Eating Fruits The Right Way: ನಾವು ಸೇವಿಸುವ ಹಣ್ಣುಗಳ ಆರೋಗ್ಯ ಪ್ರಯೋಜನ ಸಿಗಬೇಕಾದರೆ ಅವುಗಳನ್ನು ತಿನ್ನುವ ಸರಿಯಾದ ವಿಧಾನವನ್ನು ಸಹ ತಿಳಿದಿರಬೇಕು. ಆಯುರ್ವೇದದ ಪ್ರಕಾರ ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ಯಾವುದು ತಿಳಿಯೋಣ .
Eating Fruits The Right Way: ಆಯುರ್ವೇದವು ಯಾವಾಗಲೂ ಆರೋಗ್ಯಕರ ಆಹಾರವನ್ನು ಉತ್ತೇಜಿಸುತ್ತದೆ ಮತ್ತು ತಿನ್ನುವಾಗ ಮತ್ತು ಕುಡಿಯುವಾಗ ನಾವು ಮಾಡುವ ತಪ್ಪುಗಳನ್ನು ಸರಿಪಡಿಸುವ ಬಗ್ಗೆ ಹೇಳುತ್ತದೆ. ಹಣ್ಣುಗಳನ್ನು ತುಂಬಾ ಆರೋಗ್ಯಕರ ಆಹಾರವೆಂದು ಕರೆಯಲಾಗುತ್ತದೆ. ಆದರೆ ಅವುಗಳನ್ನು ಸೇವಿಸುವಾಗ, ನಾವು ಮಾಡುವ ತಪ್ಪುಗಳಿಂದ ಹಣ್ಣುಗಳ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ, ಹಣ್ಣುಗಳನ್ನು ತಿನ್ನುವುದು ಎಷ್ಟು ಅವಶ್ಯಕವೋ, ಅದನ್ನು ಸರಿಯಾಗಿ ತಿನ್ನುವುದು ಸಹ ಎಷ್ಟೇ ಮುಖ್ಯವಾಗಿರುತ್ತದೆ. ಆಯುರ್ವೇದದಲ್ಲಿ ಹಣ್ಣುಗಳನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ಎನ್ನುವುದನ್ನು ಕೂಡಾ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬ್ಯಾಲೆನ್ಸ್ ಡಯಟ್ ಎಂಬ ಹೆಸರಿನಲ್ಲಿ ಭೋಜನದಲ್ಲಿ ಹಣ್ಣುಗಳನ್ನು ಸೇವಿಸುತ್ತೇವೆ. ಆದರೆ ಹೀಗೆ ಮಾಡಬಾರದು. ಇದು ಹೊಟ್ಟೆಯ ಮೇಲೆ ವಿಷಕಾರಿ ಪರಿಣಾಮವನ್ನು ಬೀರುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಸರಿಯಾದ ಪರಿಣಾಮ ಬೀರುವುದಿಲ್ಲ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ನಿಮ್ಮ ಎಲೆಕ್ಟ್ರೋ ಲೈಟ್ ಅಂಗಾಂಶವು ಅಸಮತೋಲನಗೊಂಡಿದ್ದರೆ ಅಥವಾ ವಯಸ್ಸಾದ ಕಾರಣ ದುರ್ಬಲ ಹಲ್ಲುಗಳಂತಹ ಸಮಸ್ಯೆ ಇದ್ದರೆ, ನೀವು ಜ್ಯೂಸ್ ಅನ್ನು ಸೇವಿಸಬಹುದು. ಇಲ್ಲದಿದ್ದರೆ ನೀವು ಯಾವಾಗಲೂ ಜ್ಯೂಸ್ ಬದಲಿಗೆ ಹಣ್ಣುಗಳನ್ನು ಅಗಿಡು ತಿನ್ನುವುದೇ ಒಳ್ಳೆಯದು. ಇದು ನಿಮಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ.
ರಾತ್ರಿಯ ಊಟದ ಜೊತೆಗೆ ಹಣ್ಣುಗಳನ್ನು ಸೇವಿಸುತ್ತಿದ್ದರೆ ಆ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ರಾತ್ರಿ ಹಣ್ಣು ಸೇವಿಸುವುದರಿಂದ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ
ಹಾಲಿನಲ್ಲಿ ಹಣ್ಣುಗಳನ್ನು ಬೆರೆಸಿ ತಿನ್ನುವುದರಿಂದ ಅದು ಆ್ಯಂಟಿ ಡಯಟ್ ಆಗುತ್ತದೆ. ಹಾಗಾಗಿ ಶೇಕ್ ಅಥವಾ ಇನ್ನಾವುದೇ ರೀತಿಯಲ್ಲಿ ಹಾಲಿನೊಂದಿಗೆ ಬೆರೆಸಿ ಹಣ್ಣುಗಳನ್ನು ತಿನ್ನಬಾರದು.