲ್ಲೂ ನಮ್ಮವರದ್ದೇ ದರ್ಬಾರ್
ಕೆಲವು ಸಾಹಿತಿಗಳು ಹಾಗು ಕನ್ನಡ ಭೋದಕ ಸಿಬ್ಬಂದಿಗಳಿಂದ ನಡೆಯುತ್ತಿದ್ದ ಈ ಚಳುವಳಿ ರಾಜ್ಯವ್ಯಾಪಿ ವಿಸ್ತಾರಗೊಳ್ಳಲು ಸಾಧ್ಯವಾಗಲಿಲ್ಲ. ಕನ್ನಡದ ಮೇರು ನಟ ರಾಜ್ ಕುಮಾರ್ ಅಂದಿನ ಸಾಂಸ್ಕೃತಿಕಾ ಹೋರಾಟದ ರಾಯಭಾರಿಯಂತಾದರು. ಅಣ್ಣಾವ್ರು ಚಳುವಳಿಗೆ ಇಳಿದಿದ್ದೇ ರಾಜ್ಯಾದ್ಯಂತ ಹೋರಾಟದ ಕಿಚ್ಚು ಹತ್ತಿತು. ಇಡೀ ಚಿತ್ರರಂಗವೇ ಅವರ ಜೊತೆ ನಿಂತಿತು. ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಈ ಚಳುವಳಿಯಲ್ಲಿ ಪಾಲ್ಗೊಂಡರು. ನೆಚ್ಚಿನ ನಟನ ಜೊತೆ ಸಾಮಾನ್ಯ ಜನ ಕೂಡ ರಸ್ತೆಗಿಳಿದರು.
ಕರ್ನಾಟಕದ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿ ಗೋಕಾಕ್ ವರದಿಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದರು. ಕೊನೆಗೂ ಒತ್ತಾಯಕ್ಕೆ ಮಣಿದ ಸರ್ಕಾರ ಕರ್ನಾಟಕದ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿ, ವರದಿಯಲ್ಲಿದ್ದ ಪ್ರಕಾರವೇ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.