ಬಹುನಿರೀಕ್ಷೆಯ "ಹೆಡ್ ಬುಷ್" ಸಿನಿಮಾ ತೆರೆಯ ಮೇಲೆ ಅಬ್ಬರಿಸಿದೆ. ಹಾಗಾದ್ರೆ ನಟ ರಾಕ್ಷಸ ಡಾಲಿ ನಟನೆಯ ಮತ್ತು ನಿರ್ಮಾಣದ "ಹೆಡ್ ಬುಷ್" ಸಿನಿಮಾದ ಪಕ್ಕಾ ರಿವ್ಯೂ ಜೀ ಕನ್ನಡ ನ್ಯೂಸ್ ನಲ್ಲಿ.
ಅಗ್ನಿ ಶ್ರೀಧರ್ ಅವರ 'ದಾದಾಗಿರಿಯ' ದಿನಗಳು ಪುಸ್ತಕ ಆಧಾರಿತ ಸಿನಿಮಾವೇ 'ಹೆಡ್ ಬುಷ್'. ನಟ ರಾಕ್ಷಸ ಡಾಲಿ, ಡಾನ್ ಎಂ.ಪಿ ಜಯರಾಜ್ ಪಾತ್ರವನ್ನ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ.ಚಿತ್ರದಲ್ಲಿ ಡಾಲಿಯ ಮೈಮೇಲೆ ಜಯರಾಜ್ ಬಂದಂತೆ ಅನಿಸಿದ್ದು ಸತ್ಯ.ಏನ್ರೀ ಅದು ಡಾಲಿಯ ಆಕ್ಟಿಂಗ್,ಫೈಟಿಂಗ್,ಪಂಚಿಂಗ್ ಡೈಲಾಗ್ ಅಬ್ಬಬ್ಬಾ ಅನಿಸುವಂತಿದೆ. ಮೀಸೆ ತಿರುವಿಕೊಂಡು ರಸ್ತೆಯಲ್ಲಿ ನಡೆಯೋ ಹಾಗೇ ಕೆಂಡದ ಮೇಲೆ ಜಯರಾಜ್ ರೂಪದಲ್ಲಿ ಎಂಟ್ರಿ ಕೊಡೋ ಡಾಲಿಯನ್ನ ನೋಡ್ತಾ ಇದ್ರೆ ಬೆಂಕಿ ಉಂಡೆಯನ್ನ ಕಂಡಂತೆ ಫೀಲ್ ಆಗುತ್ತೆ.
ಇದನ್ನೂ ಓದಿ : Benefits Of Jaggery: ಬಿಪಿಯಿಂದ ರಕ್ತಹೀನತೆಯವರೆಗೆ ಹಲವು ಸಮಸ್ಯೆಗಳ ನಿವಾರಣೆಗೆ ಬೆಲ್ಲವೇ ಮದ್ದು
ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಮಲ್ ಮಾಡಿದ್ದಾರೆ. MDN ಪಾತ್ರದಲ್ಲಿ ರಘು ಮುಖರ್ಜಿ ಸಖತ್ ಆಗಿ ಮಿಂಚಿದ್ದಾರೆ. ಪ್ರೊಫೆಸರ್ ಪಾತ್ರದ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಜೀವನದ ಪಾಠವನ್ನ ಭರ್ಜರಿಯಾಗಿ ಹೇಳೋ ಪರಿ ಮಸ್ತ್ ಖುಷ್ ಕೊಡುತ್ತೆ. 70ರ ದಶಕದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಜಯರಾಜ್ ಆಂಡ್ ಟೀಮ್ ನಡೆಸಿದ ಆಳ್ವಿಕೆ ಹೇಗಿತ್ತು,ರಾಜಕೀಯ ನಾಯಕರ ಸಾಥ್ ಡಾನ್ ಗಳಿಗೆ ಹೇಗಿತ್ತು ಅನ್ನೋದನ್ನ ತೆರೆಮೇಲೆ ನೋಡೋದೇ ಮಜಾ ಬಿಡಿ. ಇಂದಿರಾ ಬ್ರಿಗೇಡ್ ಹೆಸರಿನಲ್ಲಿ ನಡೆದ ದಾದಾಗಿರಿಯನ್ನ ನೋಡಿದ್ರೆ ನಿಮಗೂ ಶಾಕ್ ಆಗೋದು ಪಕ್ಕಾ.
ಆಗ ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಲಾಂಗು -ಮಚ್ಚು ಕಾರುಬಾರು ಹೇಗಿತ್ತು ಗೊತ್ತಾ.? ಹೇಗೆ ರಕ್ತದೋಕುಳಿ ಹರಿಯುತ್ತಿತ್ತು ಅನ್ನೋದ್ರ ಚಿತ್ರಣವನ್ನ ಅದ್ಭುತವಾಗಿ 'ಹೆಡ್ ಬುಷ್' ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರಿನ ರೌಡಿಸಂ ವಿಚಾರ ರಾಷ್ಟಮಟ್ಟದಲ್ಲಿ ಸುದ್ದಿಯಾಗಿ ರಾಜಕೀಯ ಕ್ಷೇತ್ರದಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು.
ಬೆಂಗಳೂರು ಕರಗ ಹೊರುವ ವಿಚಾರಕ್ಕೆ ಜೀವದ ಗೆಳೆಯರಾಗಿದ್ದ ಗಂಗಾ ಮತ್ತು ಜಯರಾಜ್ ನಡುವೆ ವೈರತ್ವ ಮೂಡುತ್ತೆ ಆಮೇಲೆ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳು ಇರುತ್ತೆ. ಹೆಡ್ ಬುಷ್ ಕೇವಲ ರೌಡಿಸಂ ಸ್ಟೋರಿಯಲ್ಲ ಬದಲಾಗಿ ಲವ್,ಸೆಂಟಿಮೆಂಟ್,ಕಣ್ಣೀರು ಎಲ್ಲಾ ವಿಚಾರಕ್ಕೂ ಇಲ್ಲಿ ಜಾಗ ಸಿಕ್ಕಿದೆ. ಹಬೀಬಿ ಹಾಡನ್ನ ಬಿಗ್ ಸ್ಕ್ರೀನ್ ನಲ್ಲಿ ನೋಡಿದ್ರೆ ಥ್ರಿಲ್ ಆಗುತ್ತೆ. ಎಂ.ಪಿ ಜಯರಾಜ್ ಗೆ ಹೇಗೆ ಲವ್ ಆಯ್ತು,ಯಾರನ್ನ ಮದ್ವೆ ಆದ್ರು ಅನ್ನೋದನ್ನ ಕೂಡ ಕಲರ್ ಫುಲ್ ಆಗಿ ತೋರಿಸಲಾಗಿದೆ.
ಇದನ್ನೂ ಓದಿ : Benefits Of Green Peas: ಡಯಾಬಿಟಿಸ್, ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ರಾಮಬಾಣ ಹಸಿರು ಬಟಾಣಿ
ಅರಸು ಅವರ ಪಾತ್ರದಲ್ಲಿ ಹಿರಿಯ ನಟ ದೇವರಾಜ್ ಆಗಿ ಖಡಕ್ ಆಗಿ ಮಿಂಚಿದ್ದಾರೆ. ಅರಸು ಅವರ ಮಗಳ ಪಾತ್ರದಲ್ಲಿ ಶೃತಿ ಹರಿಹರನ್ ಶೈನ್ ಆಗಿದ್ದಾರೆ.ನಿಜಕ್ಕೂ ಹೆಡ್ ಬುಷ್ ಸಿನಿಮಾ ತುಂಬಾ ಇಂಟ್ರೆಸ್ಟಿಂಗ್ ಅನಿಸುತ್ತೆ. ಕೊತ್ವಾಲ್ ರೋಲ್ ವಸಿಷ್ಠ ಸಿಂಹ ಗೆ ಬಿಟ್ರೆ ಇನ್ಯಾರಿಗೂ ಹೋಲಿಕೆ ಆಗದ ರೀತಿ ಪಾತ್ರವನ್ನೇ ನುಂಗಿ ನೀರು ಕುಡಿದಿದ್ದಾರೆ ವಸಿಷ್ಠ ಸಿಂಹ.
ಮೊದಲಾರ್ಧ ಕೆಲವು ಕಡೆ ಸ್ವಲ್ಪ ಬೋರ್ ಅನಿಸಿದ್ರೂ,ಎರಡನೇ ಭಾಗ ಮಾತ್ರ ಸೀಟ್ ಅಂಚಿನಲ್ಲಿ ಕೂರಿಸುತ್ತೆ.ಸೋ ನೀವು ಮಿಸ್ ಮಾಡದೇ ನೋಡಲೇಬೇಕಾದ ಅದ್ಭುತ ಸ್ಟೋರಿ 'ಹೆಡ್ ಬುಷ್'..ಸೋ ಥೀಯೇಟರ್ ಗೆ ಬಂದು ಸಿನಿಮಾ ನೋಡೋದ್ರ ಜೊತೆಗೆ ಕನ್ನಡ ಸಿನಿಮಾನಾ ಉಳಿಸಿ ಬೆಳೆಸೋ ಜವಾಬ್ದಾರಿ ಸಿನಿರಸಿಕರ ಹೆಗಲ ಮೇಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.