IND vs SA 2nd T20: ಹರಿಣಗಳ ಬಗ್ಗುಬಡಿದ ಭಾರತಕ್ಕೆ 16 ರನ್ ಗಳ ಗೆಲುವು: ಭರ್ಜರಿ ಜಯದ ಜೊತೆ ಸರಣಿ ಕೈವಶ!

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಟೀಂ ಇಂಡಿಯಾ ಹರಿಣಗಳನ್ನು ಬ್ಯಾಟಿಂಗ್ ಮೂಲಕವೇ ಮೂಲೆಗುಂಪು ಮಾಡಿತ್ತು ಎನ್ನಬಹುದು. 

Written by - Bhavishya Shetty | Last Updated : Oct 2, 2022, 11:10 PM IST
    • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ
    • ಭಾರತದಲ್ಲಿ ಸೋಲು ಕಾಣದ ದ.ಆಫ್ರಿಕಾಗೆ ಸೋಲಿನ ರುಚಿ ತೋರಿಸಿದ ಭಾರತ
    • ಸರಣಿ ಕೈವಶ ಪಕ್ಕಾ ಮಾಡಿಕೊಂಡ ಟೀಂ ಇಂಡಿಯಾ
IND vs SA 2nd T20: ಹರಿಣಗಳ ಬಗ್ಗುಬಡಿದ ಭಾರತಕ್ಕೆ 16 ರನ್ ಗಳ ಗೆಲುವು: ಭರ್ಜರಿ ಜಯದ ಜೊತೆ ಸರಣಿ ಕೈವಶ! title=
IND vs SA 2nd T20

ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ ಲಭಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಬಾರಿಸಿತ್ತು. ಈ ಮೂಲಕ ನೂತನ ದಾಖಲೆಯನ್ನೂ ಬರೆದಿದೆ. 

ಇದನ್ನೂ ಓದಿ: ಟಿ20Iನಲ್ಲಿ ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ: ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ

ಇದರ ಜೊತೆಗೆ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದ ಟೀಂ ಇಂಡಿಯಾ ಸದ್ಯ ಸಿರೀಸ್ ಕೈವಶ ಮಾಡಿಕೊಂಡಿದೆ. ಮೂರನೇ ಪಂದ್ಯ ಇಂಧೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ  ಅಕ್ಟೋಬರ್ 4ರಂದು ನಡೆಯಲಿದೆ. ಈಗಾಗಲೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ ಆಸ್ಟ್ರೇಲಿಯಾ ಬಳಿಕ ಸೌತ್ ಆಫ್ರಿಕಾ ಸರಣಿಯನ್ನು ಪಕ್ಕಾ ಮಾಡಿಕೊಂಡಿದೆ.

ಟೀಂ ಇಂಡಿಯಾ ನೀಡಿದ ಗುರಿಯನ್ನು ಬೆನ್ನತ್ತಿದ್ದ ಸೌತ್ ಆಫ್ರಿಕಾ ತಂಡ ರನ್ ಕಲೆ ಹಾಕುವಲ್ಲಿ ಎಡವಿತ್ತು. ಹೀಗಾಗಿ ಓವರ್ ಅಂತ್ಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 221 ರನ್ ಪೇರಿಸಿ ಸೋಲನ್ನು ಅನುಭವಿಸಿದರು. ಈ ಮೂಲಕ ಇದುವರೆಗೆ ಭಾರತದಲ್ಲಿ ಸೋಲು ಕಾಣದ ಹರಿಣಗಳಿಗೆ ಇಂದು ಭಾರತ ಸೋಲಿನ ರುಚಿ ತೋರಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಟೀಂ ಇಂಡಿಯಾ ಹರಿಣಗಳನ್ನು ಬ್ಯಾಟಿಂಗ್ ಮೂಲಕವೇ ಮೂಲೆಗುಂಪು ಮಾಡಿತ್ತು ಎನ್ನಬಹುದು. 

ಇವಿಷ್ಟೇ ಅಲ್ಲದೆ, ಟೀಂ ಇಂಡಿಯಾ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿ ನೂತನ ದಾಖಲೆ ಬರೆದಿದೆ. ಐಸಿಸಿ ಟಿ20 ಅಂತರಾಷ್ಟ್ರೀಯದಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.   

ಇದನ್ನೂ ಓದಿ: IND vs SA 2nd T20: ಗುವಾಹಾಟಿಯಲ್ಲಿ ಲೈವ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದ ವಿಷಕಾರಿ ಹಾವು... ವಿಡಿಯೋ ನೋಡಿ

ಟೀಂ ಇಂಡಿಯಾದ ಪರ ಮತ್ತೆ ಅಬ್ಬರಿಸಿ ಸೂರ್ಯ ಕುಮಾರ್ ಯಾದವ್ 22 ಬಾಲ್ ಗೆ 66 ರನ್ ಬಾರಿಸಿ ಮತ್ತೊಮ್ಮೆ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು. ಇನ್ನುಳಿದಂತೆ ಕನ್ನಡಿಗ ಕೆ ಎಲ್ ರಾಹುಲ್ 28 ಬಾಲ್ ಗೆ 57 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ 37 ಬಾಲ್ ಗೆ 43 ರನ್, ವಿರಾಟ್ ಕೊಹ್ಲಿ ಅಜೇಯ 28 ಬಾಲ್ ಗೆ 49 ರನ್, ದಿನೇಶ್ ಕಾರ್ತಿಕ್ ಅಜೇಯ 7 ಬಾಲ್ ಗೆ 17 ರನ್ ಬಾರಿಸಿ ಟೀಂ ಇಂಡಿಯಾ 237 ರನ್ ಕಲೆ ಹಾಕುವಂತೆ ಮಾಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News