BSNL ಅಗ್ಗದ ಪ್ಲಾನ್: 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ

BSNL Cheapest Plan: ಅಗ್ಗದ ಬೆಲೆಯಲ್ಲಿ ಹೆಚ್ಚು ಡೇಟಾ ಬಯಸುವವರಿಗಾಗಿ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 300 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಎರಡು ತಿಂಗಳುಗಳವರೆಗೆ ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. 

Written by - Yashaswini V | Last Updated : Oct 12, 2022, 08:43 AM IST
  • ಬಿಎಸ್ಎನ್ಎಲ್ 296 ರೂ. ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
  • ಇದು ಎರಡು ತಿಂಗಳು ಅಂದರೆ 60 ದಿನಗಳ ಪೂರ್ಣ ಮಾನ್ಯತೆ ಜೊತೆಗೆ ಲಭ್ಯವಾಗಲಿದೆ.
  • ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಡೇಟಾ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.
BSNL ಅಗ್ಗದ ಪ್ಲಾನ್: 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ  title=
Unlimited data plan

ಬಿಎಸ್ಎನ್ಎಲ್  296 ರೂ.ಗಳ ಪ್ರಿಪೇಯ್ಡ್ ಯೋಜನೆ: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಒದಗಿಸುವ ಯೋಜನೆಗಳನ್ನು ಆಗಾಗ್ಗೆ ಪರಿಚಯಿಸುತ್ತಲೇ ಇರುತ್ತವೆ. ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಇದರಲ್ಲಿ ಮುಂಚೂಣಿಯಲ್ಲಿವೆ.  ಇದೀಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಒದಗಿಸುವ ಯೋಜನೆಯನ್ನು ಪರಿಚಯಿಸಿದೆ. ನೀವು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಬಯಸಿದರೆ, ಬಿಎಸ್ಎನ್ಎಲ್ನ ಈ ಅಗ್ಗದ ರೀಚಾರ್ಜ್ ಯೋಜನೆ ನಿಮಗೆ ಪ್ರಯೋಜನಕಾರಿ ಆಗಿದೆ. 

ವಾಸ್ತವವಾಗಿ, ಅಗ್ಗದ ಬೆಲೆಯಲ್ಲಿ ಹೆಚ್ಚು ಡೇಟಾ ಬಯಸುವವರಿಗಾಗಿ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 300 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಎರಡು ತಿಂಗಳುಗಳವರೆಗೆ ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್: iPhone 13 ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ

ಬಿಎಸ್ಎನ್ಎಲ್  296 ರೂ.ಗಳ ಪ್ರಿಪೇಯ್ಡ್ ಯೋಜನೆ: 
ಬಿಎಸ್ಎನ್ಎಲ್  296 ರೂ. ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು ಇದು ಎರಡು ತಿಂಗಳು ಅಂದರೆ 60 ದಿನಗಳ ಪೂರ್ಣ ಮಾನ್ಯತೆ ಜೊತೆಗೆ ಲಭ್ಯವಾಗಲಿದೆ. ಬಳಕೆದಾರರು ಅನಿಯಮಿತ ಡೇಟಾ ಜೊತೆಗೆ ಈ ಯೋಜನೆಯಲ್ಲಿ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. 

ಬಿಎಸ್ಎನ್ಎಲ್  296 ರೂ.ಗಳ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು: 
ಬಿಎಸ್ಎನ್ಎಲ್ನ  296 ರೂ.ಗಳ ಪ್ರಿಪೇಯ್ಡ್ ಯೋಜನೆ ಯು ಅನೇಕ ಉತ್ತೇಜಕ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 120GB ಡೇಟಾವನ್ನು ಪಡೆಯುತ್ತಾರೆ. ಅಂದರೆ, ಯೋಜನೆಯಲ್ಲಿ ಯಾವುದೇ ಮಿತಿ ಇರುವುದಿಲ್ಲ. ನೀವು ಎಲ್ಲಾ ಡೇಟಾವನ್ನು ಒಟ್ಟಿಗೆ ಪಡೆಯುತ್ತೀರಿ. 120GB ಡೇಟಾ ಮುಗಿದ ನಂತರ, ವೇಗವು 40kbps ಗೆ ಇಳಿಯುತ್ತದೆ.

ಇದನ್ನೂ ಓದಿ- ವಾಟ್ಸಾಪ್ನಲ್ಲಿ ವಿದ್ಯುತ್ ಬಿಲ್: ವಾಟ್ಸಾಪ್ನಲ್ಲಿ ಬರುವ ಇಂತಹ ಸಂದೇಶಗಳ ಬಗ್ಗೆ ಹುಷಾರ್!

5 ಗಂಟೆಗಳವರೆಗೆ ಅನಿಯಮಿತ ಡೇಟಾ:
ಇದರ ಹೊರತಾಗಿ, ಈ ಯೋಜನೆಯೊಂದಿಗೆ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿರುತ್ತವೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 5 ಗಂಟೆಗಳವರೆಗೆ ಅನಿಯಮಿತ ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಬಳಕೆದಾರರು ಅನಿಯಮಿತ ಡೇಟಾವನ್ನು ಬಳಸಬಹುದು. ಇದಲ್ಲದೇ, ಅನಿಯಮಿತ ಕರೆ ಮತ್ತು ದೈನಂದಿನ 100 ಉಚಿತ ಎಸ್ಎಂಎಸ್ ಪ್ಲಾನ್‌ನಲ್ಲಿ  ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News