ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮಿಸಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ವಾಗತಿಸಿದರು.
Delhi: Russian President Vladimir Putin arrives for his two-day visit to India. He was received by External Affairs Minister Sushma Swaraj. pic.twitter.com/sNUWyS1ZkJ
— ANI (@ANI) October 4, 2018
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಭಾರತ-ರಷ್ಯಾದ 19ನೇ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ 2 ದಿನಗಳ ಕಾಲ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಮಿಸಿದ್ದು, ಸಂಜೆ ಪ್ರಧಾನಿ ನಿವಾಸದಲ್ಲಿ ವಾಡ್ಲಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಿದರು.
Delhi: Russian President Vladimir Putin meets Prime Minister Narendra Modi. He is on a two-day visit to India. pic.twitter.com/vgSvgtYIvn
— ANI (@ANI) October 4, 2018
ನಾಳೆ ನಡೆಯಲಿರುವ 19ನೇ ಭರ್ತ ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗ ಸಭೆಯಲ್ಲಿ 36,668 ಕೋಟಿ ರೂ. (5 ಬಿಲಿಯನ್ ಡಾಲರ್) ಮೊತ್ತದ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ ಹಾಕುವ ಸಾಧ್ಯತೆ ಇದೆ. ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಬಿದ್ದಿದ್ದೇ ಆದಲ್ಲಿ, ದೇಶದ ಸೇನೆ ಮತ್ತಷ್ಟು ಬಲಗೊಳ್ಳಲಿದೆ.