ʼಕಾಂತಾರʼ ಕಾಪಿರೈಟ್ ವಿವಾದ : ಹೊಂಬಾಳೆಗೆ ಬೇಡಿಕೆ ಇಟ್ಟ ‘ತೈಕ್ಕುಡಂ ಬ್ರಿಡ್ಜ್​​’...!

ಭಾರತದಾದ್ಯಂತ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರದ ‘ವರಾಹ ರೂಪಂ..’ ಹಾಡು ಕಾಪಿರೈಟ್‌ ವಿವಾದ ಎದುರಿಸುತ್ತಿದೆ. ಅಲ್ಲದೆ, ʼತೈಕ್ಕುಡಂ ಬ್ರಿಡ್ಜ್ʼ​ ಹಣಕ್ಕಾಗಿ ಇದೆಲ್ಲವನ್ನು ಮಾಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಕುರಿತು ಮಾತನಾಡಿರುವ ತೈಕ್ಕುಡಂ ಬ್ರಿಡ್ಜ್​ ಬ್ಯಾಂಡ್‌ನ ಸದಸ್ಯರೊಬ್ಬರು ಹಣ ಬೇಕಿಲ್ಲ, ಹಾಡಿಗೆ ಕ್ರಿಡಿಟ್‌ ಹಾಕಿದ್ರೆ ಸಾಕು ಎಂದಿದ್ದಾರೆ.  

Written by - Krishna N K | Last Updated : Oct 31, 2022, 05:11 PM IST
  • ʼನವರಸಂʼ ಹಾಡಿನ ಟ್ಯೂನ್ ಅನ್ನು​ ʼವರಾಹ ರೂಪಂʼನಲ್ಲಿ ಬಳಕೆ
  • ಕಾಂತಾರ ಚಿತ್ರತಂಡದ ವಿರುದ್ಧ ʼತೈಕ್ಕುಡಂ ಬ್ರಿಡ್ಜ್​ʼ ದೂರು
  • ಹಾಡಿಗೆ ಕ್ರಿಡಿಟ್‌ ಕೊಟ್ಟರೆ ಸಾಕು ಹಣ ಬೇಕಿಲ್ಲ ಎಂದ ʼತೈಕ್ಕುಡಂ ಬ್ರಿಡ್ಜ್​ʼ
ʼಕಾಂತಾರʼ ಕಾಪಿರೈಟ್ ವಿವಾದ : ಹೊಂಬಾಳೆಗೆ ಬೇಡಿಕೆ ಇಟ್ಟ ‘ತೈಕ್ಕುಡಂ ಬ್ರಿಡ್ಜ್​​’...! title=

ಬೆಂಗಳೂರು : ಭಾರತದಾದ್ಯಂತ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರದ ‘ವರಾಹ ರೂಪಂ..’ ಹಾಡು ಕಾಪಿರೈಟ್‌ ವಿವಾದ ಎದುರಿಸುತ್ತಿದೆ. ಅಲ್ಲದೆ, ʼತೈಕ್ಕುಡಂ ಬ್ರಿಡ್ಜ್ʼ​ ಹಣಕ್ಕಾಗಿ ಇದೆಲ್ಲವನ್ನು ಮಾಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಕುರಿತು ಮಾತನಾಡಿರುವ ತೈಕ್ಕುಡಂ ಬ್ರಿಡ್ಜ್​ ಬ್ಯಾಂಡ್‌ನ ಸದಸ್ಯರೊಬ್ಬರು ಹಣ ಬೇಕಿಲ್ಲ, ಹಾಡಿಗೆ ಕ್ರಿಡಿಟ್‌ ಹಾಕಿದ್ರೆ ಸಾಕು ಎಂದಿದ್ದಾರೆ.

ʼತೈಕ್ಕುಡಂ ಬ್ರಿಡ್ಜ್​ʼ ಬ್ಯಾಂಡ್​ನ ʼನವರಸಂʼ ಹಾಡಿನ ಟ್ಯೂನ್ ಅನ್ನು​ ʼವರಾಹ ರೂಪಂʼನಲ್ಲಿ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ತೈಕ್ಕುಡಂ ಬ್ರಿಡ್ಜ್​ ಕೇಸ್ ಕೂಡ ದಾಖಲು ಮಾಡಿತ್ತು. ಅಲ್ಲದೆ, ಕೇರಳ ಹೈಕೋರ್ಟ್‌ ಹಾಡಿಗೆ ತಡೆ ನೀಡಿ ತೀರ್ಪು ನೀಡಿದೆ. ಇದರ ಬೆನ್ನಲ್ಲೆ ಹಣಕ್ಕಾಗಿ ಇಷ್ಟೆಲ್ಲ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬಗ್ಗೆ ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್‌ ಬಗ್ಗೆ ಅನುಷ್ಕಾ ಅಸಮಾಧಾನ

ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಕಾಯ್ದು ನೋಡಬೇಕಿದೆ. ಅದು ನಮ್ಮ ಹಾಡು, ಆ ಹಾಡಿಗೆ ಕ್ರೆಡಿಟ್ ಕೊಟ್ಟರೆ ಸಾಕು. ಆನಂತರ ʼವರಾಹ ರೂಪಂʼ ಹಾಡನ್ನು ಬಳಕೆ ಮಾಡಿಕೊಳ್ಳಲಿ, ನಮಗೆ ಅಭ್ಯಂತರವಿಲ್ಲ ಎಂದಿದ್ದಾರೆ. ತಮ್ಮಲ್ಲಿರುವ ಹಣದ ಬಲದಿಂದ ಅವರು ಪಾರಾಗಬಹುದು ಎಂದು ಅಂದುಕೊಂಡಿರಬಹುದು ಆದ್ರೆ ಸಂಗೀತಕ್ಕೆ ನ್ಯಾಯ ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ, ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಸಿನಿಮಾ ಬಿಡುಗಡೆಗೂ ಮುನ್ನ ನಮ್ಮ ಜೊತೆ ಅವರು ಮಾತನಾಡಿದ್ದರೆ ಸಾಕಿತ್ತು ಎಂದು ಬೇಸರ ತೋಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News