ನವದೆಹಲಿ: ವ್ಯಕ್ತಿ ಚಿಕ್ಕವನಾಗಿರಲಿ ಅಥವಾ ದೊಡ್ಡವನಾಗಿರಲಿ ಪ್ರತಿಯೊಬ್ಬರ ಅಂಗೈಯಲ್ಲಿ ಹಲವಾರು ರೀತಿಯ ಗೆರೆಗಳು ಮತ್ತು ಗುರುತುಗಳು ಇರುತ್ತವೆ. ಈ ಗುರುತುಗಳು ಮತ್ತು ರೇಖೆಗಳಿಂದ ಮನುಷ್ಯನ ಭವಷ್ಯದ ಬಗ್ಗೆ ಬಹಳಷ್ಟು ಊಹಿಸಬಹುದು. ಅವರ ಅದೃಷ್ಟ, ದಾಂಪತ್ಯ ಜೀವನ, ಸಂಪತ್ತು, ಉದ್ಯೋಗದ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ರೇಖೆಗಳು ಮತ್ತು ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ತಮ್ಮ ಅಂಗೈಯಲ್ಲಿ ಅದೃಷ್ಟದ ಗುರುತುಗಳು ಅಥವಾ ರೇಖೆಗಳನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಇಂತವರಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಅಂತಹ ಗುರುತುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ವಿಶೇಷ ಗುರುತುಗಳು ಇದ್ದರೆ ನೀವು ಅದೃಷ್ಟದಲ್ಲಿ ಶ್ರೀಮಂತರಾಗುತ್ತೀರಿ ಎಂದರ್ಥ.
ಇದನ್ನೂ ಓದಿ: Skin Care Tips: ಚರ್ಮದ ಕಲೆ, ಅಲರ್ಜಿ ನಿವಾರಣೆಗೆ ದೊಡ್ಡ ಏಲಕ್ಕಿಯನ್ನು ಈ ರೀತಿ ಬಳಸಿ
ಅಂಗೈಯಲ್ಲಿ H ಗುರುತು
ಯಾರ ಅಂಗೈಯಲ್ಲಿ 'H' ಗುರುತು ಇದೆಯೋ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಗುರುತು ಹಸ್ತದ ಹೃದಯ, ಅದೃಷ್ಟ ಮತ್ತು ತಲೆ ರೇಖೆಯಿಂದ ಮಾಡಲ್ಪಟ್ಟಿದೆ. ಅಂಗೈಯಲ್ಲಿ ಈ ಗುರುತು ಇರುವವರಿಗೆ 40 ವರ್ಷ ದಾಟಿದ ನಂತರ ಅದೃಷ್ಟ ಹಠಾತ್ತನೆ ಒಲಿದುಬರುತ್ತದೆ. ಈ ವಯಸ್ಸಿನ ನಂತರ ಈ ಜನರು ಸಾಕಷ್ಟು ಪ್ರಗತಿ ಹೊಂದುತ್ತಾರೆ.
ಸುಖ-ಸಂಪತ್ತು ಮತ್ತು ಸಮೃದ್ಧಿ
ಅಂಗೈಯಲ್ಲಿ H ಗುರುತು ಇರುವವರು ತಮ್ಮ ಹಿಂದಿನ ಜೀವನ ಎಷ್ಟೇ ಕಷ್ಟಕರವಾಗಿದ್ದರೂ, ಬಾಲ್ಯವನ್ನು ಬಡತನದಲ್ಲಿ ಕಳೆದರೂ ಮುಂದೆ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ನಂಬಲಾಗಿದೆ. 40 ವರ್ಷ ವಯಸ್ಸಿನ ನಂತರ ಇವರ ಅದೃಷ್ಟವು ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತದೆ. ಆ ಅದೃಷ್ಟವು ಅವರಿಗೆ ಸುಖ-ಸಂಪತ್ತು ಸಮೃದ್ಧಿಯನ್ನು ನೀಡುತ್ತದೆ. ಈ ಜನರ ಜೀವನಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ.
ಇದನ್ನೂ ಓದಿ: Lunar Eclipse 2022: 15 ದಿನಗಳಲ್ಲಿ ಸಂಭವಿಸಲಿದೆ ಮತ್ತೊಂದು ‘ಗ್ರಹಣ’: ಈ ರಾಶಿಗೆ ಭಾರೀ ಕಂಟಕ! ಎಚ್ಚರ
ಯಶಸ್ಸು ದೊರೆಯುತ್ತದೆ
ಇಂತಹ ಜನರು ಜೀವನದಲ್ಲಿ ದೊಡ್ಡ ಎತ್ತರಕ್ಕೆ ತಲುಪುತ್ತಾರೆ. ಈ ಬಗ್ಗೆ ಅವರು ತಮ್ಮ ಕನಸಿನಲ್ಲಿಯೂ ಯೋಚಿಸಿರುವುದಿಲ್ಲ. 40 ವರ್ಷ ವಯಸ್ಸಿನ ನಂತರ ಇವರ ಪ್ರಗತಿಯ ಬಾಗಿಲು ತೆರೆಯುತ್ತದೆ ಮತ್ತು ಅವರು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾರೆ. ಇವರ ಮುಂದಿನ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಇವರು ಎಲ್ಲಾ ರೀತಿಯ ಸೌಕರ್ಯಗಳನ್ನು ಅನುಭವಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ