ಬೆಂಗಳೂರು: ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡ ಬಹುಮುಖ ಪ್ರತಿಭೆ ಅಂದ್ರೆ ಅದು ನಟ ಸೋನು ಸೂದ್. ಸೋನು ಸೂದ್ ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಭಾರತೀಯ ನಟ. ನಟನೆ ಅಷ್ಟೇ ಅಲ್ಲದೆ ನಿರ್ಮಾಪಕ ಮತ್ತು ಮಾಡೆಲ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೆಲವು ಕನ್ನಡ ಮತ್ತು ಪಂಜಾಬಿ ಚಿತ್ರಗಳಲ್ಲೂ ಕೂಡ ಸೋನು ಸೂದ್ ಕಾಣಿಸಿಕೊಂಡಿದ್ದಾರೆ.
ನಟ ಸೋನು ಸೂದ್ ತಮ್ಮ ತಂದೆ ಶಕ್ತಿ ಸಾಗರ್ ಅವರ ಹೆಸರಿನಲ್ಲಿ ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಎಂಬ ಚಲನಚಿತ್ರ ನಿರ್ಮಾಣ ಕಂಪೆನಿಯನ್ನು ಸ್ಥಾಪಿಸಿದರು. ಇಷ್ಟೆಲ್ಲಾ ಪ್ರತಿಭೆ ಹೊಂದಿರೋ ಜನಪ್ರಿಯ ನಟ ಸೋನು ಸೂದ್ ಇದೀಗ ಕರುನಾಡಿನಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ. ಅರೇ ಇದ್ಯಾಕಪ್ಪ ಕರುನಾಡನ್ನೇ ಆಯ್ಕೆ ಮಾಡ್ಕೊಂಡ್ರು ಅಂತ ನಿಮ್ಗೆ ಅನಿಸಬಹುದು. ಯೆಸ್ ಸ್ಯಾಂಡಲ್ವುಡ್ನಲ್ಲಿ ರೈತನಾಗಲು ರೆಡಿ ಆಗಿದ್ದಾರೆ. ಶ್ರೀಮಂತ ಅನ್ನೋ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದ್ದಾರೆ ನಟ ಸೋನು ಸೂದ್.
ಇದನ್ನೂ ಓದಿ- Ramya: ಮೋಹಕ ತಾರೆ ರಮ್ಯಾ ಮತ್ತೇ ಬಣ್ಣ ಹಚ್ಚೋದು ಕನ್ಫರ್ಮ್..!?
ಇತ್ತೀಚಿಗೆ ಶ್ರೀಮಂತ ಸಿನಿಮಾದ ಟೈಟಲ್ ಸಾಂಗ್ ಮತ್ತು ಫರ್ಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಸೋನು ಸೂದ್ ಬರೀ ಸಿನಿಮಾ ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಎಲ್ಲೇ ಜನ ಕಷ್ಟದಲ್ಲಿ ಇದ್ದಾರೆ ಅಂದ್ರೆ ಸಾಕು ಅಲ್ಲಿ ಸೋನು ಸೂದ್ ರೆಡಿ ಇರುತ್ತಾರೆ. ತಮ್ಮ ಕೈಯಲಲ್ಲಿ ಆದ ಸಹಾಯ ಮಾಡಿ ಜನಮನ ಗೆದ್ದ ನಾಯಕ ಇದೀಗ ರೈತನ ಪಾತ್ರದಲ್ಲಿ ಕಾಣಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ- ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..!
ಸೋನು ಸೂದ್ ಜುಲೈ 30, 1972ರಲ್ಲಿ ಪಂಜಾಬಿನ ಮೋಗದಲ್ಲಿ ಜನಿಸಿದರು. 1999ರಲ್ಲಿ, ಕಲ್ಲಾಜ್ಹಾಗರ್ ಮತ್ತು ನೆನ್ಜಿಂಜೈಲೆಯೊಂದಿಗೆ ತಮಿಳು ಭಾಷೆಯ ಚಲನಚಿತ್ರಗಳಿಗೆ ಸೂದ್ ಪರಿಚಯಿಸಲ್ಪಟ್ಟಿದರು. ನಂತರ 2000 ರಲ್ಲಿ ನಂತರ ಅವರು ತೆಲುಗು ಚಲನಚಿತ್ರ ಹ್ಯಾಂಡ್ಸ್ ಅಪ್! ಚಲನಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಮಜುನು ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಹಿಂದಿ ಭಾಷೆಯ ಶಹೀದ್-ಇ-ಅಜಮ್ನಲ್ಲಿ ಭಗತ್ ಸಿಂಗ್ ಆಗಿ ಅಭಿನಯಿಸಿದರು. ಮಣಿ ರತ್ನಂ ಅವರ ಯುವ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರ ಸಹೋದರರಾಗಿ ನಟಿಸಿದರು. ನಂತರ ಆಶಿಕ್ ಬನಯಾ ಆಪ್ನೆ ಎಂಬ ಚಿತ್ರದಲ್ಲಿ ಸೂದ್ ನಟಿಸಿ ಮೆಚ್ಚುಗೆ ಗಳಿಸಿದರು. ಹೀಗೆ ಸಾಲು ಸಾಲು ಸಿನಿಮಾಗಳ ನಂತರ ಇದೀಗ ಕನ್ನಡದ ಶ್ರೀಮಂತ ಸಿನಿಮಾದಲ್ಲಿ ಅನ್ನದಾತನ ಪಾತ್ರದಲ್ಲಿ ತೆರೆ ಮೇಲೆ ಮಿಂಚು ಹರಿಸಲು ಸಿದ್ಧವಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.