ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದ್ದ ಬಾಂಗ್ಲಾದೇಶ ನಂತರ ಪತನ ಕಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತದ ನಿರ್ಧಾರ ಪ್ರಾರಂಭದಲ್ಲಿ ತಪ್ಪು ಎನ್ನುವಂತೆ ಭಾಸವಾಗಿತ್ತು.ಆರಂಭದಲ್ಲಿ ಬಾಂಗ್ಲಾದೇಶದ ಪರ ಬ್ಯಾಟಿಂಗ್ ಇಳಿದ ಲಿಟನ್ ದಾಸ್ ಮತ್ತು ಮೆಹದಿ ಹಸನ್ ಅವರ ಉತ್ತಮ ಆರಂಭದಿಂದಾಗಿ 300ಕ್ಕೂ ಅಧಿಕ ರನ್ ಗಳಿಸುವ ಸೂಚನೆ ನೀಡಿತ್ತು.
Bangladesh are all out for 222!
Liton Das' phenomenal 121 provided more than half their total, while spinners Kuldeep Yadav (3/45) and Kedar Jadhav (2/41) did most of the damage for India.
Who's on top at the halfway stage?#INDvBAN LIVE 👇https://t.co/N0RVppXoLg#AsiaCup pic.twitter.com/UFBJE3flzy
— ICC (@ICC) September 28, 2018
ಬಾಂಗ್ಲಾದೇಶದ ಪರ ಲಿಟನ್ ದಾಸ್ ಒಬ್ಬರೇ 121 ರನ್ ಗಳಿಸುವ ಮೂಲಕ ಅಪಾಯಕಾರಿಯಾಗಿ ಪರಿಣಮಿಸಿದರು.ಆದರೆ ಭಾರತದ ಪರ ಕುಲದೀಪ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾದೇಶ ತಕ್ಷಣ ಕುಸಿತ ಕಂಡಿತು. ಯಾದವ್ ಬಾಂಗ್ಲಾದ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಇವರಿಗೆ ಸಾಥ್ ನೀಡಿದ ಕೇದಾರ್ ಜಾದವ್ ಕೂಡ ಎರಡು ವಿಕೆಟ್ ಕಬಳಿಸಿದರು.
It's a maiden ODI century for Liton Das in the Asia Cup final!
What a fabulous innings so far. #INDvBAN
FOLLOW LIVE👇👇https://t.co/N0RVppXoLg pic.twitter.com/mObXh7yp7b
— ICC (@ICC) September 28, 2018
ಒಂದು ಕಡೆ ಬಾಂಗ್ಲಾದೇಶದ ವಿಕೆಟ್ ಗಳು ಉರುಳುತ್ತಿದ್ದರೆ ಮತ್ತೊಂದು ಕಡೆ ಲಿಟನ್ ದಾಸ್ ಅವರು ಕೇವಲ 87 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.ಆ ಮೂಲಕ ಬಾಂಗ್ಲಾದೇಶದ ಮೂಕ್ಕಾಲು ಭಾಗದ ರನ್ ಅನ್ನು ಲಿಟನ್ ಒಬ್ಬರೇ ಗಳಿಸಿದರು,
ನಂತರ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ಬಾಂಗ್ಲಾದೇಶ 48.3 ಓವರ್ ಗಳಲ್ಲಿ 222 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.