ಬೆಂಗಳೂರು: ಇತ್ತೀಚಿಗೆ ಚಿನ್ಮಯಿ ಶ್ರೀಪಾದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಬ್ಬರು ಅನಾಮಧೇಯ ಮಹಿಳೆಯರ ಪತ್ರಗಳನ್ನು ಹಂಚಿಕೊಂಡಿದ್ದರು.ಈ ಪತ್ರಗಳಲ್ಲಿ ರಘು ದೀಕ್ಷಿತ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.
ಈಗ ಈ ಆರೋಪಗಳನ್ನು ಒಪ್ಪಿಕೊಂಡಿರುವ ಗಾಯಕ ರಘು ದೀಕ್ಷಿತ್ ಈ ಅವರನ್ನು ತಬ್ಬಿಕೊಂಡಿದ್ದು ನಿಜ ಆದರೆ ತಾವು ಪರ ಭಕ್ಷಕ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.ಈಗ ಆರೋಪಕ್ಕೆ ಈಗ ಮೀಟೂ ಚಳುವಳಿಗೆ ಬೆಂಬಲ ನೀಡಿರುವ ಪತ್ನಿ ಮಯೂರಿ ಉಪಾದ್ಯ " ನನ್ನ ಮದುವೆ ಮತ್ತು ವಿಚ್ಛೇದನ ಇಲ್ಲಿ ಪ್ರಸ್ತುತವಲ್ಲ ನಾನು ಪತ್ನಿಯಾಗುವ ಮೊದಲು ಮಹಿಳೆ.ಪ್ರತಿಯೊಬ್ಬ ಪ್ರಜೆಯ ಘನತೆ ಅತಿ ಮುಖ್ಯವಾದದ್ದು, ಅದು ಸೆಲೆಬ್ರಿಟಿಯಾಗಿರಬಹುದು ಆಗದೆ ಇರಬಹುದು.ನನಗೆ ಈ ಘಟನಾವಳಿಗಳಲ್ಲಿ ಯಾವುದು ಸತ್ಯವೆಂದು ಗೊತ್ತಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
My marriage and divorce has no context here. I’m a woman first before a wife and dignity of every citizen is of utmost importance..celebrity or not!!
I do not know what the truth is in these incidents... (con...)— Mayuri Upadhya (@MayuriUpadhya) October 10, 2018
... but I do know it takes tremendous courage for a woman to come out in the open, even if its on social media and voice out her grievances. Incase of sexual harassment my stand is clear. (con...)
— Mayuri Upadhya (@MayuriUpadhya) October 10, 2018
... Those found guilty of such behaviour should be dealt with in accordance with law so that other men do not dare’ violate the dignity of any women.
I stand firmly with all the victims and they have my unequivocal support.— Mayuri Upadhya (@MayuriUpadhya) October 10, 2018
ಇನ್ನು ಮುಂದುವರೆದು," ನನಗೆ ಗೊತ್ತು ಇಂಥ ಸಂದರ್ಭದಲ್ಲಿ ಮಹಿಳೆ ಹೊರಬರಲು ಸಾಕಷ್ಟು ಧೈರ್ಯ ಬೇಕು. ಅದು ಸಾಮಾಜಿಕ ಜಾಲತಾಣಗಳಲ್ಲಾದರೂ ಸಹಿತ ಆಕೆಯ ಧ್ವನಿಯ ಕೆಳುವಂತಾಗಬೇಕು.ಲೈಂಗಿಕ ಕಿರುಕುಳದ ವಿಷಯದಲ್ಲಿ ನನ್ನ ನಿಲುವು ಸ್ಪಷ್ಟ. ಯಾರು ಈ ರೀತಿಯ ವರ್ತನೆಯಿಂದ ತಪ್ಪು ಮಾಡಿರುತ್ತಾರೋ ಅವರ ಮೇಲೆ ಕಾನೂನು ಪ್ರಕಾರ ಕ್ರಮವನ್ನು ತಗೆದುಕೊಳ್ಳಬೇಕು. ಆ ಮೂಲಕ ಇನ್ನ್ಯಾವುದೇ ಮಹಿಳೆ ಘಟನೆಯನು ಯಾವ ಪುರುಷನು ಕೂಡ ಉಲ್ಲಂಘಿಸುವ ಹಾಗೆ ಆಗಬಾರದು.ಆದ್ದರಿಂದ ನಾನು ಈ ಸಂದರ್ಭದಲ್ಲಿ ಎಲ್ಲ ಸಂತ್ರಸ್ತರ ಪರವಾಗಿ ನಿಲ್ಲುತ್ತೇನೆ ಮತ್ತು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂದು ಮಯೂರಿ ಉಪಾಧ್ಯ ಸರಣಿ ಟ್ವೀಟ್ ಮಾಡಿ ಪತಿ ರಘು ದೀಕ್ಷಿತ್ ರ ನಡೆಯನ್ನು ಖಂಡಿಸಿದ್ದಾರೆ.