Diwali 2022 Adabhut Rajyog: ಪಂಚಾಂಗದ ಪ್ರಕಾರ, ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿ ಈ ತಿಥಿ ಅಕ್ಟೋಬರ್ 24 ರಂದು ಪ್ರಾರಂಭಗೊಂದು ಅಕ್ಟೋಬರ್ 25 ರಂದು ಮುಕ್ತಾಯಗೊಳ್ಳಲಿದೆ, ಆದರೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಅಕ್ಟೋಬರ್ 24 ರಂದು ಮಾತ್ರ ಇದೆ ಮತ್ತು ಅಕ್ಟೋಬರ್ 25 ರಂದು ಸೂರ್ಯಗ್ರಹಣ ಸಹ ಸಂಭವಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ದೀಪಾವಳಿ ಮತ್ತು ಲಕ್ಷ್ಮಿ ಪೂಜೆಯನ್ನು 24 ಅಕ್ಟೋಬರ್ 2022 ರಂದು ಮಾತ್ರ ನೆರವೇರಿಸಬೇಕು ಎನ್ನಲಾಗಿದೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ದೀಪಾವಳಿಯನ್ನು ಸೋಮವಾರ, 24 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ಈ ದಿನ ಕಾರ್ತಿಕ ಅಮಾವಾಸ್ಯೆಯು ಸಂಜೆ 5.30 ರ ನಂತರ ಪ್ರಾರಂಭವಾಗುತ್ತದೆ. ದೀಪಾವಳಿಯ ಸಂಜೆ, ಲಕ್ಷ್ಮೀ ಪೂಜೆಯ ಸಮಯದಲ್ಲಿ ಚಿತ್ತ ನಕ್ಷತ್ರ ಇರಲಿದೆ ಮತ್ತು ಐದು ರಾಜಯೋಗಗಳು ರೂಪುಗೊಳ್ಳುತ್ತವೆ. ಇದರೊಂದಿಗೆ ಬುಧ, ಗುರು, ಶುಕ್ರ, ಶನಿ ಗ್ರಹಗಳ ಅಪರೂಪದ ಸಂಯೋಜನೆಯು ಈ ಸಮಯದಲ್ಲಿ ನೆರವೇರಲಿದೆ, ಇದು 2000 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಇದರೊಂದಿಗೆ, ಈ ಲಕ್ಷ್ಮಿ ಹೆಚ್ಚು ಫಲಪ್ರದವಾಗಿರಲಿದ್ದು, ಇದು ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿದೆ.
ನಾಲ್ಕು ಗ್ರಹಗಳ ಯೋಗ ದೇಶದ ಪಾಲಿಗೂ ಕೂಡ ಮಂಗಳಕರವಾಗಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹದ ಮುಂದೆ ರಾಶಿಯಲ್ಲಿ ಸೂರ್ಯ-ಶುಕ್ರರ ಉಪಸ್ಥಿತಿಯು ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ. ಅದೇ ಸಮಯದಲ್ಲಿ, ಶುಕ್ರ ಮತ್ತು ಬುಧಗಳು ಜನರ ವ್ಯವಹಾರವನ್ನು ಸುಧಾರಿಸಲಿವೆ. ಇದೇ ವೇಳೆ ಈ ಅಧ್ಬುತ ರಾಜಯೋಗಗಳ ಕಾರಣ ಜನರು ಆರ್ಥಿಕವಾಗಿ ಬಲಿಷ್ಠರಾಗಲಿದ್ದಾರೆ. ಗುರು ಮತ್ತು ಬುಧ ತಮ್ಮ ರಾಶಿಗಳಲ್ಲಿ ಮುಖಾಮುಖಿಯಾಗಿರುತ್ತಾರೆ. ಈ ವಿಶೇಷವಾದ ಧನ ಯೋಗದ ಪರಿಣಾಮದಿಂದ ಭಾರತದ ವ್ಯಾಪಾರದ ಸ್ಥಾನವು ಬಲಗೊಳ್ಳಲಿದೆ. ಭಾರತದಲ್ಲಿನ ಮಂದಗತಿ ದೂರವಾಗುತ್ತದೆ, ಐಟಿ ಮತ್ತು ಸಂವಹನ ಕ್ಷೇತ್ರಗಳು ಹೆಚ್ಚು ಬಲಿಷ್ಠವಾಗಲಿವೆ.
ಅಕ್ಟೋಬರ್ 23 ರಂದು ಶನಿಯು ಮಕರ ರಾಶಿಯಲ್ಲಿ ನೇರ ನಡೆ ಅನುಸರಿಸಲಿದ್ದಾನೆ, ಇಂತಹ ಪರಿಸ್ಥಿತಿಯಲ್ಲಿ ಶನಿಯ ದೃಷ್ಟಿ ಗುರುವಿನ ಮೇಲಿರುತ್ತದೆ. ಆದ್ದರಿಂದ, ದೀಪಾವಳಿಯಿಂದ ಸುಮಾರು ಮೂರು ತಿಂಗಳ ನಂತರ ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರಲಿದೆ. ಇತರ ಲೋಹಗಳ ಬೆಲೆಗಳು ಕೂಡ ಏರಿಕೆ ಕಾಣಲಿವೆ.
ಇದನ್ನೂ ಓದಿ-Chanakya Niti: ಈ ಸಣ್ಣ ತಪ್ಪುಗಳು ದಾಂಪತ್ಯ ಜೀವನವನ್ನು ಹಾಳುಮಾಡುತ್ತವೆ
ಜ್ಯೋತಿಷಿಗಳ ಪ್ರಕಾರ, ಈ ದೀಪಾವಳಿಯಂದು ಮಾಳವ್ಯ, ಶಶ, ಗಜಕೇಸರಿ, ಹರ್ಷ ಮತ್ತು ವಿಮಲ ಎಂಬ 5 ರಾಜಯೋಗಗಳೂ ರೂಪುಗೊಳ್ಳುತ್ತಿವೆ. ಶಾಪಿಂಗ್, ವಹಿವಾಟುಗಳು, ಹೂಡಿಕೆಗಳು ಮತ್ತು ಈ ಐದು ಮಂಗಳಕರ ಯೋಗಗಳಲ್ಲಿ ಪೂಜೆಯೊಂದಿಗೆ ಹೊಸ ಕೆಲಸಗಳ ಪ್ರಾರಂಭವು ತುಂಬಾ ಶುಭಕರ ಮತ್ತು ಮಂಗಳಕರವಾಗಿರುತ್ತದೆ. ಈ 5 ರಾಜಯೋಗಗಳ ಶುಭ ಫಲಗಳು ವರ್ಷವಿಡೀ ಗೋಚರಿಸಲಿವೆ.
ಇದನ್ನೂ ಓದಿ-Palmistry: ಕೈಯಲ್ಲಿ ಈ ರೇಖೆ ಇರುವವರು ಅತ್ಯಂತ ಭಾಗ್ಯಶಾಲಿಗಳಾಗಿರುತ್ತಾರೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.