ಕೊಲ್ಕತ್ತಾ: ಚೇತೆಸ್ವರ ಪೂಜಾರ ಸೋಮವಾರದಂದು ಶ್ರೀಲಂಕಾ ವಿರುದ್ದದ ಕ್ರಿಕೆಟ್ ಟೆಸ್ಟ್ ಪಂದ್ಯದ 5 ದಿನಗಳಲ್ಲಿ ಬ್ಯಾಟ್ ಮಾಡಿದವರ ದಾಖಲೆಯ ಸಾಲಿಗೆ ಸೇರಿದರು.
ಆ ಮೂಲಕ ಈ ಸಾಧನೆ ಮಾಡಿದ ಮೂರನೆಯ ಭಾರತೀಯ ಹಾಗೂ ವಿಶ್ವದ ಐದನೆಯ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೊಲ್ಕತ್ತಾದ ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೊದಲನೆಯ ಟೆಸ್ಟ್ ನಲ್ಲಿ ನಾಲ್ಕನೆಯ ದಿನಂದಂದು ಶಿಖರ್ ಧವನ್ ವಿಕೆಟ್ ಪತನಗೊಂಡ ನಂತರ ಕೆ.ಎಲ್.ರಾಹುಲ್ ಜೊತೆಗೆ ಕ್ರಿಸಗಿಳಿದ ಪೂಜಾರ ಆ ಮೂಲಕ ಈ ಸಾಧನೆಗೆ ಪಾತ್ರರಾದರು.ಪೂಜಾರ್ ಮೊದಲ ಇನ್ನಿಂಗ್ ನಲ್ಲಿ 117 ಎಸೆತಗಳಲ್ಲಿ 52 ರನ್ಗಳನ್ನು ಗಳಿಸಿದ್ದರು.ಇದಕ್ಕೂ ಮೊದಲು 1960 ರಲ್ಲಿ ಭಾರತದ ಪರ ಜೈಸಿಂಹ ಆಷ್ಟ್ರೇಲಿಯಾದ ವಿರುದ್ದ 20 ಮತ್ತು 74 ಅದೇ ರೀತಿಯಾಗಿ ಪ್ರಸ್ತುತ ಭಾರತ ತಂಡದ ಕೋಚ್ ಆಗಿರುವ ಶಾಸ್ತ್ರಿ 1984 ರಲ್ಲಿ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ 111 ಮತ್ತು 7 ರನ್ ಗಳಿಸುವುದರ ಮೂಲಕ ಈ ಸಾಧನೆಗೈದಿದ್ದರು.
ವಿಶೇಷ ಸಂಗತಿಯೇನೆಂದರೆ ಭಾರತದ ಜೈಸಿಂಹ, ರವಿಶಾಸ್ತ್ರಿ ಹಾಗೂ ಚೇತೆಸ್ವರ ಪೂಜಾರ ಈ ಮೂವರು ಆಟಗಾರರು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿಯೇ ಗಳಿಸಿರುವುದು ವಿಶೇಷ ಸಂಗತಿಯಾಗಿದೆ.
ಇದುವರೆಗೂ ಪೂರ್ತಿ ಐದು ದಿನ ಬ್ಯಾಟ್ ಮಾಡಿದವರ ಪಟ್ಟಿ
1. ಎಂ.ಎಲ್.ಜೈಸಿಂಹ(ಭಾರತ)
2. ಜೆಪ್ರಿ ಬಾಯ್ಕಾಟ್(ಇಂಗ್ಲೆಂಡ್)
3. ಕಿಮ್ ಹುಘೆಸ್ (ಆಷ್ಟ್ರೇಲಿಯಾ)
4. ಅಲನ್ ಲ್ಯಾಂಬ್(ಇಂಗ್ಲೆಂಡ್)
5. ರವಿ ಶಾಸ್ತ್ರಿ (ಭಾರತ)
6. ಅಡ್ರೈನ್ ಗ್ರಿಫ್ಫಿತ್(ವೆಸ್ಟ್ ಇಂಡಿಸ್)
7. ಆಂಡ್ರೂ ಫ್ಲಿಂಟಾಫ್(ಇಂಗ್ಲೆಂಡ್)
8. ಚೇತೆಸ್ವರ ಪೂಜಾರ್(ಭಾರತ)