Mithali Raj: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹಾಗೂ ಮಹಿಳಾ ಕ್ರಿಕೆಟ್‌ನ ಶ್ರೇಷ್ಠ ಆಟಗಾರ್ತಿ ಮಿಥಾಲಿ ರಾಜ್ ಅವರು ನಿವೃತ್ತಿಯ ನಂತರ ಇಂದು ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಇಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ಮುಖಾಮುಖಿಯಲ್ಲಿ ಮಿಥಾಲಿ ಕಾಮೆಂಟರಿ ಮಾಡಲು ಪಾದಾರ್ಪಣೆ ಮಾಡಲಿದ್ದಾರೆ. ಈ ಕುರಿತು ನಿನ್ನೆ ಸ್ಟಾರ್ ಸ್ಪೋರ್ಟ್ಸ್ ಪ್ರಕಟಣೆ ಹೊರಡಿಸಿದೆ. ಸ್ಟಾರ್ ಸ್ಪೋರ್ಟ್ಸ್ ICC T20 ವಿಶ್ವಕಪ್ 2022 ರ ಅಧಿಕೃತ ಪ್ರಸಾರಕವಾಗಿದೆ.
ಇದನ್ನೂ ಓದಿ: IND vs SA: ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? ಅಥವಾ ದೆಹಲಿಯ ಈ ಆಟಗಾರನಿಗೆ ಸಿಗುತ್ತಾ ಅವಕಾಶ!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಪರ್ತ್‌ನಲ್ಲಿ ಸಂಜೆ 4.30 ರಿಂದ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಪ್ರಕಟಣೆಗೆ ಪ್ರತಿಕ್ರಿಯಿಸಿದ ಮಿಥಾಲಿ, ತನ್ನ ಚೊಚ್ಚಲ ಕಾಮೆಂಟರಿಯನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
Can’t wait to get into the commentary box🎙️ tomorrow for the #INDvSA game.
Excited!
Let’s do this! 😀 https://t.co/U9fIKZOMNS— Mithali Raj (@M_Raj03) October 29, 2022
ಸುನಿಲ್ ಗವಾಸ್ಕರ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಹರ್ಷಾ ಭೋಗ್ಲೆ, ಇಯಾನ್ ಸ್ಮಿತ್ ಮತ್ತು ಇಸಾ ಗುಹಾ ಅವರಂತಹ ದೊಡ್ಡ ಹೆಸರುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿಗೆ ಮಿಥಾಲಿ ಮತ್ತೊಂದು ಪ್ರಮುಖ ಸೇರ್ಪಡೆಯಾಗಲಿದ್ದಾರೆ.
2005 ಮತ್ತು 2017ರ 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ತಲುಪಿಸಲು ಮಿಥಾಲಿ ನಾಯಕತ್ವ ವಹಿಸಿದ್ದರು. ಈ ವರ್ಷದ ಜೂನ್‌ನಲ್ಲಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. 232 ODIಗಳಲ್ಲಿ 7805 ರನ್‌ಗಳು, ಟೆಸ್ಟ್‌ಗಳಲ್ಲಿ 699 ರನ್‌ಗಳು ಮತ್ತು T20I ಕ್ರಿಕೆಟ್‌ನಲ್ಲಿ 2364 ರನ್‌ಗಳನ್ನು ಗಳಿಸಿದ್ದಾರೆ. ರಾಜ್ ಅವರು 2019 ರಲ್ಲಿ T20 ನಿಂದ ನಿವೃತ್ತರಾದರು. ಮುಂದಿನ ವರ್ಷ ನಡೆಯಲಿರುವ ಉದ್ಘಾಟನಾ ಮಹಿಳಾ IPL ನಲ್ಲಿ ಮಿಥಾಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಜುಲೈ 2021 ರಲ್ಲಿ, ಮಿಥಾಲಿ ಇಂಗ್ಲೆಂಡ್‌ನ ಚಾರ್ಲೆಟ್ ಎಡ್ವರ್ಡ್ಸ್ (10,273 ರನ್) ಅವರನ್ನು ಹಿಂದಿಕ್ಕಿ ಮಹಿಳಾ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರ್ತಿಯಾದರು. ಎಡ್ವರ್ಡ್ಸ್ ಮತ್ತು ರಾಜ್ 10,000 ರನ್ ಗಡಿಯನ್ನು ದಾಟಿದ ಇಬ್ಬರು ಮಹಿಳಾ ಕ್ರಿಕೆಟಿಗರಾಗಿ ಉಳಿದಿದ್ದಾರೆ. ಮಿಥಾಲಿ ODIಗಳಲ್ಲಿ 71 ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಮತ್ತು 17 T20I ನಲ್ಲಿ ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: "ಇದು T20 ಕ್ರಿಕೆಟ್ ಅನ್ನು ಕಲಾ ಪ್ರಕಾರವಾಗಿ ಕಾನೂನುಬದ್ಧಗೊಳಿಸಿತು"–ಕೊಹ್ಲಿ ಆಟಕ್ಕೆ ಚಾಪೆಲ್ ಮೆಚ್ಚುಗೆ
ಇಂದು ನಡೆಯಲಿರುವ ಇಂಡೋ-ಸೌತ್ ಆಫ್ರಿಕಾ ಪಂದ್ಯ ಎರಡೂ ತಂಡಗಳಿಗೆ ಮತ್ತೊಂದು ನಿರ್ಣಾಯಕ ಪಂದ್ಯವಾಗಿದೆ. ಟೀಮ್ ಇಂಡಿಯಾಗೆ ಗೆಲುವು ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದಕ್ಷಿಣ ಆಫ್ರಿಕಾದ ಗೆಲುವು ಅವರ ಅಂಕಗಳ ಸಂಖ್ಯೆಯನ್ನು 5 ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಸಾಧಿಸುತ್ತದೆ. ಈ ಪಂದ್ಯಾವಳಿಯಲ್ಲಿ ಭಾರತ ಆಡಿದ ಎರಡು ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ಬಾಂಗ್ಲಾದೇಶದ ವಿರುದ್ಧ ಒಂದನ್ನು ಗೆದ್ದರೆ, ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯ ವಾಶ್ ಔಟ್ ಆಗಿದ್ದು ಪಾಯಿಂಟ್‌ಗಳನ್ನು ಹಂಚಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ