Jupiter Transit After Diwali 2022: ಜೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳ ನಡೆ ವ್ಯಕ್ತಿಯ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದರೆ, ಅದು ಎಲ್ಲಾ ರಾಶಿಗಳ ಜಾತಕದವರ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತದೆ.
Jupiter Transit After Diwali 2022: ಜೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳ ನಡೆ ವ್ಯಕ್ತಿಯ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದರೆ, ಅದು ಎಲ್ಲಾ ರಾಶಿಗಳ ಜಾತಕದವರ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತದೆ. ದೀಪಾವಳಿಯ ಬಳಿಕ ದೇವ ಗುರು ಬೃಹಸ್ಪತಿ ಪುನಃ ತನ್ನ ನೇರನಡೆಯನ್ನು ಅನುಸರಿಸಲಿದೆ. ಮೀನ ರಾಶಿಯಲ್ಲಿ ಗುರುವಿನ ಈ ನಡೆ ಬದಲಾವಣೆಯ ಶುಭ ಪ್ರಭಾವ ಈ ನಾಲ್ಕು ರಾಶಿಗಳ ಜಾತಕದವರ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸಲಿದೆ.
ಇದನ್ನೂ ಓದಿ-Diwali 2022: ಓರ್ವ ರಾಕ್ಷೆಸನ ಕಾರಣ ಭಾರತದ ಈ ರಾಜ್ಯದಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲವಂತೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕುಂಭ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ಕುಂಭ ರಾಶಿಯ ದ್ವಿತೀಯ ಭಾವದಲ್ಲಿ ಸಾಗಲಿದ್ದಾನೆ, ಇದು ಈ ಸ್ಥಳೀಯ ಜಾತಕದವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಈ ಸಮಯದಲ್ಲಿ, ಬೋಧನೆ ಮತ್ತು ಮಾರುಕಟ್ಟೆ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸಮಾಚಾರ ಪಡೆಯಬಹುದು.
ಕರ್ಕ ರಾಶಿ- ಈ ರಾಶಿಚಕ್ರದ ನವಮ ಭಾವದಲ್ಲಿ ಗುರುವು ನೇರನಡೆ ಅನುಸರಿಸಲಿದ್ದಾನೆ. ಈ ಕಾರಣದಿಂದಾಗಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ಈ ರಾಶಿಯ ಜನರ ದೀರ್ಘ ಕಾಲದಿಂದ ನಿಂತುಹೋಗಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರು ವ್ಯಾಪಾರ ಪ್ರವಾಸಕ್ಕೆ ಹೋಗಬಹುದು. ಈ ಅವಧಿಯಲ್ಲಿ ನೀವು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಸಹ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ.
ಮಿಥುನ ರಾಶಿ- ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದ ಧಶಮ ಭಾವದಲ್ಲಿ, ಗುರು ಚಲಿಸಲಿದ್ದಾನೆ. ಇದರೊಂದಿಗೆ, ಈ ರಾಶಿಯ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಇದೇ ವೇಳೆ ನಿಮಗೆ ಹೊಸ ಉದ್ಯೋಗ ಪ್ರಸ್ತಾಪವು ಬರುವ ಸಾಧ್ಯತೆ ಇದೆ. ಬಡ್ತಿ ಸಿಗುವ ಎಲ್ಲ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಹೊಸ ಆರ್ಡರ್ ಸಿಗಬಹುದು ಮತ್ತು ಅದರಿಂದ ನೀವು ಸಾಕಷ್ಟು ಆದಾಯ ಗಳಿಸಬಹುದು.
ವೃಷಭ ರಾಶಿ- ಈ ರಾಶಿಯ ಏಕಾದಶ ಭಾವದಲ್ಲಿ ಗುರುವಿನ ಈ ಸಂಕ್ರಮಣ ನಡೆಯಲಿದೆ. ಇದು ಆದಾಯ ಮತ್ತು ಹಣದ ಲಾಭದಲ್ಲಿ ಯಶಸ್ಸನ್ನು ತರಲಿದೆ. ವೃಷಭ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ. ಅಲ್ಲದೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಅಲ್ಲದೆ, ವ್ಯಾಪಾರದಲ್ಲಿ ಲಾಭವೂ ಇರಲಿದೆ. ಈ ರಾಶಿಯ ಜನರು ವಾಹನ ಅಥವಾ ಆಸ್ತಿಯನ್ನು ಖರೀದಿಸುವುದನ್ನು ಪರಿಗಣಿಸಬಹುದು.