ಗುಜರಾತ್ : ಮೊರ್ಬಿ ಸೇತುವೆಯ ಸಿಸಿಟಿವಿ ಫೂಟೇಜ್ ಸೋಮವಾರ (ಅಕ್ಟೋಬರ್ 31, 2022) ಬಿಡುಗಡೆಯಾಗಿದೆ. ಮಚ್ಚು ನದಿಯ ಮೇಲಿನ ತೂಗು ಸೇತುವೆ ಕುಸಿದ ಎಕ್ಸ್ಕ್ಲೂಸಿವ್ ದೃಶ್ಯಾವಳಿ ವಿಡಿಯೋ ಇಲ್ಲಿದೆ ನೋಡಿ. ಘಟನೆಗೆ ಸಂಬಂಧಪಟ್ಟಂತೆ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನು ವಿಡಿಯೋದಲ್ಲಿ ಕಾಲುಸೇತುವೆ ಕುಸಿದು ನೂರಾರು ಜನರು ನದಿಗೆ ಬಿಳುವ ದೃಶ್ಯವನ್ನು ಕಾಣಬಹುದು. ಕೆಲವು ಜನರು ನದಿ ದಡಕ್ಕೆ ಸೇರಲು ಮುರಿದ ಸೇತುವೆ ಹತ್ತುತ್ತಿದ್ದಾರೆ, ಇನ್ನು ಕೆಲವರು ಈಜುತ್ತಿದ್ದಾರೆ. ಕುಸಿತದ ನಂತರ ಸೇತುವೆಯ ಒಂದು ಭಾಗ ನದಿಯ ನೀರಿನಲ್ಲಿ ನೇತಾಡುತ್ತಿದೆ, ಅದರ ಕೇಬಲ್ಗಳು ಛಿದ್ರಗೊಂಡಿರುವುದನ್ನು ನೋಡಬಹುದು. ಇತ್ತೀಚಿನ ಮಾಹಿತಿಯ ಪ್ರಕಾರ, ಮೊರ್ಬಿ ತೂಗು ಸೇತುವೆ ಕುಸಿತದಲ್ಲಿ ಸಾವಿನ ಸಂಖ್ಯೆ ಸೋಮವಾರ 134 ಕ್ಕೆ ಏರಿದೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ʼನಿಮ್ಮ ತ್ಯಾಗವನ್ನು ವ್ಯರ್ಥವಾಗಲು ನಾನು ಬಿಡುವುದಿಲ್ಲʼ : ರಾಹುಲ್ ಶಪಥ..!
#GujaratBridgeCollapse | Exclusive CCTV footage of the bridge before crashing down - Watch#MorbiTragedy pic.twitter.com/dlIpT59PZR
— Zee News English (@ZeeNewsEnglish) October 31, 2022
ಇನ್ನು ರಾತ್ರಿಯೇ ಘಟನಾ ಸ್ಥಳಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಖಾತೆಯ ರಾಜ್ಯ ಸಚಿವ ಹರ್ಷ ಸಂಘವಿ ಅವರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮೊರ್ಬಿಯ ಮಚ್ಚು ನದಿಯ ಮೇಲೆ ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆ ಇದೆ. ದುರಸ್ತಿ ಮತ್ತು ನವೀಕರಣದ ನಂತರ ಐದು ದಿನಗಳ ಹಿಂದೆ ತೆರೆಯಲಾಯಿತು. ಪುರಸಭೆಯ ಫಿಟ್ನೆಸ್ ಪ್ರಮಾಣಪತ್ರ ಇನ್ನೂ ಸ್ವೀಕರಿಸಲಿಲ್ಲ ಎಂದು ಆರೋಪ ಕೇಳಿಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ